Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಕಲಚೇತನರ ‘ವಿಧಾನಸೌಧ ಚಲೋ’ ಪಾದಯಾತ್ರೆಗೆ ಬೆಂಬಲ: ಆರ್. ಅಶೋಕ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಕಲಚೇತನರ ನೋವು
, ಸಂಕಷ್ಟ ಹಾಗೂ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗಿ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ ಗೌರವಯುತ ಬದುಕು, ಆರ್ಥಿಕ ಭದ್ರತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

​‘ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘ, ರಾಜ್ಯ ಸಮಿತಿ, ಬೆಂಗಳೂರು’ ವತಿಯಿಂದ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಬೆಂಗಳೂರಿನವರೆಗೆ ಹಮ್ಮಿಕೊಳ್ಳಲಾಗಿರುವ ‘ವಿಧಾನಸೌಧ ಚಲೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಹೋರಾಟ ನಿರತರಿಗೆ ಅವರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

Advertisement

​ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್, "ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗ. ಅವರ ಬದುಕಿನಲ್ಲಿ ಆತ್ಮವಿಶ್ವಾಸ ತುಂಬುವುದು, ಸ್ವಾವಲಂಬನೆಯ ಹಾದಿಗೆ ನೆರವಾಗುವುದು ಮತ್ತು ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವುದು ಸಮಾಜ ಹಾಗೂ ಸರ್ಕಾರದ ಕರ್ತವ್ಯವಾಗಿದೆ. ಅವರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ನ್ಯಾಯ ದೊರೆಯಬೇಕು, ಅವರ ಧ್ವನಿ ಸರ್ಕಾರದ ಕಿವಿಗೆ ತಲುಪಬೇಕು ಹಾಗೂ ಬೇಡಿಕೆಗಳು ಈಡೇರಬೇಕು. ರಾಜ್ಯ ಸರ್ಕಾರ ಕೂಡಲೇ ಈ ಕುರಿತು ಸ್ಪಂದಿಸಬೇಕು" ಎಂದು ಒತ್ತಾಯಿಸಿದರು.

​ಈ ಪಾದಯಾತ್ರೆಯ ಬೆಂಬಲ ಕಾರ್ಯಕ್ರಮದಲ್ಲಿ ಬಿಜೆಪಿ ಮಾಗಡಿ ತಾಲೂಕು ಅಧ್ಯಕ್ಷ ಕೆ.ಆರ್. ಪ್ರಸಾದ್ ಗೌಡ, ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ, ಗೌತಮ್ ಗೌಡ ಹಾಗೂ ಮಾಜಿ ಜಿಲ್ಲಾಧ್ಯಕ್ಷ ದೇವರಾಜು ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿಗೀತಮ್ ಕಾಲೇಜಿನ ಬಿ. ಟೆಕ್ ವಿದ್ಯಾರ್ಥಿನಿ ಸಾವುಗಾಯಿತ್ರಿ ಜಲಾಶಯದ ಕೆರೆ ಅಂಗಳದಲ್ಲಿ ಅಕ್ರಮ ಮಣ್ಣು ಸಾಗಾಟ – ಇಟಾಚಿ, ಟಿಪ್ಪರ್ ಲಾರಿಗಳು ವಶಕ್ಕೆ! ಹಿರಿಯೂರು ಉಪಚುನಾವಣೆ: ಅಧಿಕೃತ ಅರ್ಜಿ ಪಡೆದ ಕಾಂಗ್ರೆಸ್‌ ಟಿಕೆಟ್‌ಗಾಗಿ ಸಿ. ಶಿವು ಯಾದವ್‌CJP ಪರ ಖರ್ಗೆ ಬೆಂಬಲ: ರಾಜ್ಯದ ಹಣ ಲೂಟಿ ಮಾಡಿ ದೇಶದಲ್ಲಿ ಅಭದ್ರತೆ ಸೃಷ್ಟಿಸುತ್ತಿದ್ದಾರೆ - HDK ಗಂಭೀರ ಆರೋಪಕೆಪಿಎಸ್‌ಸಿ ಅಕ್ರಮ: ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಂದ ಪರೀಕ್ಷೆ! ಇಡಿ ತನಿಖೆಯಲ್ಲಿ ಕರಾಳ ದಂಧೆ ಬಯಲುಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರದಲ್ಲಿ ಅತ್ಯಾಧುನಿಕ ‘INS ಸಮರ್ಥಕ್’ ಬಹುಪಯೋಗಿ ಯುದ್ಧನೌಕೆ ಲೋಕಾರ್ಪಣೆ'ಕರ್ನಾಟಕ ಹನಿಟ್ರ್ಯಾಪ್' ಯೂಟ್ಯೂಬ್ ಚಾನೆಲ್‌ನ 54 ಸಬ್‌ಸ್ಕ್ರೈಬರ್‌ಗಳಿಗೆ ಪೊಲೀಸ್ ನೋಟಿಸ್?ದಾವಣಗೆರೆಯಲ್ಲಿ ಎರಡು ಭೀಕರ ರಸ್ತೆ ಅಪಘಾತಗಳು: ಕಾರು ಡಿಕ್ಕಿಯಾಗಿ ಅಪ್ರಾಪ್ತ ಸಾವು, ಮತ್ತೊಂದರಲ್ಲಿ ಹಿಟ್ ಆ್ಯಂಡ್ ರನ್​ಗೆ ವ್ಯಕ್ತಿ ಬಲಿಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಒಗ್ಗಟ್ಟಿನ ಹೋರಾಟ ಅನಿವಾರ್ಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆ