ಚಂದ್ರವಳ್ಳಿ ನ್ಯೂಸ್ ಹಿರಿಯೂರು
ದಾದಾ ಸಾಹೇಬ್ ಕಾನ್ಸಿರಾಂ ಅವರ 20ನೇಯ ಪುಣ್ಯತಿಥಿ ಕಾರ್ಯಕ್ರಮವನ್ನು ಮೇಣದ ಬತ್ತಿಯನ್ನು ಹಚ್ಚುವ ಮೂಲಕ ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷ ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಿರಿಯೂರಿನ ಬಾಬಾ ಸಾಹೇಬ್ ಡಾ: ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಬಳಿ ಆಚರಣೆ ಮಾಡಲಾಯಿತು.
ನಂತರ ಮಾತಾನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಅ ಪಕ್ಷಗಳ ವಿರುದ್ಧ ದಲಿತ ಹಿಂದುಳಿದ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿ ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಅಧಿಕಾರ ಹಿಡಿದ ಬಹುಜನ ಸಮಾಜ ಪಕ್ಷದ ಹೋರಾಟ ಹಿಂದೆ ದಾದಾ ಸಾಹೇಬ್ ಕಾನ್ಶಿರಾಂ ಅವರ ಶ್ರಮವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ತಿಮ್ಮರಾಜು, ಮಾಜಿ ಸೈನಿಕರಾದ ಖಂಡೆನಹಳ್ಳಿ ಯೋಗೇಶ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾದ ಬೋರನಕುಂಟೆ ಕರಿಯಪ್ಪ, ಜೆಡಿಎಸ್ ಮುಖಂಡರಾದ ಹನುಮಂತಪ್ಪ, ಬೇತೂರು ಶಿವು ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಮುಖಂಡರಾದ ರಂಗಸ್ವಾಮಿ ಹುಚ್ಚವ್ವನಹಳ್ಳಿ, ಕೆ.ಪಿ.ಶ್ರೀನಿವಾಸ್, ಉಪ್ಪಳಗೆರೆ ಮಹಾಲಿಂಗಪ್ಪ, ಈಶ್ವರಗೆರೆ ರಾಘವೇಂದ್ರ, ಕಲಾವಿದ ಕೂನಿಕೆರೆ ಮಾರುತೇಶ್, ರಾಜು ದೇವರಕೊಟ್ಟ, ರಾಘವೇಂದ್ರ, ದೊರೇಶ್, ಮುಂತಾದವರು ಭಾಗವಹಿಸಿದ್ದರು.



