LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೂನ್ 14ರಂದು ಸಹಜ ಕೃಷಿ ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿ ಇಲಾಖೆ ಚಿತ್ರದುರ್ಗ ವ್ಯಾಪ್ತಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ
, ಬಬ್ಬೂರು ಫಾರಂ, ಐಕಾಂತಿಕ ಸಮುದಾಯ, ದಾವಣಗೆರೆ ಹಾಗೂ ಋಷಿ ಸಂಸ್ಕøತಿ ವಿದ್ಯಾ ಕೇಂದ್ರ, ರಂಗಾಪುರ ಇವರ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಸಹಜ ಕೃಷಿಯ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಇದೇ ಜೂನ್ 14ರಂದು ಬೆಳಿಗ್ಗೆ 9.30ಕ್ಕೆ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯ ರಂಗಾಪುರದ ಋಷಿ ಸಂಸ್ಕøತಿ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಐಕಾಂತಿಕ ಸಮುದಾಯದ ಪ್ರಗತಿಪರ ಸಹಜ ಕೃಷಿಕ ದಾವಣಗೆರೆಯ ಐಕಾಂತಿಕ ತೋಟದ ರಾಘವ, ಚಿಕ್ಕಜಾಜೂರಿನ ವೀರೇಶ್, ಮಲೇಬೆನ್ನೂರಿನ ಪಾಂಡುರಂಗ ಮತ್ತು ದಾವಣಗೆರೆಯ ಅಭಿಶೇಕ್ ಇವರು ಕೃಷಿ ಚರಿತ್ರೆ, ಸಹಜ ಕೃಷಿಯ ಪರಿಚಯ, ಸಹಜ ಜೀವನ, ಸಜೀವ ಮಣ್ಣು, ನೀರು ನಿರ್ವಹಣೆ ಮತ್ತು ಸಹಜ ಕೃಷಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಬಗೆ, ಬಹುಪಯೋಗಿ ಜೀವಂತ ಬೇಲಿ, ಕೃಷಿ ಅರಣ್ಯ ಹಾಗೂ ಕೃಷಿ ವಿನ್ಯಾಸ ವಿಚಾರಗಳ ಕುರಿತು ವಿಷಯಗಳನ್ನು ಮಂಡನೆ ಮಾಡಲಿದ್ದಾರೆ.

ಈಗಾಗಲೇ ಸಹಜ ಕೃಷಿಯಲ್ಲಿ ತೊಡಗಿರುವ ಮತ್ತು ತಮ್ಮ ತಾಕಿನಲ್ಲಿ ಸಹಜ ಕೃಷಿ ಪ್ರಾರಂಭಿಸಲು ಆಸಕ್ತಿ ಇರುವ ಚಿತ್ರದುರ್ಗ ಜಿಲ್ಲೆಯ ಉತ್ಸಾಹಿ ರೈತಭಾಂದವರು ದೂರವಾಣಿ ಸಂಖ್ಯೆ 8277931058 ಗೆ ಕರೆ ಮಾಡಿ ದಿನಾಂಕ:13-6-2026 ರೊಳಗೆ ನೋಂದಾಯಿಸಿ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕೋರಿದ್ದಾರೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು, ನೋಂದಾವಣಿ ಮಾಡಿಸದ ಮತ್ತು ನಿಗದಿತ ಸಮಯದ ನಂತರ ಬರುವ ರೈತರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಮೊದಲು ನೋಂದಾವಣಿ ಮಾಡಿಕೊಂಡ ಅರ್ಹ 60 ಜನ ಆಸಕ್ತ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು. ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಕೋರಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು