Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀಲಿ ಜೀನ್ಸ್ ಸ್ಕರ್ಟ್, ಸ್ಲೀವ್ ಲೆಸ್ ಶರ್ಟ್ ತೊಟ್ಟಿದ್ದ ಆಕೆ, ಒಂದು ಪ್ರೀತಿಯ ಹುಟ್ಟು...

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಪ್ರೀತಿಯ ಹುಟ್ಟು...............


ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ ತಲುಪಿ, ಅಲ್ಲಿಂದ ಬೆಂಗಳೂರಿಗೆ ಹೊರಡುತ್ತದೆ. ಸಾಮಾನ್ಯವಾಗಿ ಯಾವಾಗಲೂ ನನ್ನ ಆಯ್ಕೆ ಅದೇ ಆಗಿರುತ್ತಿತ್ತು.                

ಇಡೀ ದಿನದ ಕೆಲಸದ ಒತ್ತಡದಿಂದ ತುಂಬಾ ಆಯಾಸವಾಗಿ ನಿದ್ರೆ ಬರುತ್ತಿತ್ತು. ಅದನ್ನು ತಡೆಯಲು ಅಲ್ಲಿಯೇ ಇದ್ದ ಕಾಫಿ ಡೇ ಯಲ್ಲಿ ನನ್ನ ಇಷ್ಟದ MEXICAN COFFEE ಕುಡಿಯುತ್ತಾ ಕುಳಿತೆ. WATSAPP ತೆರೆದು ನೋಡಿ ಕೆಲವು ಸ್ನೇಹಿತರಿಗೆ ಸಂದೇಶ ಕಳುಹಿಸಿ ಬೇಕಂತಲೇ ಅವರ ನಿದ್ರೆಗೆ ಭಂಗ ಮಾಡಿ ಗೋಳಾಡಿಸಿದೆ.                             

ವಿಮಾನ ಸರಿಯಾದ ಸಮಯಕ್ಕೆ ಬಂದಿತು. EMIRATES ನ ಆ ಬೃಹತ್ ಅಂತರರಾಷ್ಟ್ರೀಯ ವಿಮಾನದಲ್ಲಿ ದೆಹಲಿಯ ಪ್ರಯಾಣಿಕರೇ ಹೆಚ್ಚಿಗೆ ಇದ್ದು ಬಹುತೇಕರು ಅಲ್ಲಿಯೇ ಇಳಿದರು. ಕೇವಲ 60 ಜನ ಮಾತ್ರ ಬೆಂಗಳೂರಿನತ್ತ ಹೊರಟೆವು. ಆರಾಮವಾಗಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಿದ್ರೆಗೆ ಜಾರಿದೆ. ಬೆಂಗಳೂರಿಗೆ ಸುಮಾರು 2 ಗಂಟೆ 20 ನಿಮಿಷದಷ್ಟು ಪ್ರಯಾಣ.

ವಿಮಾನ TAKE OFF ಆಗಿ 20 ನಿಮಿಷವೂ ಆಗಿರಲಿಲ್ಲ. ನನ್ನ ಮುಂದಿನ ಸೀಟಿನಿಂದ ಒಂದು ಹೆಣ್ಣು ಧ್ವನಿ UNEASINESS ನಿಂದ ನರಳುತ್ತಿರುವುದು ಕೇಳಿಸಿತು. ತಕ್ಷಣ ಎದ್ದು ನನ್ನಿಂದ ಏನಾದರೂ ಸಹಾಯ ಬೇಕೆ ಎಂದು ಕೇಳಿದೆ. ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು. ಅಲ್ಲಿನ ಪರಿಚಾರಕಿಯರಿಗೆ ಹೇಳಬೇಕು ಎನ್ನುವಷ್ಟರಲ್ಲಿ ನಾನು ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಲಿನ ಹವಾನಿಯಂತ್ರಿಣದ ತೊಂದರೆಗಾಗಿ  ಇರಲಿ ಎಂದು OTRIVIN ADULT NOSE DROPS ತಗೆದುಕೊಂಡು ಹೋಗಿರುತ್ತೇನೆ. ಈಗ ಅದರ ನೆನಪಾಗಿ ಬ್ಯಾಗಿನಿಂದ ಅದನ್ನು ತೆಗೆದುಕೊಟ್ಟೆ. ಆಕೆ ಅದನ್ನು ಉಪಯೋಗಿಸಿದ ಕೆಲ ನಿಮಿಷಗಳಲ್ಲೇ ನಿರಾಳ ಉಸಿರಾಟ ಸಾಧ್ಯವಾಯಿತು. ಆಕೆ ಅತಿ ಎನಿಸುವಷ್ಟು ಕೃತಜ್ಞತೆ ಅರ್ಪಿಸಿದಳು.                               

ಸಮಸ್ಯೆ ಪ್ರಾರಂಭವಾಗಿದ್ದು ಇಲ್ಲಿಂದಲೇ. ಆಕೆಯ ಸುಮಧುರ ಧ್ವನಿ, ಆಕರ್ಷಕ ರೂಪ, ಮಲ್ಲಿಗೆ ಹೂವಿನಂತ ನಗು, ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು. ಕನಸಿನ ಕನ್ಯೆ ಧರೆಗಿಳಿದು ಬಂದಂತ ಸೌಂದರ್ಯ ಅವಳಲ್ಲಿ ತುಂಬಿತ್ತು. ನೀಲಿ ಜೀನ್ಸ್ ಸ್ಕರ್ಟ್, ಸ್ಲೀವ್ ಲೆಸ್ MILK WHITE T SHIRT ತೊಟ್ಟಿದ್ದ ಆಕೆ CURLY HAIR ನಿಂದಾಗಿ  ನನಗೆ ಸಾಕ್ಷಾತ್ ಹಾಲಿವುಡ್ ನಟಿ ಮರ್ಲಿನ್ ಮೆನ್ರೋ ತರ ಕಾಣುತ್ತಿದ್ದಳು.                          

ಒಂದಷ್ಟು ಸಂಕೋಚ ಸ್ವಭಾವದ ನಾನು ನಾಚಿಕೆಯಿಂದಲೇ ಆಕೆಯೊಂದಿಗೆ ಮಾತಿಗಿಳಿದೆ. 

ಆಕೆಯ ಹೆಸರು ಸಮೃದ್ಧಿ. ಬೆಂಗಳೂರಿನವರು.. ಇಂಗ್ಲೆಂಡಿನ OXFORD SCHOOL OF ECONOMICS ನಲ್ಲಿ GRADUATION ಮಾಡಿ ಈಗತಾನೆ ಅಲ್ಲಿಂದ CONVOCATION CERTIFICATE ಪಡೆದು  ನೇರ ಬೆಂಗಳೂರಿನ ಅವಳ ಮನೆಗೆ ಹೊರಟಿದ್ದಳು. ಆಕೆಯ ಅಪ್ಪ ನಿವೃತ್ತ ಕರ್ನಲ್. ಅಮ್ಮ GYNOCALOGIST. ಮನೆ ಜೆ ಪಿ ನಗರದಲ್ಲಿ. ಮುಂದೆ ಬೆಂಗಳೂರಿನಲ್ಲಿಯೇ SERVICE ORIENTED BUSINESS ಮಾಡಬೇಕೆಂಬ ಯೋಜನೆಯಿದೆ. 

ನನ್ನನ್ನು ಸಣ್ಣದಾಗಿ ಪರಿಚಯಿಸಿಕೊಂಡೆ. LANDINGS ANNOUNCEMENT ಬಂದಾಗಲೇ ನಾನು ಈ ಲೋಕಕ್ಕೆ ಬಂದದ್ದು. ವಿಮಾನದ ಪೈಲೆಟ್ ಏನಾದರೂ ನನ್ನ ಸ್ನೇಹಿತನಾಗಿದ್ದಿದ್ದರೆ ಏನೋ ಒಂದು ನೆಪ ಹೇಳಿ ವಿಮಾನವನ್ನು ಮತ್ತೆ ದೆಹಲಿಗೇ ತಿರುಗಿಸು ಎಂದೇಳುತ್ತಿದ್ದೆ. ಅಷ್ಟರ ಮಟ್ಟಿಗೆ ಆಕೆಯ ಮೋಹಕ್ಕೆ ಒಳಗಾಗಿದ್ದೆ.                           

ಇಬ್ಬರೂ ಒಟ್ಟಿಗೆ ಕೆಳಗಿಳಿದು BAGGAGE COUNTER ಗೆ ಕಾಯುತ್ತಾ ನಿಂತಿರುವಾಗ ಆಕೆ ಕೇಳಿದಳು " ನೀವು ಇರುವುದೆಲ್ಲಿ" . ನಾನು R T NAGAR  ಎಂದು ಹೇಳಿದೆ. ಹೇಗೆ ಹೋಗುವಿರಿ ಕೇಳಿದಳು. TAXI ಎಂದೆ. ಬೇಡ ನನಗೆ ಅಪ್ಪ ಅವರ ಸಹಾಯಕನ ಜೊತೆ ಕಾರು ಕಳುಹಿಸಿದ್ದಾರೆ. ಹೇಗೂ ನಾನು ಹಾಗೆಯೇ ಹೋಗಬೇಕು DROP ಮಾಡುತ್ತೇನೆ ಎಂದಳು. ನಾನು ಸೌಜನ್ಯಕ್ಕೂ ಬೇಡ ಎನ್ನದೆ ಒಪ್ಪಿಕೊಂಡೆ.                   

ನಾವು ಹೊರಗೆ ಬರುತ್ತಿದ್ದಂತೆ ಆಕೆಯ ಕಾರು ನಮ್ಮ ಮುಂದೆ ನಿಂತಿತು. ಬೆಳಗಿನ ಸಮಯದಲ್ಲಿ AIRPORT ನಿಂದ ನನ್ನ ಮನೆ ತಲುಪಲು ಸುಮಾರು 30 ನಿಮಿಷ ಬೇಕಾಗುತ್ತದೆ. ಆ ಸಮಯದಲ್ಲಿ ನಮ್ಮ ನಡುವೆ ಫೋನ್ ನಂಬರ್, WATSAPP, FACEBOOK, INSTAGRAM , MAIL ID ಎಲ್ಲಾ ವಿನಿಮಯವಾಯಿತು. ಬೇಡವೆಂದರೂ ಮನೆಯ ಗೇಟಿನ ಹತ್ತಿರವೇ ಕಾರು ನಿಲ್ಲಿಸಿ, ಕೆಳಗಿಳಿದು SHAKE HAND ಮಾಡಿ ಮೊನಲಿಸಾಳಂತೆ ಒಂದು ಸುಂದರ ನಗು ಬಿಸಾಡಿ ಟಾಟಾ ಮಾಡುತ್ತಾ ಹೊರಟು ಹೋದಳು.                    

ಮನಸ್ಸು ಒದ್ದಾಡತೊಡಗಿತು. ಮನೆಯಲ್ಲಿ ಸ್ವಲ್ಪ ನಿದ್ದೆ ಮಾಡೋಣ ಎಂದು ಮಲಗಿದೆ. ನಿದ್ದೆ ಹತ್ತಿರ ಸುಳಿಯಲಿಲ್ಲ. ಏನೋ ಒಂಥರ ಚೇತೋಹಾರಿ. ಎದ್ದು ಎಂದಿನಂತೆ GYM ಗೆ ಹೊರಟೆ. CORDIO ಮಾಡಲು TREADMILL ಮೇಲೆ ಓಡತೊಡಗಿದೆ. ಸಾಮಾನ್ಯವಾಗಿ ಪ್ರತಿದಿನ ಗಂಟೆಗೆ 12 ಕಿ.ಮೀ ವೇಗದಲ್ಲಿ 45/50 ನಿಮಿಷ ಓಡುತ್ತೇನೆ. ಇಂದು 5 ನಿಮಿಷವೂ ಸಾಧ್ಯವಾಗಲಿಲ್ಲ. ಕೆಳಗಿಳಿದು WEIGHT LIFT ಮಾಡಲು ಮುಂದಾದೆ. ಶಕ್ತಿಯೇ ಇರಲಿಲ್ಲ. ಮನಸ್ಸಿನ ತುಂಬಾ ಸಮೃಧ್ಧಿಯೇ ತುಂಬಿಕೊಂಡಿದ್ದಳು. GYM INSTRUCTOR ಗೆ ಏನೋ ನೆಪ ಹೇಳಿ ಮನೆಗೆ ವಾಪಸ್ ಬಂದೆ.                     

OFFICE ಗೆ ರೆಡಿಯಾಗಲು BATH ROOM ಹೊಕ್ಕೆ. ಅಲ್ಲಿರುವ FM RADIO ದಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಚಿತ್ರದ "ಆಗುಂಬೆಯಾ ಪ್ರೇಮ ಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ " ಹಾಡು ಬರುತ್ತಿತ್ತು. ಅದನ್ನು ಆಸ್ವಾದಿಸುತ್ತಾ ಎಂದಿನ 20 ನಿಮಿಷದ ಸ್ನಾನಕ್ಕೆ ಬದಲು BATH TUB ನಲ್ಲಿ ಖುಷಿ ಖುಷಿಯಾಗಿ ಒಂದು ಗಂಟೆ ಕಳೆದೆ.                       

ಮತ್ತೆ ರೆಡಿಯಾಗಿ BREAKFAST TABLE ಗೆ ಬರುವಷ್ಟರಲ್ಲಿ ಗುರುವಾರದ TIMETABLE ನಂತೆ ಅಮೆರಿಕನ್ ಶೈಲಿಯ BREAD - OMLET - CORNFLEX - FRUIT SALAD ಮತ್ತು AFRICAN TEA ಸಿದ್ದವಿತ್ತು. ಆದರೂ ತಿನ್ನುವ ಮನಸ್ಸಾಗಲಿಲ್ಲ. ಒಂದೆರಡು APPLE AND GRAPES ಪೀಸ್ ಬಾಯಿಗೆ ಹಾಕಿಕೊಂಡು ಅಷ್ಟರಲೇ ಮುಗಿಸಿ ನಾನೇ

ಕಾರ್ ಡ್ರೈವ್ ಮಾಡಿಕೊಂಡು OFFICE ಗೆ ಹೊರಟೆ.                               

TRAFFIC ದಿನವೂ IRRITATE ಮಾಡುತ್ತಿತ್ತು. ಆದರೆ ಇವತ್ತು ಅಸಹನೆ ಮೂಡಲೇ ಇಲ್ಲ. ಕಾರಿನ ಗ್ಲಾಸ್ ಕ್ಲೋಸ್ ಮಾಡಿ ಸಮೃಧ್ಧಿಯ ನೆನಪಿನಲ್ಲೇ ಸಾಗುತ್ತಿದ್ದೆ. FM ON ಮಾಡಿದೆ. ಯಾವುದೋ ಸಿನಿಮಾದ ಹಾಡು

" ಒಪ್ಕೊಂಡ್ ಬಿಟ್ಲು ಕಂಡ್ಲಾ.... ಪ್ರೀತಿ ಮಾಡೋಕೆ " ಬರುತ್ತಿತ್ತು. ಅದರ ಜೊತೆಗೆ ಹಾಡುತ್ತಾ ಒಳಗೊಳಗೆ ಹುಚ್ಚನಂತೆ ಒಬ್ಬನೇ ನಗುತ್ತಾ OFFICE ತಲುಪಿದೆ.                       

ನನ್ನ ಕ್ಯಾಬಿನ್ ನಲ್ಲಿ ಕುಳಿತು ಮಾಡಿದ ಮೊದಲ ಕೆಲಸವೆಂದರೆ ಆಕೆಗೆ FACEBOOK FRIEND REQUEST ಕಳುಹಿಸಿದ್ದು. ಆಮೇಲೆ WATSAPP CONNECT ಮಾಡಿ ಒಂದು ಪ್ರೀತಿಯ QUOTE ಇದ್ದ BEAUTIFUL GOOD MORNING MESSAGE ಕಳುಹಿಸಿದೆ. " ನಾನು ಒಬ್ಬನೇ ನಡೆಯುವಾಗ ನನಗೆ ಅನಿಸುತ್ತಿತ್ತು ನಾನು ನಡೆಯುತ್ತಿರುವ ದಾರಿ ಬೇಗ ಕೊನೆಯಾಗಲಿ ಎಂದು, ಆದರೆ ಇಂದು ನೀನು ಜೊತೆಯಾಗಿರುವಾಗ ನನಗೆ ಅನಿಸುತ್ತಿದೆ ನಾನು ನಡೆಯುತ್ತಿರುವ ದಾರಿ ಎಂದೂ ಕೊನೆಯಾಗದಿರಲಿ ಎಂದು....." 

ಅಷ್ಟರಲ್ಲಿ OFFICE ಸಹಾಯಕಿ ತಂದಿಟ್ಟ  ಅರೇಬಿಯನ್ ಟೀ ಕುಡಿಯುತ್ತಾ - ಕಿಟಕಿಯಾಚೆಗಿನ ದಿಗಂತವನ್ನು ನೋಡುತ್ತಾ ಪ್ರತಿ ಗುಟುಕಿನಲ್ಲೂ ಸಮೃಧ್ಧಿಯ ನೆನಪನ್ನು ಆಸ್ವಾದಿಸುತ್ತಾ ಮೈಮರೆತಿದ್ದೆ.                    

OFFICE ನಲ್ಲಿ ಮಾಡಲು ಬಹಳಷ್ಟು ಕೆಲಸವಿತ್ತು. ಆಂತರಿಕವಾಗಿ ದೃಢ ಮನಸ್ಸಿನ, ಕೆಲಸದಲ್ಲಿ ಅಪಾರ ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆ ಮತ್ತು HARD WORKER ಆದ ನಾನು ಇಂದೇಕೋ ಸಂಪೂರ್ಣ ಬದಲಾಗಿದ್ದೆ . ಹಗುರವಾದ ವಿವರಿಸಲಾಗದ ಮನಸ್ಸಿನ ಅಲೆಯಲ್ಲಿ ತೇಲುತ್ತಿದ್ದೆ.                           

ನೋಡ ನೋಡುತ್ತಿದ್ದಂತೆ ಮಧ್ಯಾಹ್ನ 1.30. ಊಟದ ಸಮಯ. ನನ್ನ ಟೇಬಲ್ ಗೆ ಮಂಗಳೂರು ಶೈಲಿಯ ಊಟದ ಥಾಲಿ ತಂದಿಟ್ಟರು. ANJAL FRY, ಬಾಂಗ್ ಡ ಕರಿ, WHITE PAMPLET ತವಾ ಫ್ರೈ, ನೀರ್ ದೋಸೆ ಮತ್ತು BOILED RICE. ಊಟಕ್ಕೆ ಕುಳಿತರೇ ಹಸಿವೇ ಇಲ್ಲ. ಸಮೃಧ್ಧಿಯೊಂದಿಗೆ ಮನ ವಿಹರಿಸುತ್ತಿತ್ತು. ಕೆದಕಿ ಕೆದಕಿ ಸ್ವಲ್ಪ ಅಂಜಲ್ ತಿಂದೆ. ಹಾಗೇ ಎದ್ದು ಬಿಟ್ಟೆ.                          

ನಿಧಾನವಾಗಿ ಅರ್ಥವಾಗತೊಡಗಿತು. ಪ್ರೀತಿಯ ಸೆಳೆತಕ್ಕೆ ಸಿಲುಕಿರಬಹುದೆಂದು. ಅರೆ ಕೇವಲ ಒಂದು ಭೇಟಿಯಿಂದಲೇ ಪ್ರೀತಿ ಮೂಡುತ್ತದೆಯೇ. ಇಲ್ಲ ಇಲ್ಲ ಇದು ನನ್ನ ಕಲ್ಪನೆ ಇರಬೇಕು ಎಂದು ಯೋಚಿಸುತ್ತಾ FACEBOOK OPEN ಮಾಡಿದೆ. ಆಕೆ REQUEST ACCEPT ಮಾಡಿದ್ದಳು. ನನ್ನ NOSE DROPS ಸಹಾಯಕ್ಕಾಗಿ ಮತ್ತೆ ಕೃತಜ್ಞತೆ ಸಲ್ಲಿಸಿ I LIKE YOUR  HELPING NATURE AND  LOOKING SMART TOO ಎಂದು INBOX MESSAGE ಬೇರೆ ಇತ್ತು. ಸ್ವರ್ಗಕ್ಕೆ ಮೂರೇ ಗೇಣಿದೆ ಎಂದು ಭಾವಿಸಿದೆ. ಅದಕ್ಕೆ ನನ್ನದೇ ಭಾಷೆಯಲ್ಲಿ ಉತ್ತರಿಸಿ WATSAPP OPEN ಮಾಡಿದೆ. ಅವಳೂ ಸುಂದರ ಸಂದೇಶದ GOOD MORNING MESSAGE ಕಳಿಸಿದ್ದಳು.                               

ಸಮಯ 4 ಗಂಟೆಯಾಯಿತು. ನನ್ನ ಟೀ ಟೇಬಲ್ ಮೇಲೆ ಕ್ಯೂಬನ್ ಕಾಫಿ ಮತ್ತು ಪಾಕಿಸ್ತಾನದ ಕರಾಚಿ ಬೇಕರಿಯ ರುಚಿಯಾದ, ಸಿಹಿಯಾದ DRY FRUIT BISCUIT ಇತ್ತು. ಆದರೆ ಸಮೃಧ್ಧಿಯ ನೆನಪಿನ ಸಿಹಿಯ ಮುಂದೆ ಅದು ರುಚಿಸಲಿಲ್ಲ. ಸ್ವಲ್ಪ ಮಾತ್ರ ಕಾಫಿ ಕುಡಿದೆ. OFFICE ನಲ್ಲಿ ಇರಲಾಗಲಿಲ್ಲ. ನೇರ ಮನೆಗೆ ಬಂದೆ. ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಸಂಜೆ ಎಂದಿನಂತೆ ಯೋಗ ಮತ್ತು ಧ್ಯಾನದ ಕ್ಲಾಸ್ ಗೆ ಹೊರಟೆ.                       

ಧ್ಯಾನದ ಸಮಯದಲ್ಲಿ ಉಸಿರಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದೆ. ಆದರೆ ಆ ಉಸಿರಿನಲ್ಲಿ ಸಮೃಧ್ಧಿಯೇ ಆಮ್ಲಜನಕವಾಗಿದ್ದಳು. ಅದರ ಪ್ರಮಾಣ ಎಷ್ಟಿತ್ತೆದಂರೆ ಯೋಗ ಟೀಚರ್ ಒಂದೆರಡು ಬಾರಿ ಭುಜ ಮುಟ್ಟಿ ಎಚ್ವರಿಸಬೇಕಾಯಿತು. ಹೇಗೋ ಅದನ್ನು ಒಂದು ಗಂಟೆ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಬೇಗ ಮಲಗೋಣ ಎಂದು DINING ಗೆ ಹೋದೆ.  ಚೀನೀ ಶೈಲಿಯ ಊಟ ಟೇಬಲ್ ಅಲಂಕರಿಸಿತ್ತು MIXED VEGETABLE SOUP, BOILD EGG, BROWN NOODLES AND GREEN TEA ಇತ್ತು.                  

ಎಲ್ಲಿಯ ಹಸಿವು, ಎಲ್ಲಿಯ ಊಟ. ಬೆಳಗಿನಿಂದ ವಿಶ್ವದ ಬೇರೆ ಬೇರೆ ಪ್ರದೇಶದ ಊಟ, ತಿಂಡಿ, ಕಾಫಿ ಟೀ ಇದ್ದರೂ ಮನಸ್ಸು ಮಾತ್ರ

" ಭಾರತೀಯನಾಗೇ " ಇತ್ತು. ಕೇವಲ ಗ್ರೀನ್ ಟೀ ಕುಡಿದು ಹಾಸಿಗೆಯ ಮೇಲೆ ಹೊರಳಿದೆ. ನಿದ್ದೆ ಹತ್ತಲಿಲ್ಲ. ಟಿವಿ ON ಮಾಡಿದೆ. ಯಾವುದೋ ಚಾನಲ್ ನಲ್ಲಿ ಶಾರುಕ್ ಖಾನ್ ಮತ್ತು ಕಾಜೋಲ್ ಅಭಿನಯದ

 " DILVALE DULHANIYA LEJAYENGE " ಸಿನಿಮಾ ಪ್ರಸಾರವಾಗುತ್ತಿತ್ತು. ಅದನ್ನು ಬಹಳಷ್ಟು ಬಾರಿ ನೋಡಿದ್ದರೂ ಇಂದು ಏನೋ ಹೊಸ ಹೊಸ ಅರ್ಥ ಮೂಡಿಸುತ್ತಿತ್ತು. ಮನಸ್ಸು ಹಗುರಾಗುತ್ತಿತ್ತು. ಕಣ್ಣು ಮಬ್ಬಾಗುತ್ತಿತ್ತು. ಆಗ WATSAPP SOUND ಮಾಡಿತು‌." HI SWEET ️ HAVE A SWEET DREAMS " ಸಮೃಧ್ಧಿಯ ಮೆಸೇಜ್ ...........................



ಪುಟ್ಟ ಮಗುವಿನಿಂದ ವೃಧ್ಧರವರೆಗೂ ಎರಡು ಭಿನ್ನ ಲಿಂಗಗಳ ಪ್ರೀತಿಯ ಆಕರ್ಷಣೆ ಸೃಷ್ಟಿಯ ಜೀವನೋತ್ಸಾಹದ ಕುರುಹಾಗಿ ಉಳಿದಿದೆ.........ಲೇಖನ:ವಿವೇಕಾನಂದ. ಎಚ್. ಕೆ. 9844013068........

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಸ್ಕಾಂನ ಪ್ರತಿಭಾವಂತ ಇಂಜಿನಿಯರ್ ರೇಣುಕಾಪ್ರಸಾದ್ ಇನ್ನಿಲ್ಲ​ಸಂದಿಗ್ದ ಪರಿಸ್ಥಿತಿಯಲ್ಲಿ ಹಿರಿಯೂರು ರಾಜಕೀಯ  NEET 2026 ರದ್ದು: ಯುವಜನತೆಯ ಕನಸಿಗೆ ಕೇಂದ್ರದ 'ಮಹಾವಂಚನೆ' – ಎಂ.ಬಿ. ಪಾಟೀಲ್ ಆಕ್ರೋಶಕರ್ನಾಟಕ-ಜಪಾನ್ ಬಾಂಧವ್ಯ ವೃದ್ಧಿ: ಜಪಾನ್ ರಾಯಭಾರಿಯೊಂದಿಗೆ ಸಚಿವ ಎಂ.ಬಿ. ಪಾಟೀಲ್ ಸಮಾಲೋಚನೆರಾಷ್ಟ್ರೀಯ ಪಂಚಾಯತ್ ಪುರಸ್ಕಾರ: ಕರ್ನಾಟಕದ 6 ಪಂಚಾಯತಿಗಳಿಗೆ ಐತಿಹಾಸಿಕ ಗೌರವ'ಆರಕ್ಷಕರೇ ಅಪರಾಧಿಗಳಾದರೆ ಜನರ ಪಾಡೇನು?': ಬಿ.ವೈ. ವಿಜಯೇಂದ್ರ ಆಕ್ರೋಶಕಾಂಗ್ರೆಸ್ ಸರ್ಕಾರ ಆಡಳಿತಾತ್ಮಕವಾಗಿ ದಿವಾಳಿ: ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿಕನ್ನಡ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ: ಬಹುಮುಖ ಪ್ರತಿಭೆ ದಿಲೀಪ್ ರಾಜ್ ಇನ್ನಿಲ್ಲ​ಕಾಂಗ್ರೆಸ್‌ಗೆ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಚರ್ಚಿಸುವ ನೈತಿಕತೆ ಇಲ್ಲ: ಕುಮಾರಸ್ವಾಮಿ ವಾಗ್ದಾಳಿಭ್ರಷ್ಟ ಕೆಪಿಎಸ್‌ಸಿ ವ್ಯವಸ್ಥೆಯ ವಿರುದ್ಧ ನಿಖಿಲ್ ಕುಮಾರಸ್ವಾಮಿ 'ಮಹಾಸಮರ'