Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಕೆಶಿ ಸರ್ಕಾರಕ್ಕೆ ಒಂದು ತಿಂಗಳು: ಸರ್ಕಾರದ ವಿರುದ್ಧ ಅಶೋಕ್ ಗಂಭೀರ ಆರೋಪ

Advertisement
Advertisement

​ ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಭರ್ತಿ ಒಂದು ತಿಂಗಳು ಪೂರೈಸಿರುವ ಬೆನ್ನಲ್ಲೇ
, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕನಸೇನೋ ನನಸಾಗಿದೆ, ಆದರೆ ಕೇವಲ ಒಂದು ತಿಂಗಳಲ್ಲೇ ಕೋಟ್ಯಂತರ ಕನ್ನಡಿಗರ ಕನಸುಗಳು ಸಂಪೂರ್ಣ ಭ್ರಮನಿರಸನಗೊಂಡಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಡಿ.ಕೆ. ಶಿವಕುಮಾರ್ ಅವರ ಹೆಸರನ್ನು "Disaster of Karnataka's Success" (ಕರ್ನಾಟಕದ ಯಶಸ್ಸಿಗೆ ಒಕ್ಕರಿಸಿದ ಅತಿ ದೊಡ್ಡ ವಿಪತ್ತು) ಎಂದು ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

​ಸರ್ಕಾರದ ಒಂದು ತಿಂಗಳ ಆಡಳಿತದ ವೈಫಲ್ಯಗಳು:
​ಕಾಂಗ್ರೆಸ್ ಸರ್ಕಾರದ 30 ದಿನಗಳ ಆಡಳಿತದಲ್ಲಿ ರಾಜ್ಯದ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆರ್. ಅಶೋಕ್ ಪಟ್ಟಿ ಮಾಡಿದ್ದಾರೆ:

​ರೈತರ ದುಸ್ಥಿತಿ: ರಸಗೊಬ್ಬರಕ್ಕಾಗಿ ರೈತರು ಚಪ್ಪಲಿ ಇಟ್ಟು ದಿನಗಟ್ಟಲೆ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಹೋರಾಟ, ಬರದ ಭೀತಿ ಹಾಗೂ ಭೂಸ್ವಾಧೀನದ ಆತಂಕದಿಂದಾಗಿ ಅನ್ನದಾತ ತನ್ನದೇ ಜಮೀನಿನಲ್ಲಿ ಭಿಕ್ಷುಕನಂತಾಗಿದ್ದಾನೆ.

​ಯುವಕರಲ್ಲಿ ನಿರಾಸೆ: ಉದ್ಯೋಗ ನೇಮಕಾತಿಯ ಆಶ್ವಾಸನೆಗಳು ಬರೀ ಭರವಸೆಯಾಗಿಯೇ ಉಳಿದಿದ್ದು, ಹೊಸ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ಶೂನ್ಯ ಸಾಧನೆ ಮಾಡಿದೆ.

​ಮಹಿಳೆಯರಿಗೆ ಭದ್ರತೆಯ ಕೊರತೆ: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಷ್ಕರಣೆಯ ಹೆಸರಿನಲ್ಲಿ 'ಗೃಹಲಕ್ಷ್ಮಿ'ಯರನ್ನು ಅನುಮಾನದಿಂದ ನೋಡಲಾಗುತ್ತಿದೆ.

​ಬೆಲೆ ಏರಿಕೆ ಮತ್ತು ತೆರಿಗೆ ಹೊರೆ: ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆ ಹಾಗೂ ದೈನಂದಿನ ವೆಚ್ಚಗಳು ದಿನದಿಂದ ದಿನಕ್ಕೆ ಏರುತ್ತಿವೆ. ಇದು ಗ್ಯಾರೆಂಟಿ ಸರ್ಕಾರವಲ್ಲ, ಬದಲಾಗಿ 'ಲೂಟಿ ಸರ್ಕಾರ' ಎಂದು ಅಶೋಕ್ ಕರೆದಿದ್ದಾರೆ.

​ಉದ್ಯಮಿಗಳ ಪಲಾಯನ: ಅನಿಶ್ಚಿತ ಆಡಳಿತ ಮತ್ತು ಕಮಿಷನ್ ದಂಧೆಗೆ ಹೆದರಿ ಹೂಡಿಕೆದಾರರು ನೆರೆರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

​ಬೆಂಗಳೂರಿನ ಅವ್ಯವಸ್ಥೆ: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನರಕ, ಗುಂಡಿ ಬಿದ್ದ ರಸ್ತೆಗಳು ಹಾಗೂ ಯೋಜನಾ ರಹಿತ ಅವ್ಯವಸ್ಥೆ ಮುಂದುವರಿದಿದ್ದು, ಯಾವುದೇ ಪರಿಹಾರದ ಸುಳಿವು ಕಾಣುತ್ತಿಲ್ಲ.

​'ಇದು ಕೇವಲ 30 ದಿನಗಳ ಟ್ರೈಲರ್':
​"
ದೆಹಲಿಯ ಹೈಕಮಾಂಡ್ ಬಾಗಿಲು ಕಾಯ್ದು ಕೊನೆಗೂ ಮುಖ್ಯಮಂತ್ರಿ ಕುರ್ಚಿಯ ಕನಸನ್ನು ನನಸಾಗಿಸಿಕೊಂಡ ಡಿ.ಕೆ. ಶಿವಕುಮಾರ್ ಅವರೇ, ಕೇವಲ 30 ದಿನಗಳ ಟ್ರೈಲರ್‌ನಲ್ಲೇ ಇಡೀ ರಾಜ್ಯದ ಕನಸನ್ನು ನುಚ್ಚುನೂರು ಮಾಡಿದ್ದೀರಿ. ಇನ್ನು ಎರಡು ವರ್ಷ ನಿಮ್ಮ ಸರ್ಕಾರ ಮುಂದುವರಿದರೆ ಕರ್ನಾಟಕದ ಸ್ಥಿತಿ ಏನಾಗಬಹುದು ಎಂಬ ಆತಂಕ ಪ್ರತಿಯೊಬ್ಬ ಕನ್ನಡಿಗನಲ್ಲಿದೆ," ಎಂದು ಆರ್. ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ.

​ರಾಜ್ಯದಲ್ಲಿ ಸದ್ಯ ಜನರಿಗೆ ಎಲ್ಲೂ ಆಡಳಿತ ಕಾಣುತ್ತಿಲ್ಲ, ಕೇವಲ ಸುಳ್ಳು ಪ್ರಚಾರ ಮತ್ತು ಭ್ರಷ್ಟಾಚಾರ ಮಾತ್ರ ಎದ್ದು ಕಾಣುತ್ತಿದೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.