Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಬೊಂಬೆಯಾಟದ ಕಲೆ ಮನರಂಜನೆಗಷ್ಟೇ ಅಲ್ಲ ಜನರಲ್ಲಿ ಜಾಗೃತಿ ಮೂಡಿಸಲಿದೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗೊಂಬೆಯಾಟದ ಕಲೆ
  ನಮ್ಮ ಸಾಹಿತ್ಯ, ಕಲೆ, ಸಂಗೀತ,‌ಸಂಸ್ಕೃತಿ  ಪರಂಪರೆಯನ್ನು  ಸಮಾಜಕ್ಕೆ  ತಲುಪಿಸಲು ಸಹಕಾರಿ ಆಗುತ್ತದೆ. ಈ ಕಲೆ ಮನರಂಜನೆಗಷ್ಟೇ ಸೀಮಿತಗೊಳ್ಳದೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು  ಗೊಂಬೆಯಾಟ ಕಲಾವಿದ ಮತ್ತು ತರಬೇತುದಾರ ಸಿದ್ದು ಬಿರಾದಾರ ತಿಳಿಸಿದರು. 

      ಅವರು ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯ  ಸಿದ್ದಿಪ್ರಿಯ ವಿನಾಯಕ  15ನೇ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ.ಕನ್ನಡ ನಾಡಿನ ಅತ್ಯಂತ  ಪ್ರಾಚೀನ ಕಲೆಗಳಲ್ಲಿ ಗೊಂಬೆಯಾವು ಒಂದಾಗಿದೆ.   ಶಾಸನ, ವಚನಗಳಲ್ಲಿ ಮತ್ತು ದಾಸರ ಹಾಡುಗಳಲ್ಲಿ ಗೊಂಬೆಯಾಟದ ಉಲ್ಲೇಖಗಳಿವೆ.ಗೊಂಬೆಯಾಟ ಜನಪದ ರಂಗಭೂಮಿಯ ಒಂದು ಚಮತ್ಕಾರಿ ಮತ್ತು ಆಕರ್ಷಕ ಕಲೆಯಾಗಿದೆ.  ಸೂತ್ರಧಾರ  ತೆರೆಯ ಮರೆಯಲ್ಲೆ ಇದ್ದು ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡುವ ವಿಶೇಷ ಕಲಾ ಪ್ರಾಕಾರವಾಗಿದೆ ಎಂದರು. 

ವಿಶೇಷ ಗೊಂಬೆಯಾಟ ಪ್ರದರ್ಶನ :
ಸೋಮೇಶ್ವರ ಬಡಾವಣೆಯ ಸಿದ್ದಿಪ್ರಿಯ ವಿನಾಯಕ 15 ನೇ ವಾರ್ಷಿಕೋತ್ಸವ ಅಂಗವಾಗಿ  ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹೊಂಗಿರಣ ಗೊಂಬೆಯಾಟ ತಂಡದ ಕಲಾವಿದರು ನಡೆಸಿಕೊಟ್ಟ ಪ್ರದರ್ಶನ ಪ್ರೇಕ್ಷಕರಿಗೆ ಆಕರ್ಷಣೆಯಾಗಿತ್ತು.  ರಾಮಾಯಣದ  ಸೀತಾಪಹರಣ ಪ್ರಸಂಗ,ಮಹಾಭಾರತದ ಏಕಲವ್ಯ ಪ್ರಸಂಗ, ಐತಿಹಾಸಿಕವಾದ ಸಂಗೊಳ್ಳಿ ರಾಯಣ್ಣ ಪ್ರಸಂಗ, ಸಮಾಜಕ್ಕೆ ಶರಣರ ಕೊಡುಗೆ, ಮಕ್ಕಳ ಹಾಡುಗಳು ಸೇರಿದಂತೆ ಹಲವಾರು ಗೊಂಬೆಯಾಟದ ಪ್ರಸಂಗಗಳು ಮೆಚ್ಚುಗೆ ಪಡೆದಿವೆ.  ಹೊಂಗಿರಣ ಗೊಂಬೆಯಾಟ ಕಲಾ ತಂಡದ ಸಿದ್ದು ಬಿರಾದಾರ, ಸೂರಜ್, ವಿಜಯ ಕುಮಾರ್, ಪ್ರಜ್ವಲ್, ಅಕ್ಷತ್, ಗಣಪತಿ, ನಾರಾಯಣ್, ಓಂಕಾರ್ ಕಲಾವಿದರು ಗೊಂಬೆಯಾಟ ಪ್ರದರ್ಶನ ನಡೆಸಿಕೊಟ್ಟರು. 

  ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ    ವಡ್ಡರಹಳ್ಳಿ ರವಿಕುಮಾರ್, ನಗರಸಭಾ ಸದಸ್ಯ ಪದ್ಮನಾಭ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಯ್ಯ, ಸಿದ್ದಿಪ್ರಿಯ ವಿನಾಯಕ ಮಂಡಲಿಯ ವಿಶ್ವೇಶ್ವರಯ್ಯ, ಸೋಮಣ್ಣ, ಆನಂದ್, ಮನೋಹರ್, ಚೇತನ್, ವಿನೋದ್, ಚಂದನ್, ನವೀನ್, ಮಂಜುನಾಥ್, ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ: ಹಿರಿಯ ಜೀವಗಳೊಂದಿಗೆ ಮಗುವಾದ ಸಂಭ್ರಮ!ಆತ್ರೇಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳ ಅತಂತ್ರ ಭವಿಷ್ಯ: ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಬಿ.ಎಸ್.ಚಂದ್ರಶೇಖರ್ ಆಗ್ರಹಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿ ರಾಜಕೀಯ ಪ್ರೇರಿತ: ಕಾಂಗ್ರೆಸ್ ಮುಖಂಡರ ತೀವ್ರ ಆಕ್ರೋಶತನ್ನ ಪತ್ನಿಯನ್ನು ಆಕೆಯ ಇಚ್ಛೆಯಂತೆ ಪ್ರಿಯಕರನೊಡನೆ ಮದುವೆ ಮಾಡಿಸಿದ ವಿಶಾಲ ಹೃದಯದ ಪತಿ!ಪತ್ರಕರ್ತ ಜಿ. ಮಹಂತೇಶ್‌ಗೆ ಜೀವ ಬೆದರಿಕೆ ಪ್ರಕರಣ: ವಿಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿದ ನಂದಿನಿ ಲೇಔಟ್ ಪೊಲೀಸರುಜೈಲಿನಲ್ಲೂ ಮುಂದುವರಿದ ಪ್ರಜ್ವಲ್ ರೇವಣ್ಣ ವಿಕೃತಿ: ಸೆಲ್‌ನಲ್ಲೇ ಪೆನ್ ಡ್ರೈವ್ ಬಳಸಿ ಅಶ್ಲೀಲ ವೀಡಿಯೋ ವೀಕ್ಷಣೆ!ಮಸೀದಿ ಮುಂದೆ ಗಣೇಶ ಮೆರವಣಿಗೆ ನಿಷೇಧ: ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶಭಾರತ-ಚೀನಾ ಸಂಬಂಧಕ್ಕೆ ಹೊಸ ಚೈತನ್ಯ: ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ಇಂಟರ್ನೆಟ್ ಇಲ್ಲದೆಯೂ ಯುಪಿಐ ಪಾವತಿ: ‘ಟ್ಯಾಪ್‌ಆ್ಯಂಡ್‌ಪೇ’ ಹಾಗೂ ‘ಮೈಯುಪಿಐ’ ಹೊಸ ಫೀಚರ್‌ಪರಿಚಯಿಸಿದ ಆರ್‌ಬಿಐನಮಗೆ ಹಾಕಿರುವ ಬೇಡಿ ಬಿಚ್ಚಿದರೆ ಕರ್ನಾಟಕವನ್ನೇ ಸ್ವಚ್ಛ ಮಾಡುತ್ತೇವೆ: ನ್ಯಾ. ಬಿ. ವೀರಪ್ಪ