ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (ಕ.ರಾ.ಮು.ವಿ.) 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ (UGC) ಅನುಮೋದಿತ ವಿವಿಧ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ ಹಾಗೂ ಇತರ ಸ್ನಾತಕೋತ್ತರ (PG), ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಸ್ನಾತಕಪೂರ್ವ (UG) ಸರ್ಟಿಫಿಕೇಟ್ ಕೋರ್ಸುಗಳಿಗೆ ಕ.ರಾ.ಮು.ವಿ ಬೆಂಗಳೂರು ಪ್ರಾದೇಶಿಕ ಕೇಂದ್ರ-04 (ಮಡಿವಾಳ) ರಲ್ಲಿ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆನ್‌ಲೈನ್ ಮೂಲಕ ಅಕ್ಟೋಬರ್ 13ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ವಿಶೇಷ ಶುಲ್ಕ ವಿನಾಯಿತಿ ಮತ್ತು ರಿಯಾಯಿತಿಗಳು: ವಿಶೇಷ ಬೋಧನಾ ಶುಲ್ಕ ರಿಯಾಯಿತಿ: ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ರಕ್ಷಣೆ/ಮಾಜಿ ಸೈನಿಕ ಸಿಬ್ಬಂದಿಯ ಅಭ್ಯರ್ಥಿಗಳಿಗೆ, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಹಾಗೂ KSRTC/BMTC/NWKRTC/KKRTC ಸಂಸ್ಥೆಗಳ ನೌಕರರುಗಳಿಗೆ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇರುತ್ತದೆ.
ಸಂಪೂರ್ಣ ಶುಲ್ಕ ವಿನಾಯಿತಿ: ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ, ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಎಡ್ ಮತ್ತು ಎಂ.ಬಿ.ಎ ಕೋರ್ಸ್ ಹೊರತುಪಡಿಸಿ) ಹಾಗೂ ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಸೌಲಭ್ಯ ಕಲ್ಪಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ ಲಭ್ಯವಿರುವ ವಿವರಣಾಪುಸ್ತಕವನ್ನು (Prospectus) ಪರಿಶೀಲಿಸಿ, ವೆಬ್‌ಸೈಟ್‌ನ 'Admission Portal' ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಬೇಕು. ನಂತರ ಮಡಿವಾಳದಲ್ಲಿರುವ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿಕೊಂಡು, ಆನ್‌ಲೈನ್ ಮೂಲಕ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.
ಹೆಚ್ಚಿನ ವಿವರಗಳಿಗೆ, ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಬೆಂಗಳೂರು ಪ್ರಾದೇಶಿಕ ಕೇಂದ್ರ-04, #121, 2ನೇ ಮಹಡಿ, ಹೊಸೂರು ಮುಖ್ಯರಸ್ತೆ, ಮಡಿವಾಳ, ಬೆಂಗಳೂರು - 560068 ಅಥವಾ ದೂರವಾಣಿ ಸಂಖ್ಯೆ 080-23158888 / 8904036090 / 6363390600 ಅಥವಾ ಇ-ಮೇಲ್: [email protected] ನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಪಿ. ಹರೀಶ್ ತಿಳಿಸಿದ್ದಾರೆ.




