Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಕಲ ಜೀವಿಗಳ ಮೇಲಣ ಶ್ರೀಮಾತೆಯವರ ಮಾತೃವಾತ್ಸಲ್ಯ ಅಗಾಧವಾದದ್ದು        

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ಸಕಲ ಜೀವಿಗಳ ಮೇಲೆ ಹರಿಸುತ್ತಿದ್ದ ಮಾತೃವಾತ್ಸಲ್ಯ ಅನಂತವಾದದ್ದು  ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷರಾದ ಶ್ರೀಮತಿ ಎಂ ಗೀತಾ ನಾಗರಾಜ್ ತಿಳಿಸಿದರು‌.
ನಗರದ ತ್ಯಾಗರಾಜನಗರದ ಸದ್ಭಕ್ತರಾದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿಕೊಟ್ಟ ಅವರು "ಶ್ರೀಮಾತೆ ಶಾರದಾದೇವಿಯವರ ಅಗಾಧ ಮಾತೃವಾತ್ಸಲ್ಯ" ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು‌.


ಶಾರದಾಮಾತೆಯವರ ಸಮಗ್ರ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಮಾತೃವಾತ್ಸಲ್ಯ ಕೇವಲ ಮನುಷ್ಯರ ಮೇಲಷ್ಟೇ ಹರಿಯದೆ ಜಗತ್ತಿನ ಸಕಲ ಪ್ರಾಣಿ-ಪಕ್ಷಿಗಳ ಮೇಲೆಯೂ ಹರಿಯುತ್ತಿತ್ತು ಎಂಬುದು ಗೊತ್ತಾಗುತ್ತದೆ. ಅವರ ಮನೆಯಲ್ಲಿದ್ದ ಬೆಕ್ಕು,ಕರು,ಅನಾಥ ಹುಡುಗ ಗೋವಿಂದನ ಮೇಲಣ ಅವರ ವಾತ್ಸಲ್ಯ ಅಪರಿಮಿತವಾದದ್ದು ಎಂದರು.


ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ,ಶ್ರೀಮತಿ ನೇತ್ರಾ ಮಂಜುನಾಥ, ಚಿನ್ನಮ್ಮ, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ , ಎಂ ಲಕ್ಷ್ಮೀದೇವಮ್ಮ ತಿಪ್ಪೇಸ್ವಾಮಿ,ಅರುಣ, ಪ್ರೇಮಾ, ಸರಸ್ವತಿ ರಾಜು, ಸರಸ್ವತಿ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ಬೆಂಗಳೂರಿಗೆ ಮತ್ತೊಂದು ಗರಿ: ಐಎಸ್ಒ ಮಾನ್ಯತೆ ಪಡೆದ ದೇಶದ ಮೊದಲ ಜಲಮಂಡಳಿ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು-ಭೋವಿಶ್ರೀಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ- ನ್ಯಾ.ರೋಣ ವಾಸುದೇವ್ ಕರೆ ಆಸಿಡ್ ದಾಳಿಗೆ ಒಳಗಾದ ನೊಂದ ವ್ಯಕ್ತಿಗಳಿಗೆ ಒಂದು ತಿಂಗಳಲ್ಲೇ ಮಧ್ಯಂತರ ಪರಿಹಾರ ವಿತರಣೆಯಾದವ ಗೊಲ್ಲರ ಸಂಘದ ಆಡಳಿತಾಧಿಕಾರಿ ಅವಧಿ ವಿಸ್ತರಣೆಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನಸಂಸದರ ಕಚೇರಿ ಎದುರು ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು- ಮಾಜಿ ಸಚಿವ ಆಂಜನೇಯ ವಿದ್ಯಾರ್ಥಿವೇತನ ಬಿಡುಗಡೆಗೆ ಸಿಎಂಗೆ ಮನವಿಕುಂಚಿಟಿಗ ಕುಲ ದೇವತೆಗಳ ವಿಶಿಷ್ಟ ಆಚರಣೆ: ಏನಿದು ಶ್ರೀಕಣಿವೆ ಮಾರಮ್ಮನ 'ಸೆಳೆ' ವೈಭವ