ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಬಸವೇಶ್ವರ ನಗರದಲ್ಲಿರುವ ಶ್ರೀ ಸಾಯಿ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಶನಿವಾರ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ವೈದ್ಯರ ದಿನಾಚರಣೆಯನ್ನು (ಡಾಕ್ಟರ್ಸ್ ಡೇ) ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಮುಖ ವೈದ್ಯರಾದ ಡಾ. ಪೂಜಿತಾ ಅವರೊಂದಿಗೆ ಶಾಲೆಯ ಪುಟಾಣಿ ಚಿಣ್ಣರು ಅತ್ಯಂತ ಉತ್ಸಾಹದಿಂದ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು. ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ವೈದ್ಯ ವೃತ್ತಿಯ ಮಹತ್ವದ ಬಗ್ಗೆ ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಬಿ.ಜೆ. ಜಲಜಾಕ್ಷಿ, ಶಿಕ್ಷಕಿಯರಾದ ಗೀತಾ, ಸುಮಲತಾ, ಚೂಡಾಮಣಿ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



