Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಟಾರ್ಟ್ಅಪ್ ಇಂಡಿಯಾ ನವಯುಗದ ನಾವೀನ್ಯತೆ, ಉದ್ಯಮಶೀಲತೆಗೆ ನಾಂದಿ ಹಾಡಿದೆ-ಕುಮಾರಸ್ವಾಮಿ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ 10 ವರ್ಷಗಳಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಭಾರತದಲ್ಲಿ ನವಯುಗದ ನಾವೀನ್ಯತೆ, ಉದ್ಯಮಶೀಲತೆ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಿದೆ. ಅಲ್ಲದೆ; ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಕ್ಕೆ ಅಗ್ರಮನ್ನಣೆ ನೀಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು 2 ಲಕ್ಷಕ್ಕೂ ಹೆಚ್ಚು ಡಿಪಿಐಐಟಿ ಮಾನ್ಯತೆ ಪಡೆದ ಸ್ಟಾರ್ಟ್ಅಪ್‌ಗಳ ಉದಯಕ್ಕೆ ಸಾಕ್ಷಿಯಾಗಿದೆ. ಅವುಗಳಲ್ಲಿ ಸುಮಾರು ಅರ್ಧದಷ್ಟು 2-3ನೇ ಹಂತದ ನಗರಗಳಿಂದ ಹೊರಹೊಮ್ಮಿದ್ದು, ನಾವೀನ್ಯತೆ ಮಹಾನಗರಗಳಿಗೆ ಮಾತ್ರ ಸೀಮಿತ ಎಂಬ ಪುರಾತನ ಸಂಕಥನವನ್ನು ತೊಡೆದುಹಾಕಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈಗವರೆಗೆ 15 ಲಕ್ಷ ಕೋಟಿ ಖಾಸಗಿ ನಿಧಿ ಕ್ರೋಢೀಕರಿಸಲಾಗಿದ್ದು, 21 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗಿದೆ, 63 ಪ್ರಮುಖ ನಿಯಂತ್ರಕ ಸುಧಾರಣೆಗಳು ಮತ್ತು ಜಾಗತಿಕವಾಗಿ 3ನೇ ಅತಿದೊಡ್ಡ ಸ್ಟಾರ್ಟ್ಅಪ್ ಪೂರಕ ವ್ಯವಸ್ಥೆಯೊಂದಿಗೆ ಭಾರತದ ಸ್ಟಾರ್ಟ್ಅಪ್ ಶಕ್ತಿಯಾಗಿ ಅವತರಿಸಿದೆ.

ಇದು ಕೇವಲ ನೀತಿ ಒಂದರ ಯಶಸ್ಸಲ್ಲ, ಇದು ಭಾರತದ ಸಶಕ್ತ ಮತ್ತು ಅನಿರ್ಭರತೆಯ ಪರಿವರ್ತನಾತ್ಮಕ ಹೆಜ್ಜೆಯಾಗಿದೆ. ಆತ್ಮವಿಶ್ವಾಸದ ಹೊಸ ಪೀಳಿಗೆಯು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು, ನಾವೀನ್ಯತೆಯ ಮೂಲಕ ಬಹುದೊಡ್ಡ ಕೊಡುಗೆ ನೀಡುತ್ತಿರುವುದು ಸ್ವಾಗತಾರ್ಹ.


ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವನಾಗಿ ನಮ್ಮ ಪ್ರಮುಖ ವಲಯಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಈ ಉದ್ಯಮಶೀಲತಾ ಮನೋಭಾವವನ್ನು ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.

ನಮ್ಮೆಲ್ಲಾ ನವೋದ್ಯಮಿಗಳಿಗೆ ಅಭಿನಂದನೆಗಳು ಮತ್ತು ಈ ಪರಿವರ್ತನಾತ್ಮಕ ವ್ಯವಸ್ಥೆಗೆ ಪ್ರೇರಕ ಶಕ್ತಿಯಾಗಿರುವ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಭವಿಷ್ಯದ ದಶಕವು ಭಾರತೀಯ ನಾವೀನ್ಯತೆಯ ಯುಗ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾರ್ವತ್ರಿಕ ಚುನಾವಣೆ ಮೀರಿಸಿದ ಜಿಲ್ಲಾ ಗೊಲ್ಲರ ಸಂಘದ ಸಮರ: ‘ಕುರುಡು ಕಾಂಚಾಣ’ ಸದ್ದು, ಘಟಾನುಘಟಿಗಳ ಜಿದ್ದಾಜಿದ್ದಿ!ಹಿರಿಯೂರು ಉಪಚುನಾವಣೆ: ಶೋಕಿ ನಾಯಕರಿಗೆ ‘ತಕ್ಕ ಪಾಠ’ ಕಲಿಸಲು ಹಿರಿಯೂರು ಮತದಾರ ಸಜ್ಜು!ಲೋಹಿತ್‌ ಕುಮಾರ್ ಪಿ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ: ಅಭಿನಂದನೆಗಳ ಮಹಾಪೂರಫ್ಯಾಕ್ಟರಿಯಿಂದ ಹೊರಬರುತ್ತಿರುವ ದುರ್ವಾಸನೆ: ದೊಡ್ಡಬಳ್ಳಾಪುರದ ವರದನಹಳ್ಳಿ ಗ್ರಾಮಸ್ಥರು ಹೈರಾಣು!ಗ್ರಾಮ ಪಂಚಾಯಿತಿಯಲ್ಲಿ ರಾತ್ರಿ ವೇಳೆ ರಹಸ್ಯ ಕೆಲಸ: ಗ್ರಾಮಸ್ಥರಲ್ಲಿ ಹೆಚ್ಚಿದ ಕಳ್ಳ ವ್ಯವಹಾರದ ಸಂಶಯ!ಚಿತ್ರದುರ್ಗ ಸಖಿ ಒನ್ ಸ್ಟಾಪ್ ಸೆಂಟರ್: ಸೋಶಿಯಲ್ ವರ್ಕರ್ ಹುದ್ದೆಗೆ ಅರ್ಜಿ ಆಹ್ವಾನಹಿರಿಯೂರು ನಗರಸಭೆ: ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮೇ 17ರಂದು ಪೊಲೀಸ್ ಅಧಿಕಾರಿಗಳ ಸ್ನೇಹ ಸಮ್ಮೀಲನಹೊಸ ರೈಲ್ವೆ ಕಾಮಗಾರಿಗಳ ಪರಾಮರ್ಶೆ- ಸಚಿವ ವಿ. ಸೋಮಣ್ಣಇ-ಬಸ್, ಇ-ಟ್ರಾಕ್ ಮತ್ತು ಹಸಿರು ಸಾರಿಗೆ, ಸುಸ್ಥಿರ ಕೈಗಾರಿಕಾ ಭವಿಷ್ಯಕ್ಕೆ ಒತ್ತು:  ಕುಮಾರಸ್ವಾಮಿ