Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೇಣುಕಾಸ್ವಾಮಿ ಕೊಲೆ: ಜಾಮೀನು ನಿರ್ಬಂಧ ಸಡಿಲಿಕೆಗೆ ಸುಪ್ರೀಂ ಕೋರ್ಟ್‌ಗೆ ನಟ ದರ್ಶನ್ ಮೇಲ್ಮನವಿ!

Advertisement
Advertisement

ಚಂದ್ರವಳ್ಳಿ ನ್ಯೂಸ್, ನವದೆಹಲಿ:
 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್, ತಮಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ವಿಧಿಸಲಾಗಿರುವ ಒಂದು ವರ್ಷದ ಸುದೀರ್ಘ ನಿರ್ಬಂಧವನ್ನು ಸಡಿಲಿಸುವಂತೆ ಕೋರಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ದರ್ಶನ್ ಸಲ್ಲಿಸಿರುವ ಈ ಹೊಸ ಅರ್ಜಿಯ ಪ್ರಮುಖ ಮುಖ್ಯಾಂಶಗಳು: "ವಿಚಾರಣೆ ತೀರಾ ವಿಳಂಬವಾಗುತ್ತಿದೆ" ದರ್ಶನ್ ಅಳಲು:
ಮೇ 15ರಂದು ನಡೆದಿದ್ದ ರಿಟ್ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್, "ಒಂದು ವರ್ಷದೊಳಗೆ ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದಲ್ಲಿ ಆರೋಪಿ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು" ಎಂದು ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿರುವ ಪ್ರಮುಖ ಅಂಶಗಳೆಂದರೆ, ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಒಟ್ಟು 262 ಸಾಕ್ಷಿಗಳ ವಿಚಾರಣೆ ನಡೆಸಲು ಉದ್ದೇಶಿಸಿದೆ. ಆದರೆ ಸದ್ಯದ ಪ್ರಗತಿ ನೋಡಿದರೆ ವಿಚಾರಣೆ ಮುಗಿಯಲು ಸುದೀರ್ಘ ಕಾಲ ಹಿಡಿಯುವ ಸಾಧ್ಯತೆಯಿದೆ.

ಮೇ 15ರ ಆದೇಶದ ಬಳಿಕ ಕೋರ್ಟ್ ತ್ವರಿತ ವಿಚಾರಣೆಗೆ ಒತ್ತು ನೀಡಿದ್ದರೂ, ಕೇವಲ ಇಬ್ಬರು ಸಾಕ್ಷಿಗಳನ್ನು ಮಾತ್ರ ವಿಚಾರಣೆಗೊಳಪಡಿಸಲಾಗಿದೆ.

ವಿಚಾರಣೆಗೆ ಒಳಗಾದ ಈ ಇಬ್ಬರೂ ಕೇವಲ ಔಪಚಾರಿಕ (ಮಹಜರ್) ಸಾಕ್ಷಿಗಳಾಗಿದ್ದು, ಯಾವುದೇ ಪ್ರಮುಖ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿ, ದೂರುದಾರರು ಅಥವಾ ತನಿಖಾಧಿಕಾರಿಗಳ ವಿಚಾರಣೆ ಇನ್ನೂ ನಡೆದಿಲ್ಲ.

ಕಾನೂನಿಗೆ ಗೌರವ ನೀಡಿದ್ದೇನೆ: ಅರ್ಜಿಯಲ್ಲಿ ಉಲ್ಲೇಖ:
ತಮ್ಮ ಸುದೀರ್ಘ ಜೈಲುವಾಸದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಿರುವ ದರ್ಶನ್: "ನಾನು 2025ರ ಆಗಸ್ಟ್‌ನಿಂದ ನಿರಂತರವಾಗಿ ಜೈಲಿನಲ್ಲಿದ್ದು, ಸಂಬಂಧಪಟ್ಟ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಿದ್ದೇನೆ. ಯಾವುದೇ ಹಂತದಲ್ಲೂ ವಿಚಾರಣೆಗೆ ಹಾಜರಾಗಲು ವಿಳಂಬ ಮಾಡಿಲ್ಲ ಅಥವಾ ತನಿಖೆಯ ಪ್ರಗತಿಗೆ ಅಡ್ಡಿಪಡಿಸಲು ಯತ್ನಿಸಿಲ್ಲ," ಎಂದು ತಿಳಿಸಿದ್ದಾರೆ.

ನಿರ್ಬಂಧ ಸಡಿಲಿಕೆಗೆ ಮನವಿ:
ವಿಚಾರಣೆಯು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ತಮಗೆ ವಿಧಿಸಲಾಗಿರುವ ಒಂದು ವರ್ಷದ ಕಾಲಮಿತಿಯ ನಿರ್ಬಂಧ ಸಡಿಲಗೊಳಿಸಬೇಕು ಮತ್ತು ಮುಂಚಿತವಾಗಿಯೇ ನಿಯಮಿತ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ದರ್ಶನ್ ಸುಪ್ರೀಂ ಕೋರ್ಟ್‌ಗೆ ವಿನಂತಿಸಿಕೊಂಡಿದ್ದಾರೆ. ಸದ್ಯ ದರ್ಶನ್ ಸಲ್ಲಿಸಿರುವ ಈ ಹೊಸ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.