LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ: 5 ವರ್ಷ ವಯೋಮಿತಿ ಸಡಿಲಿಕೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು  2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್
'' ಮತ್ತು ಗ್ರೂಪ್ 'ಬಿ' ವೃಂದದ ಒಟ್ಟು 319 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಬಿಗ್ ರಿಲೀಫ್ ನೀಡಿದೆ.

ಸರ್ಕಾರಿ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ ಹೆಚ್ಚುವರಿಯಾಗಿ 5 ವರ್ಷಗಳ ಸಡಿಲಿಕೆಯನ್ನು ಅಳವಡಿಸಿಕೊಂಡು ಪರಿಷ್ಕೃತ ವಯೋಮಿತಿಯ ವಿವರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. 

ಆಯೋಗವು ದಿನಾಂಕ: 31-07-2026 ರಂದು ಹೊರಡಿಸಿದ ಅಧಿಸೂಚನೆಯಂತೆ ಒಟ್ಟು 319 ಹುದ್ದೆಗಳ (ಉಳಿಕೆ ಮೂಲ ವೃಂದದ 297 + ಹೈದ್ರಾಬಾದ್-ಕರ್ನಾಟಕ ವೃಂದದ 22 ಹುದ್ದೆಗಳು) ಭರ್ತಿಗೆ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997ರ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025, ದಿನಾಂಕ: 29-01-2026 ರನ್ವಯ ಹೆಚ್ಚುವರಿಯಾಗಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಿ ಸರ್ಕಾರವು ಪ್ರಸ್ತಾವನೆ ಸಲ್ಲಿಸಿತ್ತು. ಆಯೋಗವು ಈ ಪ್ರಸ್ತಾವನೆಯನ್ನು ಅಳವಡಿಸಿಕೊಂಡು ಪ್ರಸ್ತುತ ಅಧಿಸೂಚನೆಯಲ್ಲಿ ಪರಿಷ್ಕೃತ ವಯೋಮಿತಿಯನ್ನು ನಿಗದಿಪಡಿಸಿದೆ. 

ಪರಿಷ್ಕೃತ ವಯೋಮಿತಿಯ ವಿವರಗಳು (ಹೆಚ್ಚುವರಿ 5 ವರ್ಷ ಸಡಿಲಿಕೆಯ ನಂತರ):
ಕನಿಷ್ಠ ವಯೋಮಿತಿ: ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷಗಳು ಪೂರ್ಣಗೊಂಡಿರಬೇಕು. 

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ:‌ನಿಯಮಾನುಸಾರ ಗರಿಷ್ಠ ವಯೋಮಿತಿ 35 ವರ್ಷಗಳಿದ್ದದ್ದು, ಪ್ರಸ್ತುತ 5 ವರ್ಷಗಳ ಸಡಿಲಿಕೆಯೊಂದಿಗೆ 40 ವರ್ಷಗಳಿಗೆ ಹೆಚ್ಚಳವಾಗಿದೆ. 

ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ಈ ಮೊದಲು ಗರಿಷ್ಠ ವಯೋಮಿತಿ 38 ವರ್ಷಗಳಿದ್ದದ್ದು, ಪ್ರಸ್ತುತ 43 ವರ್ಷಗಳಿಗೆ ಹೆಚ್ಚಳವಾಗಿದೆ. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ: ಈ ಮೊದಲು ಗರಿಷ್ಠ ವಯೋಮಿತಿ 40 ವರ್ಷಗಳಿದ್ದದ್ದು, ಪ್ರಸ್ತುತ 45 ವರ್ಷಗಳಿಗೆ ಹೆಚ್ಚಳವಾಗಿದೆ. 

ಈ ಪರಿಷ್ಕೃತ ವಯೋಮಿತಿ ಸೌಲಭ್ಯವು ರಾಜ್ಯದ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಗೆ ಹಾಜರಾಗಲು ಹೆಚ್ಚಿನ ಅವಕಾಶ ಕಲ್ಪಿಸಲಿದ್ದು, ಅರ್ಹ ಅಭ್ಯರ್ಥಿಗಳು ನಿಯಮಾನುಸಾರ ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಆಗಸ್ಟ್ 16, 17ರ ಎರಡು ದಿನಗಳ ರಾಜ್ಯ ಪ್ರವಾಸಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆ: ಲೋಕಸಭೆಯಲ್ಲಿ ಶೇ 19, ರಾಜ್ಯಸಭೆಯಲ್ಲಿ ಶೇ 39 ಉತ್ಪಾದಕತೆ ದಾಖಲುಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ: ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ, ಜನಜೀವನ ಸಹಜಶಾಸನಸಭೆ ಕಾಂಗ್ರೆಸ್‌ಅಭ್ಯರ್ಥಿಗಳ ಸ್ಪರ್ಧೆ: ಜಿ.ಎಸ್. ಪಾಟೀಲ್, ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆಗುಟ್ಕಾ, ಪಾನ್ ಮಸಾಲೆ ನಿಷೇಧ: ಅಡಕೆ ಬೆಳೆಗಾರರಿಗೆ, ಸಹಕಾರ ಸಂಘಗಳಿಗೆ ತೀವ್ರ ಆಘಾತಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಅಧಿವೇಶನ ಆರಂಭ: ಸಿದ್ದರಾಮಯ್ಯ ಸೇರಿ ಹಲವು ಶಾಸಕರು ಗೈರು, ಅಸಮಾಧಾನದ ಹೊಗೆ?ತಮಿಳುನಾಡಿನ ದೋಷಪೂರಿತ ಲೆಕ್ಕಾಚಾರಕ್ಕೆ ಕರ್ನಾಟಕ ಆಕ್ಷೇಪ, ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆಬಿಸಿಯೂಟ ಯೋಜನೆಗೆ 'ಚೆನ್ನಮ್ಮ' ಹೆಸರಿಡಿ: ಅಗಲಿದ ಗಣ್ಯರಿಗೆ ಭಾವಪೂರ್ಣ ಸಂತಾಪಖರ್ಗೆ ರ‍್ಯಾಲಿ ನಡೆದ ಮೈದಾನ 'ಶುದ್ಧೀಕರಣ': ರಾಜಕೀಯ ಕಾಳಗ ತೀವ್ರಯುವತಿ ಸಿರಿಲಕ್ಷ್ಮಿ ಕಣ್ಮರೆ: ಪತ್ತಗೆ ಮನವಿ