ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ ವತಿಯಿಂದ ದಿನಾಂಕ 20-09-2026ರಂದು ಮಧ್ಯಾಹ್ನ 12 ಗಂಟೆಗೆ 'ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ'ವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಇಂಜಿನಿಯರ್ಸ್ ಅಕಾಡಮಿ, ಸಿ.ಎ.ಸೈಟ್ ನಂ.1, 8ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕಮಲಾನಗರ, ಬಸವೇಶ್ವರ ನಗರ, ಬೆಂಗಳೂರು-560079.ಉದ್ಘಾಟನೆ: ಟಿ.ಬಿ. ಜಯಚಂದ್ರ (ಮಾಜಿ ಸಚಿವರು, ಶಿರಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಪ್ರತಿನಿಧಿ, ನವದೆಹಲಿ).
ಅಧ್ಯಕ್ಷತೆ: ಎಸ್.ಕೆ.ಲಕ್ಷ್ಮಣ್ ಕೆ.ಎ.ಎಸ್, (ಅಧ್ಯಕ್ಷರು, ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘ).
ಪ್ರಸ್ತಾವಿಕ ನುಡಿ: ಜಿ.ಹೆಚ್.ನಾಗಹನುಮಯ್ಯ ಕೆ.ಎ.ಎಸ್ (ಕಾರ್ಯದರ್ಶಿಗಳು, ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘ).
ಗೌರವಾನ್ವಿತ ಅತಿಥಿಗಳಾಗಿ ಡಾ.ಕೆ.ಜಯಪ್ರಕಾಶ್ (ಸರ್ಕಾರದ ನಿವೃತ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ತುಮಕೂರು), ಡಾ.ಜಿ.ರಾಜು (ನಿವೃತ್ತ ಡೆಪ್ಯೂಟಿ ಕಮಿಷನರ್, ಬಿ.ಬಿ.ಎಂ.ಪಿ, ಬೆಂಗಳೂರು), ಆರ್. ಅಳಗೇಶನ್ ರಂಗಸ್ವಾಮಿ (ನಿವೃತ್ತ ಚೇರ್‌ಮನ್, ಜಲಶಕ್ತಿ ಸಚಿವಾಲಯ, ಭಾರತ ಸರ್ಕಾರ), ಸಿ. ಆರ್. ಹರೀಶ್ (ಆಡಳಿತ ಮಂಡಳಿಯ ಸದಸ್ಯರು, ಕೆ.ಎಸ್.ಸಿ.ಎ, ಬೆಂಗಳೂರು). ಸಂಘದ ಅಧ್ಯಕ್ಷರಾದ ಎಸ್.ಕೆ.ಲಕ್ಷ್ಮಣ್ ಹಾಗೂ ಕಾರ್ಯದರ್ಶಿ ಜಿ.ಹೆಚ್.ನಾಗಹನುಮಯ್ಯ ಅವರು ಸರ್ವರಿಗೂ ಆದರದ ಸುಸ್ವಾಗತ ಕೋರಿದ್ದಾರೆ.




