Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೆರೆಗಳಿಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ –ಕಾಟನಾಯಕನಹಳ್ಳಿ ಮಹೇಶ್ ಕುಮಾರ್ ಎಚ್ಚರಿಕೆ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಚಿತ್ರದುರ್ಗ ಜಿಲ್ಲೆಯ ಅತ್ಯಂತ ಬರಪೀಡಿತ ಭಾಗವಾದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯಲ್ಲಿ ತೀವ್ರ ನೀರಿನ ಕ್ಷಾಮ ಉಂಟಾಗಿದ್ದು
, ರೈತರ ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಳು ನೀರಿಲ್ಲದೆ ಸಂಪೂರ್ಣ ಒಣಗಿ ಹೋಗುತ್ತಿವೆ" ಎಂದು ಬೆಳೆ ಸಮೀಕ್ಷೆಗಾರರ ಸಂಘದ ಜಿಲ್ಲಾಧ್ಯಕ್ಷ ಕಾಟನಾಯಕನಹಳ್ಳಿ ಮಹೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲ್ವಳ್ಳಿ ಭಾಗದ ಜವನಗೊಂಡನಹಳ್ಳಿ ಹೋಬಳಿ ಸೇರಿದಂತೆ ಇಡೀ ತಾಲೂಕಿನ ರೈತರ ಬದುಕು ನೀರಿನ ಅಭಾವದಿಂದಾಗಿ ಬೀದಿಗೆ ಬೀಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಹೋಬಳಿಯಲ್ಲಿ ನೀರಿನ ತೀವ್ರ ಹಾಹಾಕಾರ: ಹೋಬಳಿ ವ್ಯಾಪ್ತಿಯ ಉಡುವಳ್ಳಿ, ಗೌಡನಹಳ್ಳಿ, ದಿಂಡಾವರ, ಯಲ್ಲದಕೆರೆ, ಜವನಗೊಂಡನಹಳ್ಳಿ, ಕಾಟನಾಯಕನಹಳ್ಳಿ, ಬಗ್ಗನಾಡು, ವಡ್ಡನಹಳ್ಳಿ ಸೇರಿದಂತೆ ಪ್ರಮುಖ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯ ಸಂಪೂರ್ಣವಾಗಿ ಬತ್ತಿ ಹೋಗಿವೆ. 100ಕ್ಕೂ ಹೆಚ್ಚು ಕುಟುಂಬಗಳಿರುವ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸಾಲ ಮಾಡಿ ಬೋರ್‌ವೆಲ್ ಕೊರೆಸಿದರೂ ಸಿಗದ ನೀರು: ಹೋಬಳಿಯ ರೈತರು ಬೆಳೆದಿರುವ ಅಡಿಕೆ, ತೆಂಗು, ದಾಳಿಂಬೆ, ಮಾವು, ರಾಗಿ, ನವಣೆ ಹಾಗೂ ಹತ್ತಿ ಬೆಳೆಗಳು ಬಿಸಿಲ ಬೇಗೆಗೆ ಕರಕಲಾಗುತ್ತಿವೆ. ರೈತರು ತಮ್ಮ ಜಮೀನು ಮತ್ತು ಬೆಳೆಗಳನ್ನು ಉಳಿಸಿಕೊಳ್ಳಲು ಬ್ಯಾಂಕ್ ಸಾಲ, ಚಿನ್ನ-ಬೆಳ್ಳಿ ಅಡವಿಟ್ಟು, ಕೈಸಾಲ ಮಾಡಿ 1000 ಅಡಿಗಳಷ್ಟು ಆಳಕ್ಕೆ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಕೆಲ ರೈತರು ಸಾವಿರಾರು ರೂಪಾಯಿ ವ್ಯಯಿಸಿ ಟ್ಯಾಂಕರ್ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಒಂದು ಮಳೆಯಾಗಿ ಕೆರೆಗಳಿಗೆ ನೀರು ಬಂದಿದ್ದರೆ ನಮ್ಮ ತೋಟಗಳನ್ನು ಉಳಿಸಿಕೊಳ್ಳಬಹುದಿತ್ತು ಎಂಬ ಆಸೆಯಲ್ಲಿ ರೈತರಿದ್ದಾರೆ.

244 ಕೋಟಿ ಯೋಜನೆ ವಿಳಂಬ ಹಾಗೂ ಭದ್ರಾ ನೀರಿಗೆ ಕುತ್ತು: ಜೆ.ಜೆ.ಹಳ್ಳಿ ಭಾಗದ 244 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಈವರೆಗೂ ಟೆಂಡರ್ ಕರೆಯದೆ ಶಾಸಕರು ಹಾಗೂ ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಈ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ. ಇದರ ಜೊತೆಗೆ ಭದ್ರಾ ಜಲಾಶಯದಿಂದ ಸುಮಾರು 1 ಟಿ.ಎಮ್.ಸಿ ನೀರನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಲು ಹಿಂಬಾಗಿಲಿನಿಂದ ಸ್ಕೆಚ್ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಉಗ್ರ ಹೋರಾಟದ ಎಚ್ಚರಿಕೆ: ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಭದ್ರಾ ನೀರು ಹರಿಯುತ್ತದೆ ಎಂಬುದು ಸ್ವಾಗತಾರ್ಹ. ಆದರೆ ಅದಕ್ಕೂ ಮೊದಲು ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಿ, ರೈತರ ಬೆಳೆಗಳನ್ನು ಆಪತ್ತಿನಿಂದ ಉಳಿಸಬೇಕು. ಒಂದು ವೇಳೆ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದರೆ ಕಲ್ವಳ್ಳಿ ಭಾಗದ ರೈತರು ಹಾಗೂ ಬೆಳೆ ಸಮೀಕ್ಷೆಗಾರರ ಸಂಘದ ವತಿಯಿಂದ ಬೀದಿಗಿಳಿದು ಉಗ್ರ ಹೋರಾಟ ರೂಪಿಸುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ ಬಂದ್ ತಾತ್ಕಾಲಿಕ ಮುಂದೂಡಿಕೆ-ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ದೇವಸ್ಥಾನ ಲೋಕಾರ್ಪಣೆ ಹಾಗೂ ಮಲ್ಟಿಜಿಮ್ ಉದ್ಘಾಟನೆಚಿತ್ರದುರ್ಗ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಕಾಟಿಹಳ್ಳಿ ಕರಿಯಪ್ಪ ಅವಿರೋಧ ಆಯ್ಕೆ ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರಗೆ ಮತ್ತೆ ಇಡಿ ಶಾಕ್, ವಿಚಾರಣೆಗೆ ಹಾಜರ್‘ಭಾರತ್ ಜೋಡೋ ಯಾತ್ರೆ’ಗೆ ೪ ವರ್ಷ: ಸಮಗ್ರ ಆಡಳಿತ ಮಾದರಿಗೆ ಯಾತ್ರೆಯೇ ಸ್ಫೂರ್ತಿ –ಸಿಎಂ ಡಿ.ಕೆ. ಶಿವಕುಮಾರ್ಭವಿಷ್ಯದ ತಂತ್ರಜ್ಞಾನಕ್ಕೆ ಬೆಂಗಳೂರು ಹೆಬ್ಬಾಗಿಲು -ಸಿಎಂ ಡಿ.ಕೆ. ಶಿವಕುಮಾರ್ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಭಾರತದ ಪ್ರಗತಿ ಬಿಚ್ಚಿಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೆಚ್ಚಿದ್ದ ನಿಂಗಮ್ಮನ ಅಂಗಡಿ ತೆರವಿಗೆ ಜಿಬಿಎ ನೋಟಿಸ್: ಆರ್. ಅಶೋಕ್ ಕಿಡಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸಾತ್ವಿಕ್-ಚಿರಾಗ್ ಜೋಡಿಗೆ ಅಭಿನಂದನೆಗಳ ಮಹಾಪೂರ