ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನಕ್ಕೊಳಪಟ್ಟ ಚಿತ್ರದುರ್ಗದ ‘ನಿಯಲಿಟ್' ವಿಸ್ತರಣಾ ಕೇಂದ್ರದಲ್ಲಿ (NIELIT Extention Centre Chitradurga) ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ಭರ್ತಿಗಾಗಿ ಜುಲೈ 21ರಂದು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯಲ್ಲಿರುವ ಜಿಟಿಟಿಸಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಸೀನಿಯರ್ ಫ್ಯಾಕಲ್ಟಿ-1 ಹುದ್ದೆ) ಮತ್ತು ಫ್ಯಾಕಲ್ಟಿ -1 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು 2026ರ ಜುಲೈ 21 ರಂದು ಬೆಳಿಗ್ಗೆ 9 ಗಂಟೆಯಿಂದ ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯ ಜಿಟಿಟಿಸಿ ಕಟ್ಟಡದಲ್ಲಿರುವ ನಿಯಲಿಟ್ ಕೇಂದ್ರದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ಸಂದರ್ಶನಕ್ಕೆ ಬರುವ ಮುನ್ನ ಹುದ್ದೆಗಳ ವಿವರವಾದ ಅರ್ಹತಾ ಮಾನದಂಡಗಳು ಮತ್ತು ನಿಯಮ ನಿಬಂಧನೆಗಳಿಗಾಗಿ ‘NIELIT Calicut' ವೆಬ್‍ಸೈಟ್‍ನ ‘Recruitment’ ವಿಭಾಗಕ್ಕೆ ಭೇಟಿ ನೀಡಲು ಕೋರಲಾಗಿದೆ ಎಂದು ಆಡಳಿತಾಧಿಕಾರಿ ಡಾ. ರಾಣಾ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



