Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನ್ನಡಿಗರಿಗೆ ಶೇಕಡಾ 100ರಷ್ಟು ಉದ್ಯೋಗ ನೀಡುವುದು ನಮ್ಮ ಗುರಿ - ಉದಯ್ ಶೆಟ್ಟಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಇಲ್ಲಿನ ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್ ಸಂಸ್ಥೆವತಿಯಿಂದ ತನ್ನ ಕಾರ್ಮಿಕರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅದ್ದೂರಿ ದಸರಾ ಆಚರಣೆ ಆಯೋಜನೆ ಮಾಡಲಾಗಿತ್ತು.

 ಅದ್ದೂರಿ ವೇದಿಕೆಯಲ್ಲಿ ಚಿತ್ರನಟಿ ಶೃತಿ ಸೇರಿದಂತೆ ಹಲವು ಕಲಾವಿದರು ಸಂಗೀತಗಾರರು ಸ್ಥಳೀಯ ಪ್ರಮುಖರು ದಸರಾ ಆಚರಣೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುತಂದರು.

ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್ ಸಂಸ್ಥೆಯ ಉಪಾಧ್ಯಕ್ಷ ಉದಯ್ ಶೆಟ್ಟಿ ಮಾತನಾಡಿ ಸಾಮಾನ್ಯವಾಗಿ ಬೇರೆ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಇಂತಹ ಆಚರಣೆಗಳು ನಡೆಯುವುದಿಲ್ಲ ಆದರೆ ನಮ್ಮ ಸಂಸ್ಥೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿಶೇಷವಾಗಿ ದಸರಾ ಹಬ್ಬವನ್ನು ಸಂಭ್ರಮಿಸಲಾಗುತ್ತದೆ  ಎಂದರು.

 ದಸರಾ ಹಬ್ಬದ ಪ್ರಯುಕ್ತ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಜಯಗಳಿಸಿದ ಕಾರ್ಮಿಕರಿಗೆ ದಸರಾ ಸಂದರ್ಭದಲ್ಲಿ ಬಹುಮಾನ ಉಡುಗೊರೆ ನೀಡುವ ಪದ್ಧತಿ ನಮ್ಮಲಿ ಮೊದಲಿನಿಂದಲೂ ಇದೆ ಅಂತೇ ಇಂದು ಈ ವೇದಿಕೆಯಲ್ಲಿ ದಸರಾ ಹಬ್ಬವನ್ನು ಕಾರ್ಮಿಕರೊಂದಿಗೆ ಬೆರೆತು ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ ನಮ್ಮ ಸಂಸ್ಥೆಯಲ್ಲಿ ಗಣೇಶ ಚತುರ್ಥಿ,  ವರಮಹಾಲಕ್ಷ್ಮಿ, ಈದ್ ಮಿಲಾದ್, ಕ್ರಿಸ್ಮಸ್ ಸೇರಿದಂತೆ ಎಲ್ಲಾ ಧರ್ಮಗಳಿಗೆ ಸಂಬಂಧಪಟ್ಟ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದರು.

 ಶೇಕಡ 100ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದು ನಮ್ಮೆಲ್ಲರ ಆಶಯ: ನಮ್ಮ ಕಾರ್ಖಾನೆಗಳಲ್ಲಿ ಶೇಕಡ 100ರಷ್ಟು ಸ್ಥಳೀಯ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ ಆದರೆ ಕಾರ್ಮಿಕರು ಲಭ್ಯವಿಲ್ಲದ ಕಾರಣ ಶೇಕಡಾ 20ರಷ್ಟು ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುವ ಪರಿಸ್ಥಿತಿ ಎದುರಾಗಿದೆ. ನಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಉತ್ತಮ ವಾತಾವರಣವಿದ್ದು ಕಾರ್ಮಿಕರಿಗೆ ಸಕಲ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ನಮ್ಮಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಇದೆ ಬನ್ನಿ ನಮ್ಮ ಜೊತೆ ಸೇರಿ ಎಂದರು.

ಕಾರ್ಯಕ್ರಮದಲ್ಲಿ ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್ ಮ್ಯಾನೆಜಿಂಗ್ ಡೈರೆಕ್ಟರ್ ಫಲಪ್ ಬೆನರ್ಜಿ,ಉಪಾಧ್ಯಕ್ಷ ಉದಯ್ ಶೆಟ್ಟಿ, ಜನರಲ್ ಮ್ಯಾನೇಜರ್ ಅಥವುಲ್ಲಾ ಖಾನ್ , ವಿಜಯ್, ದೊಡ್ಡಬಳ್ಳಾಪುರ ನಗರಸಭಾ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಶಿವು, ಶಂಕರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರದ ದ್ವಂದ್ವ ನೀತಿ ಅಂತ್ಯಗೊಳ್ಳಲಿ; ಮದ್ಯ ಮಾರಾಟ ರದ್ದುಗೊಳಿಸಲು ಕ್ರಮ ಕೈಗೊಳ್ಳಲಿಕಲ್ಯಾಣದ ಸಂಕಟದಲ್ಲಿ ಮರಣವೇ ಮಹಾನವಮಿಸಿಜೆಪಿಗೆ ಕಾಂಗ್ರೆಸ್ ನೆರವು: 'ಖಜಾನೆ ಎಟಿಎಂ ಆಯಿತೇ?' - ಆರ್. ಅಶೋಕ್ ತೀವ್ರ ವಾಗ್ದಾಳಿಎ-ಖಾತಾ ಆಸ್ತಿ ಮಾಲೀಕರಿಗೆ ಮನೆಬಾಗಿಲಲ್ಲೇ ಆನ್‌ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ!ಗೂಗಲ್ ಮ್ಯಾಪ್ ಹೇಳಿದಂತೆ ಕೇಳಿ ದಾರಿತಪ್ಪಿ ಕಾರು ಸಮೇತ ಕಂದಕಕ್ಕೆ ಬಿದ್ದ ಇನ್ಫೋಸಿಸ್ ಟೆಕ್ಕಿಗಳು!ಲೈಂಗಿಕ ಕಿರುಕುಳ ಆರೋಪ: ತಲೆಮರೆಸಿಕೊಂಡಿದ್ದ ಚರ್ಚ್‌ಪಾದ್ರಿ ಪೋಕ್ಸೋ ಅಡಿಯಲ್ಲಿ ಬಂಧನಹಾರನಕಣಿವೆ ರಂಗನಾಥಸ್ವಾಮಿ ಅಂಬಿನೋತ್ಸವ: ಬುಡಕಟ್ಟು ಸಂಸ್ಕೃತಿ ಮತ್ತು ಪವಾಡದ ಅಪೂರ್ವ ಧಾರ್ಮಿಕ ಸಂಗಮಪ್ರಜ್ಞೆಯ ಜಾಗೃತಿ, ಬದುಕಿನ ಸಂಸ್ಕೃತಿ:ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ