Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯೂರಿನಲ್ಲಿ ಇಂದು 'ಶ್ರೀ ಶಕ್ತಿ ಗಣಪತಿ' ಬೃಹತ್ ವಿಸರ್ಜನಾ ಮೆರವಣಿಗೆ: ಖಾದಿ ರಮೇಶ್ ಮನವಿ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ನೆಹರೂ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ 55ನೇ ವರ್ಷದ 'ಶ್ರೀ ಶಕ್ತಿ ಗಣಪತಿ' ವಿಸರ್ಜನಾ ಮಹೋತ್ಸವವು ಭಾನುವಾರ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ವೈಭವದೊಂದಿಗೆ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ ಎಂದು ಶಕ್ತಿ ಗಣಪತಿ ಪೂಜಾ ಸಮಿತಿ ಅಧ್ಯಕ್ಷ ಖಾದಿ ರಮೇಶ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿವಂಗತ ಡಿ. ಸುಧಾಕರ್ ಅವರ ಕೃಪಾಶೀರ್ವಾದದೊಂದಿಗೆ ನೆಹರೂ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶೋತ್ಸವಕ್ಕೆ ನಗರದ ಸಾರ್ವಜನಿಕರು ಹಾಗೂ ಸರ್ವ ಧರ್ಮೀಯರು ಸಂಪೂರ್ಣ ಸಹಕಾರ ನೀಡಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿರುವ ಬೃಹತ್ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್/ಟಿ. ರಘುಮೂರ್ತಿ ಚಾಲನೆ ನೀಡಲಿದ್ದಾರೆ. ಶಾಸಕರು, ಜನಪ್ರತಿನಿಧಿಗಳು ಹಾಗೂ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.

ಮೆರವಣಿಗೆಯ ಪ್ರಮುಖ ಆಕರ್ಷಣೆಗಳು ಹಾಗೂ ಮಾರ್ಗ: ಕಲಾ ತಂಡಗಳು: ಮೆರವಣಿಗೆಯಲ್ಲಿ ಡಿಜೆ ವ್ಯವಸ್ಥೆ, ಕಹಳೆ ವಾದನ, ಬೊಂಬೆಯಾಟ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ನಾಡಿನ ವಿವಿಧ ಪ್ರಸಿದ್ಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಆಹಾರ ಸೇವೆಯ ವ್ಯವಸ್ಥೆ: ಮೆರವಣಿಗೆಯು ಮಂಟಪದಿಂದ ಆರಂಭವಾಗಿ ಆಸ್ಪತ್ರೆ ವೃತ್ತ, ರಂಜಿತಾ ಹೋಟೆಲ್ ಮಾರ್ಗವಾಗಿ ಗಿರೀಶ ಕಾಲೇಜು ತಲುಪಲಿದೆ. ಅಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ನಂತರ ಚರ್ಚ್ ರಸ್ತೆ ಹಾಗೂ ಹುಳಿಯಾರು ರಸ್ತೆ ಮೂಲಕ ಗಾಂಧಿ ವೃತ್ತ ತಲುಪಲಿದೆ.

ಅನ್ನದಾನ ಮತ್ತು ಉಪಹಾರ: ಮೆರವಣಿಗೆಯುದ್ದಕ್ಕೂ ಭಕ್ತಾದಿಗಳಿಗೆ ಬೆಳಗಿನ ತಿಂಡಿ, ಲಘು ಉಪಹಾರ, ಬಾಳೆಹಣ್ಣು, ಮಜ್ಜಿಗೆ, ಐಸ್‌ಕ್ರೀಮ್, ಬೋಂಡಾ, ಜಿಲೇಬಿ, ಜ್ಯೂಸ್, ಗೋಲ್ಗಪ್ಪ ಹಾಗೂ ಕುಡಿಯುವ ನೀರಿನ ಸೌಲಭ್ಯ ಏರ್ಪಡಿಸಲಾಗಿದೆ.

ಸಿಡಿಮದ್ದು ಮತ್ತು ವಿಸರ್ಜನೆ: ಗಾಂಧಿ ವೃತ್ತದಲ್ಲಿ ಕಣ್ಣುಕೋರೈಸುವ ಬಣ್ಣ ಬಣ್ಣದ ಸಿಡಿಮದ್ದಿನ ಪ್ರದರ್ಶನ ನಡೆಯಲಿದ್ದು, ಬಳಿಕ ನಗರದ ಹೊರವಲಯದ ಮರಡಿ ರಂಗಪ್ಪನ ಗುಡ್ಲು ರಸ್ತೆಯ ಪಾಂಡುರಂಗ ನಾಯಕನ ಹೊಲದಲ್ಲಿರುವ ಬಾವಿಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಗುವುದು. ವಿಸರ್ಜನಾ ಸ್ಥಳದಲ್ಲೂ ಲಘು ಉಪಹಾರ ಸೇವೆಯಿರಲಿದೆ.

ಸಾರ್ವಜನಿಕರಲ್ಲಿ ಮನವಿ: "ಶ್ರೀ ಶಕ್ತಿ ಗಣಪತಿಯು ಜಾತ್ಯತೀತತೆಯ ಸಂಕೇತವಾಗಿದ್ದು, ಎಲ್ಲಾ ವರ್ಗದ ಜನರು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಕಾರ್ಯಕರ್ತರು ಭೇದ-ಭಾವವಿಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ವಿಸರ್ಜನಾ ಮಹೋತ್ಸವವನ್ನು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿಸಿಕೊಡಬೇಕು" ಎಂದು ಖಾದಿ ರಮೇಶ್ ಕೋರಿದ್ದಾರೆ. ಈ ಬೃಹತ್ ಮೆರವಣಿಗೆಯಲ್ಲಿ ಸುಮಾರು 10,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರದ ದ್ವಂದ್ವ ನೀತಿ ಅಂತ್ಯಗೊಳ್ಳಲಿ; ಮದ್ಯ ಮಾರಾಟ ರದ್ದುಗೊಳಿಸಲು ಕ್ರಮ ಕೈಗೊಳ್ಳಲಿಕಲ್ಯಾಣದ ಸಂಕಟದಲ್ಲಿ ಮರಣವೇ ಮಹಾನವಮಿಸಿಜೆಪಿಗೆ ಕಾಂಗ್ರೆಸ್ ನೆರವು: 'ಖಜಾನೆ ಎಟಿಎಂ ಆಯಿತೇ?' - ಆರ್. ಅಶೋಕ್ ತೀವ್ರ ವಾಗ್ದಾಳಿಎ-ಖಾತಾ ಆಸ್ತಿ ಮಾಲೀಕರಿಗೆ ಮನೆಬಾಗಿಲಲ್ಲೇ ಆನ್‌ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ!ಗೂಗಲ್ ಮ್ಯಾಪ್ ಹೇಳಿದಂತೆ ಕೇಳಿ ದಾರಿತಪ್ಪಿ ಕಾರು ಸಮೇತ ಕಂದಕಕ್ಕೆ ಬಿದ್ದ ಇನ್ಫೋಸಿಸ್ ಟೆಕ್ಕಿಗಳು!ಲೈಂಗಿಕ ಕಿರುಕುಳ ಆರೋಪ: ತಲೆಮರೆಸಿಕೊಂಡಿದ್ದ ಚರ್ಚ್‌ಪಾದ್ರಿ ಪೋಕ್ಸೋ ಅಡಿಯಲ್ಲಿ ಬಂಧನಹಾರನಕಣಿವೆ ರಂಗನಾಥಸ್ವಾಮಿ ಅಂಬಿನೋತ್ಸವ: ಬುಡಕಟ್ಟು ಸಂಸ್ಕೃತಿ ಮತ್ತು ಪವಾಡದ ಅಪೂರ್ವ ಧಾರ್ಮಿಕ ಸಂಗಮಪ್ರಜ್ಞೆಯ ಜಾಗೃತಿ, ಬದುಕಿನ ಸಂಸ್ಕೃತಿ:ತಂತ್ರಜ್ಞಾನದ ಅತಿರೇಕ -ಸಾಮಾಜಿಕ ಸಾಮರಸ್ಯಕ್ಕೆ ಗಂಡಾಂತರ— ಜಾಗೃತಿ ಅಗತ್ಯಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ