Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೊಟ್ಟೂರು ಜನತೆಗೆ ರೈಲ್ವೆ ಇಲಾಖೆಯ ಬಿಗ್ ಗಿಫ್ಟ್: ಮೈಸೂರು–ಅಜ್ಮೀರ್ ನಡುವೆ ನೂತನ ರೈಲು ಸಂಚಾರ ಪ್ರಾರಂಭ!

ಚಂದ್ರವಳ್ಳಿ ನ್ಯೂಸ್, ಕೊಟ್ಟೂರು:
ವಿಜಯನಗರ ಜಿಲ್ಲೆಯ ಕೊಟ್ಟೂರು ಮಾರ್ಗವಾಗಿ ಹೊಸಪೇಟೆ
–ಅರಸೀಕೆರೆ ನಡುವೆ ನೂತನ ರೈಲು ಸಂಚಾರ ಆರಂಭಗೊಂಡ ವಾರದ ಬೆನ್ನಲ್ಲೇ, ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಮೈಸೂರು ಮತ್ತು ರಾಜಸ್ಥಾನದ ಅಜ್ಮೀರ್‌ನಡುವೆ ಹೊಸ ರೈಲು ಸೇವೆಯನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಸ್ಥಳೀಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ವೇಳಾಪಟ್ಟಿ ಹಾಗೂ ಪ್ರಯಾಣದ ವಿವರ:
ಮೈಸೂರು
– ಅಜ್ಮೀರ್ (ರೈಲು ಸಂಖ್ಯೆ 16281): ಸೆಪ್ಟೆಂಬರ್ 5 ರಿಂದ ಪ್ರತಿ ಶನಿವಾರ ಬೆಳಿಗ್ಗೆ 8:00 ಗಂಟೆಗೆ ಮೈಸೂರಿನಿಂದ ಹೊರಡಲಿರುವ ರೈಲು, ಸೆಪ್ಟೆಂಬರ್ 7ರ ಬೆಳಿಗ್ಗೆ 4:35ಕ್ಕೆ ಅಜ್ಮೀರ್‌ತಲುಪಲಿದೆ.

Advertisement

ಅಜ್ಮೀರ್ – ಮೈಸೂರು (ರೈಲು ಸಂಖ್ಯೆ 16282): ಸೆಪ್ಟೆಂಬರ್ 7 ರಂದು ಅಜ್ಮೀರ್‌ನಿಂದ ಸೋಮವಾರ ಸಂಜೆ 6:50ಕ್ಕೆ ಹೊರಟು, ಸೆಪ್ಟೆಂಬರ್ 9 ರ ರಾತ್ರಿ 7:00 ಗಂಟೆಗೆ ಮೈಸೂರು ತಲುಪಲಿದೆ.

ವಾರಕ್ಕೊಮ್ಮೆ ಸಂಚರಿಸಲಿರುವ ಈ ವಿಶೇಷ ರೈಲು ಸಂಪೂರ್ಣ ಪ್ರಯಾಣಕ್ಕೆ 44 ಗಂಟೆ 35 ನಿಮಿಷಗಳ ಸಮಯ ತೆಗೆದುಕೊಳ್ಳಲಿದೆ. ಕೊಟ್ಟೂರು ಮಾರ್ಗವಾಗಿ ಸಂಚರಿಸುತ್ತಿರುವ ಪ್ರಥಮ ಅಂತಾರಾಜ್ಯ ರೈಲು ಇದಾಗಿದ್ದು, ಮೂರು ತಿಂಗಳ ಹಿಂದಷ್ಟೇ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿತ್ತು.

38 ಪ್ರಮುಖ ನಗರಗಳ ಸಂಪರ್ಕ:
ಕರ್ನಾಟಕ
, ಮಹಾರಾಷ್ಟ್ರ, ಗುಜರಾತ್‌ಮತ್ತು ರಾಜಸ್ಥಾನ ರಾಜ್ಯಗಳ ಒಟ್ಟು 38 ಪ್ರಮುಖ ನಗರಗಳನ್ನು ಈ ರೈಲು ಸಂಪರ್ಕಿಸಲಿದೆ. ಮೈಸೂರಿನಿಂದ ಹೊರಟು ಕೆ.ಆರ್. ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ ಮಾರ್ಗವಾಗಿ ಶನಿವಾರ ಮಧ್ಯಾಹ್ನ 2:53ಕ್ಕೆ ಕೊಟ್ಟೂರಿಗೆ ಆಗಮಿಸಲಿದೆ. ಬಳಿಕ ಟಿ.ಬಿ. ಡ್ಯಾಂ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ ಹಾಗೂ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ಪ್ರವೇಶಿಸಲಿದೆ.

ರೈಲಿನ ಬೋಗಿಗಳ ಸಂರಚನೆ:
ಒಟ್ಟು
18 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ: ಸಾಮಾನ್ಯ ಬೋಗಿಗಳು, ಜನರಲ್ ಸ್ಲೀಪರ್ ಕೋಚ್‌ಗಳು.

ತ್ರಿ-ಟೈಯರ್ ಎಸಿ (3-Tier AC), ಟೂ-ಟೈಯರ್ ಎಸಿ (2-Tier AC), ಕೋಚ್ (First AC).
ಪ್ರಯಾಣಿಕರಲ್ಲಿ ಉಂಟಾದ ಅಸಮಾಧಾನ:
ಇದು ಸೀಮಿತ ನಿಲ್ದಾಣಗಳನ್ನು ಹೊಂದಿರುವ ಎಕ್ಸ್‌ಪ್ರೆಸ್ ರೈಲಾಗಿರುವುದರಿಂದ ಹರಪನಹಳ್ಳಿ
, ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ಭಾಗದ ಮುಖ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡದಿರುವುದು ಅಲ್ಲಿನ ಸ್ಥಳೀಯ ಪ್ರಯಾಣಿಕರಲ್ಲಿ ಕೊಂಚ ನಿರಾಸೆ ಮೂಡಿಸಿದೆ.

ಆದಾಗ್ಯೂ, ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಸಂಪೂರ್ಣಗೊಂಡ ನಂತರ ಇನ್ನು ಹೆಚ್ಚಿನ ದೂರದೂರಿನ ರೈಲುಗಳು ಸಂಚರಿಸಲಿವೆ ಎಂಬ ಭರವಸೆಯಲ್ಲಿ ಕೊಟ್ಟೂರು ಭಾಗದ ರೈಲು ಪ್ರಯಾಣಿಕರಿದ್ದಾರೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಕೇಂದ್ರ ತಂಡಕ್ಕೆ ಟಿ.ಬಿ. ಜಯಚಂದ್ರ ಮನವಿರಾಹುಲ್ ಗಾಂಧಿ 'ಚೀನಾ-ಪಾಕ್ ಏಜೆಂಟ್' ಎಂದ ಶಾಸಕ; ಸಿದ್ದರಾಮಯ್ಯಗೆ ಕಾಂಗ್ರೆಸ್ ಬಿಡುವಂತೆ ಬಹಿರಂಗ ಸಲಹೆ!ಹಿರಿಯ ಚಲನಚಿತ್ರ ಮಾಂತ್ರಿಕ ಸಿಂಗೀತಂ ಶ್ರೀನಿವಾಸ ರಾವ್ ಇನ್ನಿಲ್ಲ: ಗಣ್ಯರಿಂದ ಕಂಬನಿಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಮುರಿದುಬಿದ್ದ ಎಲ್‌ಇಡಿ ಕಮಾನು; ವೃದ್ಧ ಸೇರಿ ಹಲವರಿಗೆ ಗಾಯಕರ್ನಾಟಕ, ಕೇರಳದಲ್ಲೂ 'ವೋಟ್ ಚೋರಿ' ಆಗಿದ್ರೆ ಸರ್ಕಾರಕ್ಕೆ ರಾಜೀನಾಮೆ ಕೊಡಿಸಿ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲುಹಿರಿಯ ಐಎಎಸ್‌ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ಜವಾಬ್ದಾರಿ ಹಂಚಿಕೆಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ ಕಿರುಕುಳ"ರಾಹುಲ್ ಗಾಂಧಿಗೆ ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿಕೆಯಿತ್ತು": ಸಂಸದರ ವಿವಾದಾತ್ಮಕ ಹೇಳಿಕೆವೀಳ್ಯದೆಲೆ, ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿದ ನಿಖಿಲ್ ಕುಮಾರಸ್ವಾಮಿದಸರಾ ವಿಜೃಂಭಣೆಗೆ ಸಿದ್ಧತೆ: ರಾಜಕೀಯ ರಹಿತ, ವೈಭವದ ದಸರಾಗೆ ಡಿ.ಕೆ. ಶಿವಕುಮಾರ್ ಕರೆ