Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕ ಕೆ.ಎಸ್. ನವೀನ್ ಪಿತೃವಿಯೋಗ: ಶ್ರೀ ಜಯಪದ್ಮ ಮೋಟಾರ್ಸ್ ಮಾಲೀಕ ಕೆ.ಆರ್. ಶಿವಪ್ರಕಾಶ್ ಇನ್ನಿಲ್ಲ

Advertisement

ಶಾಸಕ ಕೆ.ಎಸ್. ನವೀನ್ ಪಿತೃವಿಯೋಗ: ಶ್ರೀ ಜಯಪದ್ಮ ಮೋಟಾರ್ಸ್ ಮಾಲೀಕ ಕೆ.ಆರ್. ಶಿವಪ್ರಕಾಶ್ ಇನ್ನಿಲ್ಲ
​ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:      ಚಿತ್ರದುರ್ಗದ ಹಿರಿಯ ಉದ್ಯಮಿಗಳು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್. ನವೀನ್ ಅವರ ಪೂಜ್ಯ ತಂದೆಯವರಾದ ಕೆ.ಆರ್. ಶಿವಪ್ರಕಾಶ್ (86) ಅವರು ಗುರುವಾರ (ಮೇ 07) ದೈವಾಧೀನರಾಗಿದ್ದಾರೆ.
​ಶ್ರೀ ಜಯಪದ್ಮ ಮೋಟಾರ್ ಸರ್ವಿಸ್‌ನ ಮಾಲೀಕರಾಗಿದ್ದ ಶಿವಪ್ರಕಾಶ್ ಅವರು ಜಿಲ್ಲೆಯ ಸಾರಿಗೆ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪುತ್ರ ಶಾಸಕ ಕೆ.ಎಸ್. ನವೀನ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯ ವಿವರ:
​ಮೃತರ ಅಂತಿಮ ದರ್ಶನಕ್ಕೆ ಬೆಂಗಳೂರು, ಚಿತ್ರದುರ್ಗ ಹಾಗೂ ಅವರ ಸ್ವಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ವಿವರಗಳು ಕೆಳಗಿನಂತಿವೆ:
​ಬೆಂಗಳೂರು: ಇಂದು (ಮೇ 07) ಸಂಜೆ 5:30 ರಿಂದ ಶುಕ್ರವಾರ (ಮೇ 08) ಬೆಳಿಗ್ಗೆ 10:00 ಗಂಟೆಯವರೆಗೆ ಬೆಂಗಳೂರಿನ ವಸಂತನಗರದ ಕಾವೇರಿಯಪ್ಪ ಲೇಔಟ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ.

ಚಿತ್ರದುರ್ಗ: ಮೇ 08ರ ಶುಕ್ರವಾರ ಮಧ್ಯಾಹ್ನ 3:00 ಗಂಟೆಯಿಂದ ಶನಿವಾರ (ಮೇ 09) ಬೆಳಿಗ್ಗೆ 10:00 ಗಂಟೆಯವರೆಗೆ ಚಿತ್ರದುರ್ಗದ ವಿ.ಪಿ. ಬಡಾವಣೆಯ ಆರ್‌ಟಿಒ ಆಫೀಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಂತ್ಯಕ್ರಿಯೆ: ಮೇ 09ರ ಶನಿವಾರ ಮಧ್ಯಾಹ್ನ 3:00 ಗಂಟೆಗೆ ಹೊಳಲ್ಕೆರೆ ತಾಲೂಕಿನ ಸ್ವಗ್ರಾಮವಾದ ಎನ್.ಜಿ. ಹಳ್ಳಿಯ ತೋಟದ ಆವರಣದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೆ.ಆರ್. ಶಿವಪ್ರಕಾಶ್ ಅವರ ನಿಧನಕ್ಕೆ ಜಿಲ್ಲೆಯ ಗಣ್ಯರು, ರಾಜಕೀಯ ಮುಖಂಡರು ಹಾಗೂ ಹಿತೈಷಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ಕೆ.ಆರ್.ಶಿವಪ್ರಕಾಶ್ ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ
ಬೆಂಗಳೂರು: ಶಾಸಕ ಕೆ.ಎಸ್. ನವೀನ್ ರವರ ತಂದೆ ಮತ್ತು ಚಿತ್ರದುರ್ಗದ ಶ್ರೀ ಜಯಪದ್ಮ ಮೋಟಾರ್ ಸರ್ವಿಸ್‍ನ ಮಾಲೀಕರಾದ ಕೆ.ಆರ್. ಶಿವಪ್ರಕಾಶ್ ಅವರು ಲಿಂಗೈಕ್ಯರಾದ ವಿಷಯ ಅತ್ಯಂತ ಬೇಸರ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.
ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲಾ ಗೊಲ್ಲರ ಸಂಘದ ಚುನಾವಣೆ: ಮೀಸೆ ಮಹಲಿಂಗಪ್ಪ ಗುಂಪಿಗೆ ಭರ್ಜರಿ ಜಯ; ಎದುರಾಳಿ ತಂಡದ ಹಿಂದಿದ್ದ ‘ಕೈ’ ನಾಯಕರಿಗೆ ಮುಖಭಂಗ!ಕರುಳ ಬಳ್ಳಿಯ ತಡವುತ್ತಾ-ಎಚ್.ಕೆ ವಿವೇಕಾನಂದಹಳ್ಳಿ ಧ್ವನಿಗಳು ಭಾಗ-3: ಕುಮಾರ್ ಬಡಪ್ಪಹಳ್ಳಿ ಧ್ವನಿಗಳು ಭಾಗ-2: ಕುಮಾರ್ ಬಡಪ್ಪಹಳ್ಳಿ ಧ್ವನಿಗಳು ಭಾಗ-1: ಕುಮಾರ್ ಬಡಪ್ಪಅಂತರ್ ಜಿಲ್ಲಾ ಮನೆಗಳ್ಳರ ಬಂಧನ: 12.62 ಲಕ್ಷ ಮೌಲ್ಯದ ಚಿನ್ನಾಭರಣ ವಶ​ ರೈತರೊಂದಿಗೆ ಡಿಸಿಎಂ ಶಿವಕುಮಾರ್ ಸಮಾಲೋಚನೆ: ಕಾನೂನು ಚೌಕಟ್ಟಿನಲ್ಲಿ ಸೂಕ್ತ ನಿರ್ದೇಶನದ ಭರವಸೆKEA ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ಆರೋಪ: ಮರುಪರೀಕ್ಷೆಗೆ ಆರ್. ಅಶೋಕ್ ಆಗ್ರಹಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನತೆಗೆ ದ್ರೋಹಬೆಂಗಳೂರು - ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್‌ರೈಲು ಸಂಚಾರ ಆರಂಭ: ಸಚಿವ ವಿ. ಸೋಮಣ್ಣ ಭಾಗಿ