ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-೧ರಲ್ಲಿ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಪಿ.ವಾಣಿ ಗ್ರಾಮೀಣ ವಿದ್ಯಾರ್ಥಿನಿಯು ಮರು ಮೌಲ್ಯಮಾಪನದಲ್ಲಿ ೫೮೧ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪಿ.ವಾಣಿ ಅವರು ಮೊದಲಿಗೆ ೫೭೮ ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದರು. ರಾಜ್ಯಶಾಸ್ತ್ರ ವಿಷಯದಲ್ಲಿ ೯೦ ಅಂಕಗಳು ಬಂದಿದ್ದರಿಂದ ಆ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೊಳಪಡಿಸಿದಾಗ ೩ ಅಂಕಗಳು ಸೇರ್ಪಡೆಗೊಂಡು ೯೩ ಅಂಕಗಳು ಬಂದಿದ್ದರಿಂದ ಒಟ್ಟು ೫೮೧ ಅಂಕಗಳೊಂದಿಗೆ ಶೇ.೯೬.೮೩ ರಷ್ಟು ಫಲಿತಾಂಶ ದಾಖಲಿಸಿ ಕಲಾ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪಿ ವಾಣಿಯ ಈ ಅತ್ಯುತ್ತಮ ಸಾಧನೆಗೆ ಚಳ್ಳಕೆರೆ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ರಘುಮೂರ್ತಿ, ಉಪಾಧ್ಯಕ್ಷ ಟಿ.ಬಾಬುರೆಡ್ಡಿ, ಸದಸ್ಯರು, ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೃಷ್ಣಪ್ಪ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.


