LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಾರ್ಜ್ ತೆಗೆದುಕೊಂಡ ಮೊದಲ ದಿನವೇ ಡಿಕೆಶಿಗೆ ಕೃಷ್ಣ ಬೈರೇಗೌಡರ ಪರೋಕ್ಷ ಚಾಟಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕೃಷ್ಣ ಬೈರೇಗೌಡರು ನಡೆಸಿದ ಆಂತರಿಕ ಸಭೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೃಷ್ಣ ಬೈರೇಗೌಡರ ನಡೆ ಸಿದ್ದರಾಮಯ್ಯ ಸರ್ಕಾರದೊಳಗಿನ ಆಂತರಿಕ ಅಸಮಾಧಾನವನ್ನು ಬಹಿರಂಗಪಡಿಸಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಆರ್. ಅಶೋಕ್, ನಿಕಟಪೂರ್ವ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೂರು ವರ್ಷಗಳ ಆಡಳಿತ ವೈಫಲ್ಯವನ್ನು ಅವರದೇ ಪಕ್ಷದ ಸಚಿವರು ಬಟಾಬಯಲು ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

​ಬೆಂಗಳೂರಿನ ರಸ್ತೆಗಳ ದುಸ್ಥಿತಿಗೆ ಮತ್ತು ಕಳಪೆ ಕಾಮಗಾರಿಗಳಿಗೆ ಕೃಷ್ಣ ಬೈರೇಗೌಡರು ಇಲಾಖೆಯ ಆಂತರಿಕ ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವುದನ್ನು ಉಲ್ಲೇಖಿಸಿದ ಆರ್. ಅಶೋಕ್, ಇದು ಬೇರೆ ಯಾರದ್ದೋ ವಿರುದ್ಧವಲ್ಲ, ನೇರವಾಗಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೇ ಆಗಿರುವುದು ಸ್ಪಷ್ಟ ಎಂದಿದ್ದಾರೆ.

​"ಕಳೆದ ಮೂರು ವರ್ಷಗಳಿಂದ ಬೆಂಗಳೂರನ್ನು ಉದ್ಧಾರ ಮಾಡುತ್ತಿದ್ದೇವೆ, ರಸ್ತೆಗುಂಡಿಗಳನ್ನು ಮುಚ್ಚಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಡೋಲು ಬಾರಿಸಿಕೊಳ್ಳುತ್ತಿದ್ದವರ ಅಸಲಿ ಮುಖವಾಡವನ್ನು ಈಗ ಅವರದೇ ಪಕ್ಷದ ಸಚಿವರು ಸಾರ್ವಜನಿಕವಾಗಿ ಕಳಚಿ ಬಿಸಾಡಿದ್ದಾರೆ!" ಎಂದು ಅಶೋಕ್ ಕಿಡಿಕಾರಿದ್ದಾರೆ.

​​ಟ್ವೀಟ್ ಮೂಲಕ ಮುಖ್ಯಮಂತ್ರಿಯವರನ್ನು ನೇರವಾಗಿ ಪ್ರಶ್ನಿಸಿರುವ ಆರ್. ಅಶೋಕ್, ಈ ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

​ಚಿನ್ನದ ಗುಂಡಿಗಳ ಹಗಲು ದರೋಡೆ: ರಸ್ತೆಗುಂಡಿಗಳನ್ನು ಕಾಸು ಮಾಡುವ ಚಿನ್ನದ ಗುಂಡಿಗಳನ್ನಾಗಿ ಮಾಡಿಕೊಂಡಿದ್ದ ಹಗಲು ದರೋಡೆಯನ್ನು ಕೃಷ್ಣ ಬೈರೇಗೌಡರು ರಾಜ್ಯದ ಮುಂದೆ ತೆರೆದಿಟ್ಟಿದ್ದಾರೆ. ಇದಕ್ಕೆ ಉತ್ತರಿಸಬೇಕಾದವರು ಅಧಿಕಾರಿಗಳಲ್ಲ, ನೇರವಾಗಿ ಡಿ.ಕೆ. ಶಿವಕುಮಾರ್ ಅವರೇ.

​ಬ್ರಾಂಡ್ ಬೆಂಗಳೂರು ಹಗರಣ: 'ಬ್ರಾಂಡ್ ಬೆಂಗಳೂರು' ಹೆಸರಿನಲ್ಲಿ ನಡೆದ ರೀಲ್ಸ್ ನಾಟಕಗಳು ಮತ್ತು ಇದಕ್ಕಾಗಿ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಹಣ ಎಲ್ಲಿಗೆ ಹೋಯಿತು?

​ಕಮಿಷನ್ ದಂಧೆ: ಕಮಿಷನ್ ದಂಧೆಯ ಮರೆಯಲ್ಲಿ ಬೆಂಗಳೂರಿನ ರಸ್ತೆಗಳನ್ನು ಮೃತ್ಯುಕೂಪ ಮಾಡಿದ ಪಾಪ ಯಾರದ್ದು?

​"ಇನ್ನು ಮುಂದೆ ಅಧಿಕಾರಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೃಷ್ಣ ಬೈರೇಗೌಡರ ಈ ಪರೋಕ್ಷ ಟಾಂಗ್‌ಗೆ ಮತ್ತು ಬೆಂಗಳೂರಿನ ಜನತೆಗೆ ಡಿ.ಕೆ. ಶಿವಕುಮಾರ್ ಅವರೇ ನೇರ ಉತ್ತರ ನೀಡಬೇಕು," ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

​ಕೃಷ್ಣ ಬೈರೇಗೌಡರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು, ಈಗ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಪಕ್ಷಗಳ ಕೈಗೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು