ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲೆಯ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧನಂಜಯ ಹಾಗೂ ಸುಮಿತ್ರಾ ದಂಪತಿಯ ಪುತ್ರ ಪ್ರಥಮ್, ಪುದುಚೇರಿಯಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 'ಯು-20 ಬಾಲಕರ 3000 ಮೀಟರ್ ಓಟದ ಸ್ಪರ್ಧೆ'ಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ಸರಣಿಯಲ್ಲಿ ಪ್ರಥಮ್ ಗೆದ್ದುಕೊಂಡ ಎರಡನೇ ಚಿನ್ನದ ಪದಕ ಇದಾಗಿದ್ದು, ತಮ್ಮ ಅದ್ಭುತ ಕ್ರೀಡಾ ಸಾಧನೆಯ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅಪಾರ ಹೆಮ್ಮೆ ತಂದಿಟ್ಟಿದ್ದಾರೆ.
ಈ ಅದ್ಭುತ ಸಾಧನೆಗೆ ಸಿ.ಟಿ. ರವಿ ಅವರು ಯುವ ಕ್ರೀಡಾಪಟು ಪ್ರಥಮ್‌ಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಜಯ ಹಾಗೂ ಪದಕಗಳನ್ನು ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.




