Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತ ರಾ ಸು-ಕುಮಾರ ಬಡಪ್ಟ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಯಲೊಲುಮೆಯ ಅಕ್ಷರ ಶಕ್ತಿ ನೀ 
ಬರೆದವೆಂತಹ ಸಾಲುಗಳು ನಿನ್ನವು
ಚಂದವಳ್ಳಿಯ ತೋಟದ ಕಂಪು 
ಚಂದನದ ಗೊಂಬೆ ನವಿರಾದ ಇಂಪು...

ದಾಖಲಿಸಿದೆ ಅಮರರು ಕನ್ನಡ ವೀರರು 
ಹೋಯ್ಸಳರು,ನೃಪತುಂಗರು 
ಹಂಸಗೀತೆಯೂ ಅರಳಿತಲ್ಲವೇ 
ನಡೆದಾಡಿದ ಕೋಟೆ ಬುರುಜು ಬತೇರಿ
ನಿನ್ನೊಳು ನಿತ್ಯದ ಸಂವಾದಗಳು 
ರಾಮ ಸೀತೆಯರ ನಲ್ಮೆಯ ಕುಡಿ ನೀ...

ಬರೆದು ಬದುಕಿದ ಬರಹಗಾರನೇ
ಮಧ್ಯದ ಅಮಲು ಘಾಟು ಘಮಲಲಿ
ಸಾಲು ಕಥೆಗಳು ಬೆನ್ನತ್ತಿ ಬರೆಸಿದವು 
ಅದೆಷ್ಟೆಷ್ಟೋ ಚಿತ್ರಗಳೂ ಆದವಲ್ಲಾ
ನಾಗರಹಾವು ನಾಡಿನ ಆಚೀಚೆ
ಅದ್ಧೂರಿ ಮೆರವಣಿಗೆಯೇ  
ದುರ್ಗಕ್ಕೂ ನಿನಗೂ ಅದಾವ ನಂಟು...

ಸಾಹಿತ್ಯ ಸಾಲು ಸಾಲು ಪುಟಗಳಲಿ 
ಇತಿಹಾಸವ ಶೃಂಗರಿಸಿದೆ 
ನಿನಗೆ ಅದೆಷ್ಟು ಗೊತ್ತಿತ್ತು 
ನಾಯಕ ಅರಸರ ಗತ್ತು ಗಮ್ಮತ್ತು 
ಕಾದಂಬರಿಗಳಲಿ ಹೊಸಹಗಲು ಸೃಷ್ಟಿಸಿದೆ..

ಕಟ್ಟಿದೆ ಕಸ್ತೂರಿಕಂಕಣ ವ
ರಾಜ್ಯದಾಹವ ಬರೆದೆ 
ಕಂಬನಿ ಕುಯಿಲು ಮುಡಿಗೇರಿತು  
ರಕ್ತ ರಾತ್ರಿಯ ಹರಿಸಿದೆ ...

ಕೊನೆಗೂ ತಳುಕಿನ ಕಳಸವಿಟ್ಟು 
ವಿಜಯೋತ್ಸವ ಆಚರಿಸಿಬಿಟ್ಟೆಯಲ್ಲ 
ದುರ್ಗಾಸ್ತಮಾನ ರಚಿಸಿದೆ 
ದುರ್ಗವೇ ನಲಿದು ನಮಿಸಿತ್ತು 
ಕನ್ನಡ ನೆಲವೆಲ್ಲಾ ಸಂಬ್ರಮಿಸಿತ್ತು 
ಸಂತಸದಿ ಅಕ್ಷರ ವರಪುತ್ರನ ತಬ್ಬಿತು...

ನೀ ಹೋದೆ ಎಲ್ಲಿ ಬರಹ ದೊರೆಯೇ
ಬಾರದೂರಿಗೆ ಹೊರಟು
ಬರವಣಿಗೆ ನಿಲ್ಲಿಸಿದೆಯಾ 
ಬೆಂಕಿಯ ಬಲೆಯಲಿ ನಲುಗಿದೆಯಾ 
ಮಸಣದ ಹೂವಾಗಿ
ಅಧ್ಯಾಯ ಮುಗಿಸಿದೆಯಾ 
ನಾಡು ಇರುವರೆಗೂ ನುಡಿಗಳು ಜೀವಂತ...

ಕನ್ನಡ ಸಾರಸ್ವತ ಲೋಕದಲಿ
ನೀ ಒಬ್ಬ ಅಮರ ಧೀಮಂತ 
  ಕವಿತೆ-ಕುಮಾರ್ ಬಡಪ್ಪ

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಭಾರಿ ಪರಿಹಾರ ಘೋಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಮುಂಗಾರು ಆಗಮನ.. ಚುರುಕು ಗೊಂಡ ಕೃಷಿ ಚಟುವಟಿಕೆನಿವೇದಿತಾ ಇಂಗ್ಲೀಷ್ ಶಾಲಾ ಮಕ್ಕಳಿಗೆ ಪರಿಸರದ ಪಾಠಬಿಜೆಪಿಯಿಂದ ಅಚ್ಚರಿಯ ನಡೆ: ದೇವೇಗೌಡರಿಗೆ ತಪ್ಪಿದ ರಾಜ್ಯಸಭೆ ಟಿಕೆಟ್‌; ಜೆಡಿಎಸ್‌ಗೆ ತಣ್ಣೀರೆರಚಿದ ಹೈಕಮಾಂಡ್!ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್‌ನಿರಾಕರಣೆ: ಕಾಂಗ್ರೆಸ್‌ವಾಗ್ದಾಳಿ!ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ: ಒಗ್ಗಟ್ಟಿನ ಕರೆ ನೀಡಿದ ಖರ್ಗೆ; ಡಿಎಂಕೆ, ಎಎಪಿ ಗೈರು!ಕೊನೆ ಕ್ಷಣದಲ್ಲಿ ರೋಚಕ ತಿರುವು ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದ ರಾಜ್ದೇವೇಗೌಡರ ಸ್ಪರ್ಧೆ ಕುರಿತು ಚರ್ಚೆ ಆಗಿರಲಿಲ್ಲ; ಕಾರ್ಯಕರ್ತರಿಗೆ ಮನ್ನಣೆ ಬಿ.ವೈ. ವಿಜಯೇಂದ್ರ ಹರ್ಷ  "ನಾನು ಸೋತಿದ್ದಕ್ಕೆ ಸಿದ್ದರಾಮಯ್ಯ ಸಿಎಂ ಆದರು, ಈ ಬಾರಿಯೂ ಅವಕಾಶ ತಪ್ಪಿತು": ಜಿ.ಪರಮೇಶ್ವರ್5 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ನಿಯಂತ್ರಕಿ!