ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತ್ರಿವಿಧ ದಾಸೋಹದ ಮೂಲಕ ಕೋಟ್ಯಾಂತರ ಮಕ್ಕಳ ಬಾಳಿಗೆ ಬೆಳಕಾಗುತ್ತಿರುವ ಸಿದ್ಧಗಂಗಾ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಬೆಂಗಳೂರಿನ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಚಿವ ಎಂ. ಬಿ. ಪಾಟೀಲ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶ್ರೀಗಳನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ, ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು. ಬಳಿಕ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.
ಪಕ್ಷದ ಮುಖಂಡರಿಂದಲೂ ಆಶೀರ್ವಾದ ಸಲ್ಲಿಕೆ:
ಶ್ರೀಗಳ ಭೇಟಿಯ ಸಂದರ್ಭದಲ್ಲಿ ಸಚಿವರ ನಿವಾಸದಲ್ಲಿ ಉಪಸ್ಥಿತರಿದ್ದ ಬಾಗಲಕೋಟೆಯ ನೂತನ ಶಾಸಕರಾದ ಉಮೇಶ್ ಮೇಟಿ, ಡಾ. ಗಂಗಾಧರ ಸಂಬಣ್ಣಿ, ಬಿಬಿಎಂಪಿ ಮಾಜಿ ಮೇಯರ್ ಪುಟ್ಟರಾಜು ಹಾಗೂ ಮಲ್ಲಿಕಾರ್ಜುನ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
"ನಾಡು ಹೆಮ್ಮ ಪಡುವ ಸಿದ್ಧಗಂಗಾ ಮಠದ ಪೂಜ್ಯ ಶ್ರೀಗಳ ಆಗಮನ ಮತ್ತು ಅವರ ಆಶೀರ್ವಚನಗಳು ನಮ್ಮಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ತುಂಬಿವೆ."
ಎಂ. ಬಿ. ಪಾಟೀಲ್, ಸಚಿವರು.
ಮಠದ ಪರಂಪರೆ ಹಾಗೂ ಶ್ರೀಗಳ ಸದಾಶಯದ ಮಾತುಗಳು ಇಡೀ ಕುಟುಂಬಕ್ಕೆ ಮತ್ತು ನೆರೆದಿದ್ದ ಮುಖಂಡರಿಗೆ ಹೊಸ ಸ್ಫೂರ್ತಿ ನೀಡಿತು ಎಂದು ಸಚಿವರು ತಮ್ಮ ಪ್ರಕಟಣೆಯಲ್ಲಿ ಹಂಚಿಕೊಂಡಿದ್ದಾರೆ.



