ಚಂದ್ರವಳ್ಳಿ ನ್ಯೂಸ್ ಹಿರಿಯೂರು: ಇದೇ ಜುಲೈ 25ರ ಶನಿವಾರ ಆಷಾಡ ಏಕಾದಶಿ ಅಂಗವಾಗಿ ಹಿರಿಯೂರು ನಗರದ ದುರ್ಗಿಗುಡಿ ಬೀದಿ ಬಳಿ ಇರುವ ಶ್ರೀ ವಿಠ್ಠಲ ರುಕ್ಮಿಣಿ ದೇವಾಲಯದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .
ಇದರ ಅಂಗವಾಗಿ ಕಾಕಡಾರತಿ ಪಂಚಾಮೃತ ಅಭಿಷೇಕ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದಲ್ಲಿ ಭಜನೆ ಕೀರ್ತನೆ ಇರುತ್ತದೆ ಮುಂಜಾನೆಯಿಂದ ರಾತ್ರಿಯವರೆಗೂ ಸಕಲ ಸದ್ಭಕ್ತರು ವಿಠಲ ರುಕ್ಮಿಣಿ ದೇವರುಗಳ ಪಾದಮುಟ್ಟಿ ನಮಸ್ಕರಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ಕೃಪೆಗೆ ಪಾತ್ರರಾಗುವಂತೆ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾದ ಹೆಚ್ ಕೆ ರುಕ್ಮಾಜಿ ರಾವ್ ರವರು ಮನವಿ ಮಾಡಿದ್ದಾರೆ.



