ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ವತಿಯಿಂದ ಅಗಲಿದ ಪತ್ರಕರ್ತರಿಗೆ ನುಡಿ ನಮನ ಕಾರ್ಯಕ್ರಮವನ್ನು ಅ.3ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಕೆ.ಜಿ.ರಸ್ತೆ ಕಂದಾಯ ಭವನದಲ್ಲಿರುವ ಕೆಯುಡಬ್ಲೂಜೆ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಪತ್ರಕರ್ತರು ಮತ್ತು ಚಿತ್ರ ನಿರ್ದೇಶಕರಾದ ಎನ್.ಎಸ್.ಶಂಕರ್, ಜನವಾಹಿನಿ ಪತ್ರಿಕೆ ಸಂಪಾದಕರಾಗಿದ್ದ ಪ್ರೊ.ಕೆ.ಟಿ.ಬಾಲಕೃಷ್ಣಗಟ್ಟಿ, ಕೆಯುಡಬ್ಲೂಜೆ ರಾಜ್ಯ ಮಾಜಿ ಕಾರ್ಯದರ್ಶಿ ದಾವಣಗೆರೆಯ ಪೆ.ನ.ಗೋಪಾಲರಾವ್, ಒ.ಎನ್.ಸಿದ್ದಯ್ಯ, ತುಮಕೂರಿನ ಕಮಲಾ ಗಂಗಹನುಮಯ್ಯ, ಈಶ್ವರಪ್ಪ,
ಚಿತ್ರದುರ್ಗದ ಉಜಿನಪ್ಪ, ಇಂದಿರಾ ಲಂಕೇಶ್, ಉಡುಪಿಯ ನಾಗೇಶ್ ಗಾಣಿಗ ಸಿದ್ದಾಪುರ, ಬೈಂದೂರಿನ ಜನಾರ್ಧನ ಮರವಂತೆ, ಕೋಲಾರ ಜಿಲ್ಲೆಯ ಲಕ್ಕೂರು ಶ್ರೀನಿವಾಸ, ಬಸವಾಪಟ್ಟಣ ಜಯಕುಮಾರ್ ಅವರುಗಳು ಸೇರಿದಂತೆ ಅಗಲಿದ ಪತ್ರಕರ್ತರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು ಎಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




