ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಜನ್ಮದಿನ ಹಾಗೂ ಜನತಾದಳ (ಜಾತ್ಯತೀತ) ಪಕ್ಷದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ 'ಜನತಾದಳ ಪ್ರೀಮಿಯರ್‌ಲೀಗ್' (JPL-2026) ರಾಜ್ಯಮಟ್ಟದ ಕ್ರಿಕೆಟ್‌ಪಂದ್ಯಾವಳಿಗೆ ಅದ್ಧೂರಿ ಚಾಲನೆ ದೊರೆತಿದೆ.ಸೋಮವಾರ ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿಯಾದ ಜೆ.ಪಿ. ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪಂದ್ಯಾವಳಿಯ ಆಕರ್ಷಕ ಟ್ರೋಫಿ, ವಿವಿಧ ತಂಡಗಳ ಲೋಗೋ ಹಾಗೂ ಜೆರ್ಸಿಯನ್ನು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ಪಂದ್ಯಾವಳಿಯ ವಿವರಗಳು-
ದಿನಾಂಕ: ಮೇ 15, 16 ಮತ್ತು 17, 2026.
ಉದ್ದೇಶ: ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬ ಹಾಗೂ ಪಕ್ಷದ 25 ವರ್ಷಗಳ ಸಾರ್ಥಕ ಹಾದಿಯ ಸಂಭ್ರಮಾಚರಣೆ.
ವ್ಯಾಪ್ತಿ: ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ.
ಈ ಸಮಾರಂಭದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ಹೆಚ್.ಎಸ್, ಯುವ ಜನತಾದಳ ಮುಖಂಡ ಪ್ರವೀಣ್ ಸೇರಿದಂತೆ ಮತ್ತಿತರು ಗಣ್ಯರು ಪಕ್ಷದ ಕಾರ್ಯಕರ್ತರು ಇದ್ದರು.
"ಪಕ್ಷದ ರಜತ ಮಹೋತ್ಸವ ಹಾಗೂ ದೊಡ್ಡವರ ಹುಟ್ಟುಹಬ್ಬದ ಸಂದರ್ಭದಲ್ಲಿ ಯುವಕರನ್ನು ಒಗ್ಗೂಡಿಸಲು ಈ ಕ್ರಿಕೆಟ್ ಪಂದ್ಯಾವಳಿ ಒಂದು ಉತ್ತಮ ವೇದಿಕೆಯಾಗಲಿದೆ," ಎಂದು ನಾಯಕರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು ಮತ್ತು ಕ್ರೀಡಾ ಅಭಿಮಾನಿಗಳಲ್ಲಿ ಈ 'ಜೆಪಿಎಲ್' ಪಂದ್ಯಾವಳಿಯು ಈಗಾಗಲೇ ಭಾರಿ ಕುತೂಹಲ ಮೂಡಿಸಿದ್ದು, ಮೇ 15ರಿಂದ ಮೈದಾನದಲ್ಲಿ ಕ್ರಿಕೆಟ್ ಜ್ವರ ಏರಲಿದೆ.



