Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರಜ್ವಲ್ ರೇವಣ್ಣ ರಾಜಕೀಯ ಅಂತ್ಯಕ್ಕೆ ಕುಮಾರಸ್ವಾಮಿಯೇ ಕಾರಣ: ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ!

ಚಂದ್ರವಳ್ಳಿ ನ್ಯೂಸ್, ರಾಮನಗರ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ವಂತ ಮಗನನ್ನು ರಾಜಕೀಯವಾಗಿ ಪ್ರತಿಷ್ಠಾಪಿಸುವ ಸಲುವಾಗಿಯೇ, ತಮ್ಮ ಸಹೋದರನ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಿದರು ಎಂದು ಸಚಿವ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.

Advertisement

ಸ್ವಾರ್ಥ ರಾಜಕಾರಣ: ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಎಂಬುದನ್ನು ಮರೆತು ಪಂಚಾಯಿತಿ ಸದಸ್ಯರಂತೆ ಮಾತನಾಡುತ್ತಿದ್ದಾರೆ. ತಮ್ಮ ಮಗನನ್ನು ಬೆಳೆಸಲು ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯವಾಗಿ ಮತ್ತು ಕೌಟುಂಬಿಕವಾಗಿ ಮುಗಿಸುವುದೇ ಕುಮಾರಸ್ವಾಮಿ ಅವರ ಅಸಲಿ ಅಭಿಲಾಷೆಯಾಗಿತ್ತು ಎಂದು ಬಾಲಕೃಷ್ಣ ಆರೋಪಿಸಿದರು.

ಪ್ರಜ್ವಲ್ ಜೈಲುವಾಸಕ್ಕೆ ಕಾರಣವೇ ಕುಮಾರಸ್ವಾಮಿ: ನೈಸ್ ಮತ್ತು ಕೆಪಿಎಸ್‌ಸಿ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, "ಪ್ರಜ್ವಲ್ ಪ್ರಕರಣಕ್ಕೂ ನೈಸ್-ಕೆಪಿಎಸ್‌ಸಿಗೂ ಏನು ಸಂಬಂಧ? ಹೀಗೆ ಪದೇ ಪದೇ ಮಾತನಾಡುತ್ತಾ ಪ್ರಜ್ವಲ್ ಅವರೇ ಜೈಲಿಗೆ ಹೋಗುವಂತೆ ಮಾಡಿದ್ದೇ ಕುಮಾರಸ್ವಾಮಿ" ಎಂದು ವಾಗ್ದಾಳಿ ನಡೆಸಿದರು. ಪ್ರಜ್ವಲ್ ಜೈಲಲ್ಲೇ ಇರಬೇಕು ಎನ್ನುವುದು ಅವರ ಬಯಕೆ ಎಂದರು.

ಸಿಬಿಐ ತನಿಖೆಗೆ ಸವಾಲು: ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹೇಗೆ ಬಂತು ಎಂಬ ಬಗ್ಗೆ ಕುಮಾರಸ್ವಾಮಿಗೆ ಅನುಮಾನವಿದ್ದರೆ, ಅವರು ಕೂಡಲೇ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದು ಬಾಲಕೃಷ್ಣ ಸವಾಲು ಎಸೆದರು.

ಸರ್ಕಾರದ ಸಾಧನೆ ವ್ಯಂಗ್ಯಕ್ಕೆ ತಿರುಗೇಟು: ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಎಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವ ಬಾಲಕೃಷ್ಣ, "ಪ್ರಪಂಚದಲ್ಲಿ ಕುಮಾರಸ್ವಾಮಿ ಒಬ್ಬರೇ ಮೇಧಾವಿ, ಉಳಿದವರೆಲ್ಲ ದಡ್ಡರು ಎನ್ನುವ ಮನಸ್ಥಿತಿ ಅವರದ್ದು. 'ನಾನು ಹುಟ್ಟಿದ್ದೇ ಬಡವರಿಗಾಗಿ' ಎನ್ನುವ ಅವರ ಮಾತಿನ ಧಾಟಿಯ ಬಗ್ಗೆ ನಾವೇನೂ ಮಾತನಾಡಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಡಿದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ರಮವಾಗಿ ನೆಲೆಸಿದ್ದ ಮೂವರು ನೈಜೀರಿಯನ್ ಪ್ರಜೆಗಳ ವಶಕ್ಕೆಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದ ಹುಂಡಿಯಲ್ಲಿ 77ಲಕ್ಷ 58ಸಾವಿರದ 904 ರೂ ಸಂಗ್ರಹಕೆಂಪಮ್ಮ ದಂಪತಿಗೆ ವಾತ್ಸಲ್ಯ ಮನೆ ಹಸ್ತಾಂತರಪೋಷಣ್ ಮಾಸಾಚರಣೆ: ಸಿರಿಧಾನ್ಯ, ಸೊಪ್ಪು-ತರಕಾರಿ ಸೇವನೆಗೆ ಒತ್ತು ವಿದ್ಯಾರ್ಥಿಗಳು ಪಠ್ಯದ ಜೊತೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಮಾನಸಿಕ ದೈಹಿಕ ಸದೃಢತೆ ಹೆಚ್ಚುತ್ತದೆ:ಡಾ. ಮುರುಳಿಡಿಕೆ ಶಿವಕುಮಾರ್ ವಿರುದ್ಧವೇ 'ಟ್ರ್ಯಾಪ್' ಯತ್ನ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸ್ಪೋಟಕ ಹೇಳಿಕೆ!ಡಿ.ಕೆ ಶಿವಕುಮಾರ್‌ಗೆ ರಿಯಲ್ ಎಸ್ಟೇಟ್‌ಮೇಲಿರುವ ಆಸಕ್ತಿ ರೈತರ ಮೇಲಿಲ್ಲ: ಬಿ.ವೈ. ವಿಜಯೇಂದ್ರಶಾರ್ಟ್ ಸರ್ಕ್ಯೂಟ್‌ನಿಂದ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ; ತಪ್ಪಿದ ಭಾರೀ ದುರಂತಭೀಕರ ಅಪಘಾತ: ನಾಲ್ವರು ಯುವ ಕ್ರಿಕೆಟಿಗರು ಸಾವುಡೀಸೆಲ್ ಕೊರತೆ ತಾತ್ಕಾಲಿಕ, ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಕೆ: ಡಿಸಿಎಂ ಜಿ. ಪರಮೇಶ್ವರ ಸ್ಪಷ್ಟನೆ