Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದ್ದಾರೆ. ಭಾನುವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹಡಗು ಮುಳುಗುತ್ತಿದೆಶ್ರೀರಾಮುಲು:
ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಹರಿಯುತ್ತಾ ಬಂದಿದೆ. ಹಿಂದೆ ವಿಮಾನದ ವೇಗದಲ್ಲಿದ್ದ ಕಾಂಗ್ರೆಸ್
, ಈಗ ಸೈಕಲ್ ವೇಗಕ್ಕೆ ಬಂದಿದ್ದು, ಮುಂದೆ ಎತ್ತಿನ ಗಾಡಿಯ ಸ್ಥಿತಿಗೆ ತಲುಪಲಿದೆ. ವಾಲ್ಮೀಕಿ ನಿಗಮದ ಹಣವನ್ನು ಬಂಗಾರದ ಅಂಗಡಿ, ಮದ್ಯದ ಅಂಗಡಿಗಳಿಗೆ ವರ್ಗಾಯಿಸಿ ದಲಿತರು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಲಾಗಿದೆ. ಇಂತಹ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ದುರಂತ ಎಂದು ಕಿಡಿಕಾರಿದರು. 

Advertisement

ಇದೇ ವೇಳೆ, ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ ಅವರು, ಸಚಿವ ಸಂಪುಟ ಗೊಂದಲವನ್ನು ಪರಿಹರಿಸಲು "ವಾರಕ್ಕೊಬ್ಬರನ್ನು ಸಚಿವರನ್ನಾಗಿ ಮಾಡಿ" ಎಂದು ವ್ಯಂಗ್ಯವಾಡಿದರು.

ಮಾನ ಮರ್ಯಾದೆ ಇದ್ದರೆ ಮಾತನಾಡಲಿಸಚಿವ ಈಶ್ವರ್ ಖಂಡ್ರೆ ಪ್ರತ್ಯುತ್ತರ: ಶ್ರೀರಾಮುಲು ಆರೋಪಗಳಿಗೆ ತೀವ್ರವಾಗಿ ತಿರುಗೇಟು ನೀಡಿದ ಸಚಿವ ಈಶ್ವರ್ ಖಂಡ್ರೆ, ಬಳ್ಳಾರಿಯನ್ನು 'ರಿಪಬ್ಲಿಕ್ ಆಫ್ ಬಳ್ಳಾರಿ' ಮಾಡಿ ಕುಖ್ಯಾತಿ ತಂದಿದ್ದ ರೆಡ್ಡಿ ಬ್ರದರ್ಸ್ ಹಾಗೂ ಶ್ರೀರಾಮುಲು ಅವರಿಗೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಮತ್ತು 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಭಯದಿಂದ ಬಿಜೆಪಿಯವರು ಹತಾಶೆಗೊಂಡು ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆ ಅಥವಾ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ. ನಾಗೇಂದ್ರ ಅವರ ರಾಜೀನಾಮೆ ಕೇಳುವ ಬಿಜೆಪಿಯವರು, ಕೇಂದ್ರ ಸರ್ಕಾರದ ವೈಫಲ್ಯಗಳು ಹಾಗೂ ಪೊಲೀಸರ ದುರ್ಬಳಕೆ ಬಗ್ಗೆ ಉತ್ತರಿಸಿ ಮೊದಲು ಕೇಂದ್ರ ಗೃಹ ಸಚಿವರ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತನ್ನ ಪತ್ನಿಯನ್ನು ಆಕೆಯ ಇಚ್ಛೆಯಂತೆ ಪ್ರಿಯಕರನೊಡನೆ ಮದುವೆ ಮಾಡಿಸಿದ ವಿಶಾಲ ಹೃದಯದ ಪತಿ!ಪತ್ರಕರ್ತ ಜಿ. ಮಹಂತೇಶ್‌ಗೆ ಜೀವ ಬೆದರಿಕೆ ಪ್ರಕರಣ: ವಿಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿದ ನಂದಿನಿ ಲೇಔಟ್ ಪೊಲೀಸರುಜೈಲಿನಲ್ಲೂ ಮುಂದುವರಿದ ಪ್ರಜ್ವಲ್ ರೇವಣ್ಣ ವಿಕೃತಿ: ಸೆಲ್‌ನಲ್ಲೇ ಪೆನ್ ಡ್ರೈವ್ ಬಳಸಿ ಅಶ್ಲೀಲ ವೀಡಿಯೋ ವೀಕ್ಷಣೆ!ಮಸೀದಿ ಮುಂದೆ ಗಣೇಶ ಮೆರವಣಿಗೆ ನಿಷೇಧ: ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶಭಾರತ-ಚೀನಾ ಸಂಬಂಧಕ್ಕೆ ಹೊಸ ಚೈತನ್ಯ: ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ಇಂಟರ್ನೆಟ್ ಇಲ್ಲದೆಯೂ ಯುಪಿಐ ಪಾವತಿ: ‘ಟ್ಯಾಪ್‌ಆ್ಯಂಡ್‌ಪೇ’ ಹಾಗೂ ‘ಮೈಯುಪಿಐ’ ಹೊಸ ಫೀಚರ್‌ಪರಿಚಯಿಸಿದ ಆರ್‌ಬಿಐನಮಗೆ ಹಾಕಿರುವ ಬೇಡಿ ಬಿಚ್ಚಿದರೆ ಕರ್ನಾಟಕವನ್ನೇ ಸ್ವಚ್ಛ ಮಾಡುತ್ತೇವೆ: ನ್ಯಾ. ಬಿ. ವೀರಪ್ಪಕಳವಳ ಮೂಡಿಸಿದ ಇಡಿ ದಾಳಿ: ಪ್ರಭಾವಿ ಕಾಂಗ್ರೆಸ್ ನಾಯಕರು, ಶಾಸಕರ ಮೇಲೆ ದಾಳಿರಸ್ತೆ ಅಪಘಾತ ಪರಿಹಾರ ಪ್ರಕರಣ: ಗೃಹಿಣಿ ಕುಟುಂಬಕ್ಕೆ 59.69 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶದಾವಣಗೆರೆಯಲ್ಲಿ 200 ಎಕರೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ನಿವೇಶನ ನೀಡಲು ‘ದೂಡ’ ಸಭೆಯಲ್ಲಿ ತೀರ್ಮಾನ