Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಸದಲ್ಲೂ ಕಮಿಷನ್ ಲೂಟಿ: ಸಿಬಿಐಗೆ ಪ್ರಕರಣ ಒಪ್ಪಿಸಲು ಆರ್. ಅಶೋಕ್ ಸವಾಲು!

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು: 
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್
, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು "ಕಮಿಷನ್ ಮಿನಿಸ್ಟರ್" ಎಂದು ಕರೆಯುವ ಮೂಲಕ ನೇರ ವಾಗ್ದಾಳಿ ನಡೆಸಿದ್ದಾರೆ. ಘನತ್ಯಾಜ್ಯ ವಿಲೇವಾರಿ (ಕಸದ) ಟೆಂಡರ್‌ನಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಧೈರ್ಯವಿದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ.

​ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ (CM) ಎಂದರೆ "ಕಮಿಷನ್ ಮಿನಿಸ್ಟರ್" (Commission Minister) ಎಂದು ಲೇವಡಿ ಮಾಡಿರುವ ಅವರು, ಕಸದ ಟೆಂಡರ್ ಹಗರಣದ ವಿರುದ್ಧ ತಾವೇ ಖುದ್ದಾಗಿ ದೂರು ನೀಡುವುದಾಗಿ ಘೋಷಿಸಿದ್ದಾರೆ.

​‘ಉತ್ತರಕುಮಾರನ ಪೌರುಷಸಾಕು ಮಾಡಿ: ಅಶೋಕ್ ಆಕ್ರೋಶ
​"ನಾನು ಯಾವುದೇ ತನಿಖೆಗೆ ಸಿದ್ಧ" ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವ ಡಿ.ಕೆ. ಶಿವಕುಮಾರ್ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆರ್. ಅಶೋಕ್
, "ಕ್ಯಾಮೆರಾಗಳ ಮುಂದೆ ನಿಮ್ಮ ಈ ಉತ್ತರಕುಮಾರನ ಪೌರುಷಸಾಕು ಮಾಡಿ. ನಿಮ್ಮಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕಸದ ಟೆಂಡರ್‌ನ ಈ ಮಹಾ ಲೂಟಿಯಲ್ಲಿ ನಿಮ್ಮ ಪಾತ್ರವಿಲ್ಲ ಎಂಬ ಧೈರ್ಯ ನಿಮಗಿದ್ದರೆ, ಈ ಕೂಡಲೇ ಪ್ರಕರಣವನ್ನು CBI ತನಿಖೆಗೆ ಒಪ್ಪಿಸಿ" ಎಂದು ಆಗ್ರಹಿಸಿದ್ದಾರೆ.

​ಕಸದಲ್ಲೂ ಕಮಿಷನ್ ಹೊಡೆದವರು ಯಾರು?
​ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಅವರು
, ಈ ಕೆಳಗಿನ ಪ್ರಮುಖ ಅಂಶಗಳನ್ನು ಮುನ್ನೆಲೆಗೆ ತಂದಿದ್ದಾರೆ.

​ಖುದ್ದಾಗಿ ದೂರು: ಕಸದ ಟೆಂಡರ್ ಹಗರಣದ ವಿರುದ್ಧ ತಾವೇ ಖುದ್ದಾಗಿ ಕಾನೂನು ಹೋರಾಟ ಹಾಗೂ ದೂರು ದಾಖಲಿಸುವುದಾಗಿ ಅಶೋಕ್ ಸ್ಪಷ್ಟಪಡಿಸಿದ್ದಾರೆ.

​ಬಿಲ್ಡಪ್ ಬೇಡ, ತಾಕತ್ತು ಪ್ರದರ್ಶಿಸಿ: ಮಾಧ್ಯಮಗಳ ಮುಂದೆ ಕೇವಲ ಬಿಲ್ಡಪ್ ಕೊಡುವುದನ್ನು ಬಿಟ್ಟು, ತನಿಖೆಗೆ ಆದೇಶಿಸುವ ತಾಕತ್ತನ್ನು ಸರ್ಕಾರ ಪ್ರದರ್ಶಿಸಬೇಕು ಎಂದು ಸವಾಲು ಹಾಕಿದ್ದಾರೆ.

​ಅಸಲಿ ಮುಖ ಬಯಲಾಗಲಿ: ಕಸದಲ್ಲೂ ಕಮಿಷನ್ ಹೊಡೆದ ಆ ಮಹಾ "ಕಮಿಷನ್ ಏಜೆಂಟ್" ಯಾರು ಎಂಬ ಸತ್ಯ ಸಾರ್ವಜನಿಕವಾಗಿ ಹೊರಬರಬೇಕು. ಈ ಮೂಲಕ ಕರ್ನಾಟಕದ ಜನತೆಗೆ ಪ್ರಸ್ತುತ ಸರ್ಕಾರದ ಅಸಲಿ ಮುಖ ಏನೆಂದು ತಿಳಿಯಲಿ ಎಂದು ಅವರು ಕಿಡಿಕಾರಿದ್ದಾರೆ.

​ರಾಜ್ಯ ರಾಜಧಾನಿಯ ಪ್ರಮುಖ ಸಮಸ್ಯೆಯಾಗಿರುವ ಘನತ್ಯಾಜ್ಯ ವಿಲೇವಾರಿಯ ಟೆಂಡರ್ ಪ್ರಕ್ರಿಯೆಯಲ್ಲೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಪ್ರತಿಪಕ್ಷಗಳ ಈ ಆರೋಪ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಆಡಳಿತ ಪಕ್ಷ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.