ಚಂದ್ರವಳ್ಳಿ ನ್ಯೂಸ್, ಉಡುಪಿ:
ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕವಾ೯ಲು ಅವರಿಗೆ ಪ್ರೇರಣಾ ಪುರಸ್ಕಾರ 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೆಸಿಐ ಭಾರತ ವಲಯ 15 ರ ವತಿಯಿಂದ ಮಂಗಳೂರು ಪಾಲೇಮಾರ್ ಗಾಡ೯ನ್ ನಲ್ಲಿ ಸೆ 28 ರಂದು ನಡೆದ ಆರೋಹಣ ತರಬೇತಿ ಸಮ್ಮೇಳನದಲ್ಲಿ ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷೆ ಡಾ.ಹರಿಣಾಕ್ಷಿ ಕರ್ಕೇರ, ವಲಯ ತರಬೇತಿ ನಿರ್ದೇಶಕ ದೀಪಕ್ ರಾಜ್, ಜೆಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.




