Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 11ಕ್ಕೆ ಮಧುಗಿರಿ ಬೊಮ್ಮರಸನಹಳ್ಳಿ ಗೇಟ್ ಬಳಿ 16 ಅಡಿ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ತಾಲೂಕಿನ ದೊಡ್ಡೇರಿ ಹೋಬಳಿಯ ಚಂಬೇನಹಳ್ಳಿ ಸಮೀಪದ ಬೊಮ್ಮರಸನಹಳ್ಳಿ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ 16 ಅಡಿ ಎತ್ತರದ ಭವ್ಯ ಏಕಶಿಲಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವವು ಮೇ 10 ಮತ್ತು 11ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಮತ್ತು ಮೈಸೂರಿನ ಶ್ರೀ ಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:
ಮೇ 10 (ಸಂಜೆ 6ರಿಂದ): ಕುಲದೇವತಾ ಪ್ರಾರ್ಥನೆ
, ಗುರುವಂದನೆ, ಗಣಪತಿ ಪೂಜೆ ಹಾಗೂ ವಿವಿಧ ಹೋಮ-ಹವನಗಳು ನಡೆಯಲಿದ್ದು, ಮಹಾಮಂಗಳಾರತಿಯೊಂದಿಗೆ ಮೊದಲ ದಿನದ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಮೇ 11 (ಬೆಳಿಗ್ಗೆ 11ಕ್ಕೆ): ನೂತನ ದೇವಾಲಯದ ಕಟ್ಟಡ ಉದ್ಘಾಟನೆ ಮತ್ತು ಹದಿನಾರು ಅಡಿಯ ಏಕಶಿಲಾ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್ ಹಾಗೂ ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಬಸವ ರಮಾನಂದ ಸ್ವಾಮೀಜಿ ವಹಿಸಲಿದ್ದಾರೆ.

ಉದ್ಘಾಟನೆ: ಮಾಜಿ ಸಚಿವರು ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು ದೇವಾಲಯದ ಕಟ್ಟಡ ಉದ್ಘಾಟಿಸಲಿರುವರು.
ಲೋಕಾರ್ಪಣೆ: ಹಿಂದೂಪುರ ಸಂಸದ ಬಿ.ಕೆ. ಪಾರ್ಥಸಾರಥಿ ಅವರು ಹನುಮನ ಭವ್ಯ ಮೂರ್ತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವಿವಿಧ ಉದ್ಘಾಟನೆಗಳು: ಮಡಕಶಿರಾ ಶಾಸಕ ಎಂ.ಎಸ್. ರಾಜು ಅವರು
'ಶ್ರೀ ಪದ್ಮಾವತಿ ಪ್ಯಾಲೇಸ್' ಕಟ್ಟಡ ಉದ್ಘಾಟಿಸಿದರೆ, ವಿಧಾನ ಪರಿಷತ್ ಸದಸ್ಯ ಎಂ. ನಾಗರಾಜ್ ಯಾದವ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಗೌರವ ಸಮರ್ಪಣೆ ಮತ್ತು ಸಮಾಜ ಸೇವೆ:
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಡಾ. ಎನ್. ರಘುವೀರಾ ರೆಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯ ಎಂ. ಚಿದಾನಂದ ಗೌಡ ಅವರು ದಾನಿಗಳನ್ನು ಸನ್ಮಾನಿಸಲಿದ್ದಾರೆ.
ವಾಸ್ತುಶಿಲ್ಪಿಗಳು ಮತ್ತು ಶಿಲ್ಪಿಗಳನ್ನು ಮಾಜಿ ಎಂಎಲ್‌ಸಿ ಗುಂಡುಮಲ್ಲ ತಿಪ್ಪೇಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರು ಗೌರವಿಸಲಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಬಿ. ಶಿವಲಿಂಗಪ್ಪ ಅವರು ಪೋಷಕರನ್ನು ಸನ್ಮಾನಿಸಲಿದ್ದಾರೆ. ಅಲ್ಲದೆ
, ಸತ್ಯಭಾಮ ಸಿ. ಅವರು ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಿದ್ದು, ಬಿ.ವಿ ರಾಜೇಶ್ವರಿ ಅವರು ಬಡ ರೋಗಿಗಳಿಗೆ ಆರ್ಥಿಕ ನೆರವು ನೀಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ - ಸಂಪೂರ್ಣ ರಾಮಾಯಣ:
ಮೇ 11ರ ಸೋಮವಾರ ರಾತ್ರಿ 8 ಗಂಟೆಗೆ ತುಮಕೂರಿನ ಖ್ಯಾತ ಕಲಾವಿದರಿಂದ "ಸಂಪೂರ್ಣ ರಾಮಾಯಣ" ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಸಮಾಜದಲ್ಲಿ ಶಾಂತಿ ಮತ್ತು ಭಕ್ತಿಭಾವ ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಬಿ. ಚಿಕ್ಕಪ್ಪಯ್ಯ ತಿಳಿಸಿದ್ದಾರೆ. ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ನಾಟಕ ವೀಕ್ಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST