LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆತ್ಮಹತ್ಯೆಗೆ ಶರಣಾದ ರೈತ ದಂಪತಿ ಮನೆಗೆ ಕುಮಾರಸ್ವಾಮಿ ಭೇಟಿ- ಸಾಂತ್ವನ, ಧೈರ್ಯ ತುಂಬಿದ ನಾಯಕ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಮಂಡ್ಯ:
ತಾಲ್ಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ಇತ್ತೀಚೆಗೆ ಸಾಲದ ಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ದಂಪತಿಯ ಮನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ
, ಮೃತರ ಕುಟುಂಬಸ್ಥರಿಗೆ ಹಾಗೂ ಅವರ ವೃದ್ಧ ತಾಯಿಗೆ ಸಾಂತ್ವನ ಹೇಳಿದರು.

​ಸಾಲದ ಸಮಸ್ಯೆಯಿಂದಾಗಿ ರೈತ ದಂಪತಿ ಈ ರೀತಿಯ ತೀವ್ರ ನಿರ್ಧಾರ ಕೈಗೊಂಡಿರುವುದು ತಮಗೆ ತೀವ್ರ ನೋವು ತಂದಿದೆ ಎಂದು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

​ಅಗಲಿದ ಶ್ರೀ ಪುಟ್ಟಸ್ವಾಮಿ ಹಾಗೂ ಶ್ರೀಮತಿ ನಾಗಮ್ಮ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ಅವರು, ನಾಡಿನ ರೈತ ಸಮುದಾಯಕ್ಕೆ ವಿಶೇಷ ಮನವಿ ಮಾಡಿದರು.

​"ಬದುಕಿನಲ್ಲಿ ಸವಾಲುಗಳು ಎದುರಾಗುವುದು ಸಹಜ. ಕಷ್ಟಗಳು ಬಂದಾಗ ರೈತ ಬಾಂಧವರು ಧೈರ್ಯಗೆಟ್ಟು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಎಂತಹದ್ದೇ ಕಠಿಣ ಪರಿಸ್ಥಿತಿಯನ್ನಾದರೂ ಆತ್ಮವಿಶ್ವಾಸದಿಂದ ಎದುರಿಸಬೇಕು." ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು.

​ರೈತರು ಜೀವ ಕಳೆದುಕೊಳ್ಳುವ ಬದಲು ಸವಾಲುಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದು ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಕಳಕಳಿಯಿಂದ ವಿನಂತಿಸಿಕೊಂಡರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿರ್ಬಂಧಆಗಸ್ಟ್ 12ಕ್ಕೆ 'ಶತಮಾನದ ಖಗ್ರಾಸ ಸೂರ್ಯಗ್ರಹಣ': ಭಾರತದಲ್ಲಿ ಗೋಚರವಿಲ್ಲ, ಯಾವುದೇ ಆಚರಣೆ ಅಗತ್ಯವಿಲ್ಲರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್