E-PAPER
13 Nov 2026, 11:10:02 AM|
Gold₹13630/gGold24K ₹13,630/g - 22K ₹12,494/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

​ರಾಜ್ಯದಲ್ಲಿ ಭೀಕರ ಬರ: ಬರ ಮಾನದಂಡಗಳ ತಿದ್ದುಪಡಿಗೆ ಕೇಂದ್ರಕ್ಕೆ ಪತ್ರ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಪ್ರಿಯಾಂಕ್ ಖರ್ಗೆ ಆಗ್ರಹ

ಚಂದ್ರವಳ್ಳಿ ನ್ಯೂಸ್ ಬೆಂಗಳೂರು: ಇತ್ತೀಚಿನ ವರ್ಷಗಳಲ್ಲೇ ಕರ್ನಾಟಕ ಅತ್ಯಂತ ಕಠಿಣ ಮುಂಗಾರು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಕೇಂದ್ರ ಸರ್ಕಾರದ ಬರ ಮೌಲ್ಯಮಾಪನ ಮಾನದಂಡಗಳನ್ನು ತುರ್ತಾಗಿ ಬದಲಾಯಿಸಬೇಕು ಎಂದು ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ, ರಾಜ್ಯದ ಬರ ಪರಿಸ್ಥಿತಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.
​ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ಶೇ. 42 ರಷ್ಟು ಮತ್ತು ಜುಲೈನಲ್ಲಿ ಶೇ. 34 ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆಯಾದ ಶೇ. 80 ರಷ್ಟು ಬೆಳೆಗಳು ಈಗಾಗಲೇ ಹಾನಿಗೊಳಗಾಗಿದ್ದು, ಜಲಾಶಯಗಳ ಒಳಹರಿವು ಹಾಗೂ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವರ ಪತ್ರದಲ್ಲಿನ 5 ಪ್ರಮುಖ ಪ್ರಸ್ತಾಪಗಳು:
​ರೈತರಿಗೆ ತಕ್ಷಣ ಪರಿಹಾರ ತಲುಪಿಸಲು ಪ್ರಸ್ತುತ ಇರುವ ಬರ ಮಾನದಂಡಗಳಿಗೆ ತಿದ್ದುಪಡಿ ತರಲು ಕಂದಾಯ ಸಚಿವರು ಪತ್ರದಲ್ಲಿ ಐದು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ:

'ಫ್ರೂಟ್ಸ್' (FRUITS) ಡೇಟಾಬೇಸ್ ಬಳಕೆ: ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಲು ಹಳೆಯ 2015-16ರ ಕೃಷಿ ಗಣತಿಯ ಬದಲಿಗೆ ಕರ್ನಾಟಕದ ರಿಯಲ್-ಟೈಮ್ 'ಫ್ರೂಟ್ಸ್' ತಂತ್ರಾಂಶವನ್ನು ಬಳಸಬೇಕು. ಹಳೇ ಗಣತಿ ಪ್ರಕಾರ ರಾಜ್ಯದಲ್ಲಿ ಶೇ. 43.94 ರಷ್ಟು ಮಾತ್ರ ಸಣ್ಣ ರೈತರಿದ್ದಾರೆ, ಆದರೆ ಸರ್ಕಾರದ 'ಫ್ರೂಟ್ಸ್' ಡೇಟಾಬೇಸ್ ಪ್ರಕಾರ ಸದ್ಯ ಈ ಪ್ರಮಾಣ ಶೇ. 83 ರಷ್ಟಿದೆ.

ಕೈಪಿಡಿಗಳ ಸಮನ್ವಯ: ಬರ ನಿರ್ವಹಣಾ ಕೈಪಿಡಿ-2020 ಮತ್ತು SDRF/NDRF ಮಾರ್ಗಸೂಚಿಗಳ ನಡುವಿನ ಗೊಂದಲಗಳನ್ನು ನಿವಾರಿಸಿ, ನಿಯಮಗಳನ್ನು ಸರಳಗೊಳಿಸಬೇಕು. ಇದರಿಂದ ಪರಿಹಾರ ವಿಳಂಬವಾಗುವುದನ್ನು ತಡೆಯಬಹುದು.

ಅಸಮರ್ಪಕ ಮಳೆ ವಿತರಣೆಯ ಪರಿಗಣನೆ: ಕೇವಲ ಇಡೀ ಹಂಗಾಮಿನ ಒಟ್ಟಾರೆ ಮಳೆಯನ್ನು ಲೆಕ್ಕ ಹಾಕದೆ, ಬಿತ್ತನೆ ಅವಧಿಯಲ್ಲಿ ಉಂಟಾಗುವ ಮಳೆಯ ಕೊರತೆ ಮತ್ತು ಅಸಮರ್ಪಕ ಮಳೆ ವಿತರಣೆಯನ್ನೂ ಬರ ಮೌಲ್ಯಮಾಪನಕ್ಕೆ ಮುಖ್ಯ ಮಾನದಂಡವಾಗಿ ಪರಿಗಣಿಸಬೇಕು.
​'ಡ್ರೈ ಸ್ಪೆಲ್' (ಮಳೆ ರಹಿತ ಅವಧಿ) ವ್ಯಾಖ್ಯಾನದ ನವೀಕರಣ: ಸ್ಥಳೀಯ ಹವಾಮಾನ ಮತ್ತು ಬೆಳೆಗಳ ಮೇಲಾಗುವ ನೈಜ ಪರಿಣಾಮವನ್ನು ಆಧರಿಸಿ 'ಡ್ರೈ ಸ್ಪೆಲ್'ನ ಪ್ರಸ್ತುತ ವ್ಯಾಖ್ಯಾನವನ್ನು ನವೀಕರಿಸಬೇಕು.

ರಾಜ್ಯಗಳಿಗೆ ಸ್ವಾಯತ್ತತೆ: ಬದಲಾಗುತ್ತಿರುವ ಆನ್-ಫೀಲ್ಡ್ ಪರಿಸ್ಥಿತಿಗಳು ಮತ್ತು ವೈಜ್ಞಾನಿಕ ಸೂಚಕಗಳ ಆಧಾರದ ಮೇಲೆ ಬರ ಘೋಷಿಸಲು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ನಮ್ಯತೆ (Flexibility) ನೀಡಬೇಕು.

​'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಿ: ಪ್ರಿಯಾಂಕ್ ಖರ್ಗೆ
​"ರಾಜ್ಯದಲ್ಲಿ ಮಳೆ ಕೊರತೆಯ ಪ್ರಮಾಣ ಮತ್ತು ಕುಡಿಯುವ ನೀರಿನ ತೀವ್ರ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಪ್ರಸ್ತುತ ಪರಿಸ್ಥಿತಿಯನ್ನು 'ರಾಷ್ಟ್ರೀಯ ವಿಪತ್ತು' (Calamity of National Significance) ಎಂದು ಪರಿಗಣಿಸಬೇಕು. ಬಿಕ್ಕಟ್ಟಿನ ತೀವ್ರತೆಗೆ ಅನುಗುಣವಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು," ಎಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಒನಕೆ ಓಬವ್ವ ಜಯಂತಿಅಭಿವೃದ್ಧಿಯ ವಿಚಾರದಲ್ಲಿ ತಾಲೂಕು 15 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ... ಮಾಜಿ ಶಾಸಕ ಟಿ. ವೆಂಕಟರಮಣಯ್ಯಪ್ರೌಢಶಿಕ್ಷಣ ವಿದ್ಯಾರ್ಥಿ ಜೀವನದ ಅತ್ಯುತ್ತಮ ಘಟ್ಟ-ಉಮಾರಬ್ಬಅಕ್ರಮ ಇ-ಖಾತಾ ಹಂಚಿಕೆ: ಕಂದಾಯ ಅಧಿಕಾರಿಗಳು ಸೇರಿ 31 ಮಂದಿ ವಿರುದ್ಧ ಎಫ್‌ಐಆರ್ನಿಗಮ-ಮಂಡಳಿಗಳಿಗೆ 428 ಮಂದಿ ನಿರ್ದೇಶಕರು, ಸದಸ್ಯರ ನಾಮ ನಿರ್ದೇಶನ; ಶೀಘ್ರದಲ್ಲೇ ಅಧ್ಯಕ್ಷರ ಪಟ್ಟಿ ಪ್ರಕಟಯಾರಿಗೂ ಕೆಡುಕು ಬಯಸದೆ, ಉತ್ತಮ ಆಡಳಿತ ನೀಡುವುದೇ ನನ್ನ ಬದ್ಧತೆ: ಸಿಎಂ ಶಿವಕುಮಾರ್ 2027ರ ಉತ್ತರ ಪ್ರದೇಶ ಚುನಾವಣೆಗೆ ಮೈತ್ರಿ; ಚಂದ್ರಶೇಖರ್ ಆಜಾದ್ ಸಿಎಂ ಅಭ್ಯರ್ಥಿ'ನನ್ನ ಸರ್ಕಾರ ಬೀಳಿಸಿದ್ದು ಯಾರು, ಈಗ ಶಾಸಕರನ್ನು ಸೆಳೆಯಲು ಏನು ಕುತಂತ್ರ ನಡೆಯುತ್ತಿದೆ': ಡಿಕೆಶಿಗೆ ಹೆಚ್‌ಡಿಕೆ ಖಡಕ್ ತಿರುಗೇಟುನೀರಿಗಾಗಿ ಹಾಹಾಕಾರ: ಬಿಂದಿಗೆ ನೀರಿಗೆ 5 ರೂ. ಕೊಟ್ಟು ಬದುಕುತ್ತಿರುವ ಗ್ರಾಮಸ್ಥರು!ಕರ್ನಾಟಕದ ಅಂತರ್ಜಲಕ್ಕೆ ವಿಷದ ಕಂಟಕ: ಯುರೇನಿಯಂ, ನೈಟ್ರೇಟ್, ಫ್ಲೋರೈಡ್ ಪ್ರಮಾಣ ಹೆಚ್ಚಳ