Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಮಿಷನ್ ಹಣದಿಂದ ಚಿನ್ನದ ಗಣಿ ಖರೀದಿ: ಸಚಿವ ಸತೀಶ್ ಜಾರಕಿಹೊಳಿ ವಜಾಕ್ಕೆ ಅಶೋಕ್ ಒತ್ತಾಯ 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
​ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಲೂಟಿಗೆ ಮಿತಿಯಿಲ್ಲದಂತಾಗಿದ್ದು
, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ತಕ್ಷಣವೇ ವಜಾಗೊಳಿಸಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಗ್ರಹ ಮಾಡಿದ್ದಾರೆ. 

​ಇ.ಡಿ ತನಿಖೆಯ ವರದಿಗಳನ್ನು ಉಲ್ಲೇಖಿಸಿರುವ ಅಶೋಕ್, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಟೆಂಡರ್ ನೀಡುವುದಕ್ಕಾಗಿ ಗುತ್ತಿಗೆದಾರರಿಂದ ಲಂಚ ಪಡೆದು, ಆ ಹಣವನ್ನು ಆಫ್ರಿಕಾದ ಕಾಂಗೋದ ಚಿನ್ನದ ಗಣಿ ಕಂಪನಿಯಲ್ಲಿ ಶೇ. 40ರಷ್ಟು ಪಾಲು ಖರೀದಿಸಲು ಬಳಸಲಾಗಿದೆ ಎಂದು ಕಿಡಿಕಾರಿದ್ದಾರೆ. 

Advertisement

​​ವಿದೇಶಗಳಲ್ಲಿ ಕೋಟಿ ಕೋಟಿ ಹೂಡಿಕೆ: ಸಚಿವರ ಮಗಳು ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮಗ ರಾಹುಲ್, ತಂಗಿ ಸೇರಿದಂತೆ ಕುಟುಂಬಸ್ಥರ ಹೆಸರಿನಲ್ಲಿ ವಿದೇಶಿ ಕಂಪನಿಗಳು ಹಾಗೂ ಚಿನ್ನದ ಗಣಿಗಳಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡಲಾಗಿದೆ. 

​ಬಡವರ ಹೊಟ್ಟೆ ಹೊಡೆದ ಹಣ: ರಾಜ್ಯದ ತೆರಿಗೆದಾರರ ಹಣ ಮತ್ತು ಲಂಚದ ಕಮಿಷನ್ ಹಣವನ್ನು ವಿದೇಶದ ಆಸ್ತಿಗಳಲ್ಲಿ ತೊಡಗಿಸುತ್ತಿರುವ ‘ಕಮಿಷನ್ ಕಾಂಗ್ರೆಸ್ ಸರ್ಕಾರ’ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದೆ. 

​ಸಿಎಂ ಡಿಕೆಶಿಗೆ ಸವಾಲು: "ಹತ್ತು ರೂಪಾಯಿ ಲಂಚ ಕೇಳಿದರೂ ನನಗೆ ತಿಳಿಸಿ" ಎಂದು ಹೇಳಿಕೆ ನೀಡುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆತ್ಮಸಾಕ್ಷಿ ಇದ್ದರೆ, ಇ.ಡಿ ತನಿಖೆ ಪೂರ್ಣಗೊಳ್ಳುವವರೆಗೆ ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ತಕ್ಷಣ ಹೊರಗಿಡಬೇಕು. 

​ಜನರ ಹಿತ ಬಲಿಕೊಟ್ಟು ವಿದೇಶಗಳಲ್ಲಿ ಆಸ್ತಿ ಗಳಿಕೆಗೆ ಇಳಿದಿರುವ ಈ ಸರ್ಕಾರದ ವಿರುದ್ಧ ರಾಜ್ಯದ ಜನ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ