Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸುದ್ದಿಮನೆಯಲ್ಲಿ ನಾಡಿಗೇರರ ಜೊತೆಗಿನ ಒಡನಾಟ, ವೃತ್ತಿಬದ್ಧತೆ ಅವಿಸ್ಮರಣೀಯ: ಸುದರ್ಶನ ಚೆನ್ನಂಗಿಹಳ್ಳಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಪತ್ರಕರ್ತರಾದ ವಸಂತ ನಾಡೀಗೇರ್ ಅವರು ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಅಚ್ಚುಮೆಚ್ಚಿನ ಮಾರ್ಗದರ್ಶಕರಾಗಿದ್ದರು
, ವೃತ್ತಿ ಸಂಸ್ಥೆಗಳಲ್ಲಿ ಅವರು ತೋರುತ್ತಿದ್ದ ತಾಳ್ಮೆ ಮತ್ತು ಸಂಯಮವು ನಿಜಕ್ಕೂ ಅನುಕರಣೀಯ ಎಂದು ವಿಜಯ ಕರ್ನಾಟಕ‌ದಿನಪತ್ರಿಕೆ ಸಂಪಾದಕ ಸುದರ್ಶನ ಚೆನ್ನಂಗಿಹಳ್ಳಿ ಹೇಳಿದರು.

ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ (ಕೆ.ಯೂ.ಡಬ್ಲ್ಯೂ.ಜೆ) ಆಯೋಜಿಸಿದ್ದ ವಸಂತ ನಾಡಿಗೇರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಸಂತ ನಾಡಿಗೇರರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ, ಎರಡು ನಿಮಿಷಗಳ ಮೌನಪಾರ್ಥನೆ ನೆರವೇರಿಸಲಾಯಿತು.

ವಸಂತ ನಾಡಿಗೇರರು ಪತ್ರಿಕೋದ್ಯಮದಲ್ಲಿ ಸೃಷ್ಟಿಸಿದ್ದ ಅತ್ಯಾಕರ್ಷಕ ಶೀರ್ಷಿಕೆಗಳು ಅವರ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿ. ಅವರಲ್ಲಿದ್ದ ಭಾಷೆಯ ಮೇಲಿದ್ದ ಅಗಾಧ ಪ್ರಭುತ್ವದಿಂದಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಅವರಿಂದ ಬಹುಮುಖ್ಯ ಕೊಡುಗೆ ಲಭಿಸಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ 'ಕಸ್ತೂರಿ' ಮಾಸಪತ್ರಿಕೆ ಸಂಪಾದಕಿ ಶಾಂತಲಾ ಧರ್ಮರಾಜ್ ಮಾತನಾಡಿ ಸರಳ ಮತ್ತು ಸಜ್ಜನ ವ್ಯಕ್ತಿತ್ವವನ್ನು ವಸಂತ ನಾಡಿಗೇರರು ಮೈಗೂಡಿಸಿಕೊಂಡಿದ್ದರು, ಅವರು ಪತ್ರಿಕಾ ಸಂಸ್ಥೆಗಳಲ್ಲಿರುವ ಪತ್ರಕರ್ತರ ನಡುವೆ ಒಗ್ಗಟ್ಟನ್ನು ಕಾಯ್ದುಕೊಂಡಿದ್ದರಲ್ಲದೇ, ಅವರು ದುಡಿದ ಪತ್ರಿಕಾ ಸಂಸ್ಥೆಗಳಲ್ಲಿ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಿದ್ದರು ಎಂದು ಗುಣಗಾನ ಮಾಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೀಷಾ ಖಾನಂ ಮಾತನಾಡಿ, ವಸಂತ ನಾಡಿಗೇರರ ಅಗಲಿಕೆಯು ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ವಸಂತ ನಾಡಿಗೇರರು ಕನ್ನಡ ಪತ್ರಿಕೋದ್ಯಮದಲ್ಲಿ ವಿಭಿನ್ನ ವ್ಯಕ್ತಿತ್ವವನ್ನು ಮೈಗೂಡಿಸಿ ಸದಾ ವೃತ್ತಿ ಬದ್ಧತೆಯನ್ನು ಮೆರೆದವರು ಎಂದರು.

ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಹಿರಿಯ ಪತ್ರಕರ್ತ ಶ್ರೀಧರ ನಾಯಕ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ  ಶಿವಕುಮಾರ್ ಬೆಳ್ಳಿತಟ್ಟೆ, ಸಂಯುಕ್ತ ಕರ್ನಾಟಕ ಪತ್ರಿಕೆಯ  ಕೆ.ವಿ. ಪರಮೇಶ್,  ಕವಿ-ಪವಿ ಸಂಘಟನೆಯ ಹಾಲಸ್ವಾಮಿ, ರಾಣಿಬೆನ್ನೂರಿನ ಶಿವಯೋಗಿ ಮಹಾನುಭಾವಿಮಠ್, ಮುಂತಾದವರು ವಸಂತ ನಾಡಿಗೇರರ ಕುರಿತು ಮಾತನಾಡಿ, 

ಅವರ ವ್ಯಕ್ತಿತ್ವ ಗುಣಗಾನ ಮಾಡಿದರು.ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಪದಾಧಿಕಾರಿಗಳಾದ ಎಚ್.ಕೆ.ಬಸವರಾಜ್, ಎ.ಬಿ. ಶಿವರಾಜ್, ಶಶಿಕಲಾ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದ ರಾಜೀವ್ ಸೇರಿದಂತೆ ಹಲವಾರು ಹಿರಿಯ-ಕಿರಿಯ ಪತ್ರಕರ್ತರು ವಸಂತ ನಾಡಿಗೇರ್ ಶ್ರದ್ಧಾಂಜಲಿ  ಸಭೆಯಲ್ಲಿ ಭಾಗವಹಿಸಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ರಮವಾಗಿ ನೆಲೆಸಿದ್ದ ಮೂವರು ನೈಜೀರಿಯನ್ ಪ್ರಜೆಗಳ ವಶಕ್ಕೆಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದ ಹುಂಡಿಯಲ್ಲಿ 77ಲಕ್ಷ 58ಸಾವಿರದ 904 ರೂ ಸಂಗ್ರಹಕೆಂಪಮ್ಮ ದಂಪತಿಗೆ ವಾತ್ಸಲ್ಯ ಮನೆ ಹಸ್ತಾಂತರಪೋಷಣ್ ಮಾಸಾಚರಣೆ: ಸಿರಿಧಾನ್ಯ, ಸೊಪ್ಪು-ತರಕಾರಿ ಸೇವನೆಗೆ ಒತ್ತು ವಿದ್ಯಾರ್ಥಿಗಳು ಪಠ್ಯದ ಜೊತೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಮಾನಸಿಕ ದೈಹಿಕ ಸದೃಢತೆ ಹೆಚ್ಚುತ್ತದೆ:ಡಾ. ಮುರುಳಿಡಿಕೆ ಶಿವಕುಮಾರ್ ವಿರುದ್ಧವೇ 'ಟ್ರ್ಯಾಪ್' ಯತ್ನ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸ್ಪೋಟಕ ಹೇಳಿಕೆ!ಡಿ.ಕೆ ಶಿವಕುಮಾರ್‌ಗೆ ರಿಯಲ್ ಎಸ್ಟೇಟ್‌ಮೇಲಿರುವ ಆಸಕ್ತಿ ರೈತರ ಮೇಲಿಲ್ಲ: ಬಿ.ವೈ. ವಿಜಯೇಂದ್ರಶಾರ್ಟ್ ಸರ್ಕ್ಯೂಟ್‌ನಿಂದ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ; ತಪ್ಪಿದ ಭಾರೀ ದುರಂತಭೀಕರ ಅಪಘಾತ: ನಾಲ್ವರು ಯುವ ಕ್ರಿಕೆಟಿಗರು ಸಾವುಡೀಸೆಲ್ ಕೊರತೆ ತಾತ್ಕಾಲಿಕ, ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಕೆ: ಡಿಸಿಎಂ ಜಿ. ಪರಮೇಶ್ವರ ಸ್ಪಷ್ಟನೆ