Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಯಲುಸೀಮೆಯ ಜೀವನಾಡಿ: ಚಿತ್ರದುರ್ಗ ಜಿಲ್ಲೆಗೆ ಹರಿದುಬಂದ ಭದ್ರೆ - ಸಂಭ್ರಮವೋ ಸಂಭ್ರಮ!

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
ದಶಕಗಳ ಕಾಲದ ಕನಸು ನನಸಾಗಿದ್ದು
, ಬರಡು ಭೂಮಿಯೆಂದೇ ಕರೆಯಲ್ಪಡುತ್ತಿದ್ದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿದುಬಂದಿದೆ. ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಲಕ್ಷಾಂತರ ಕುಟುಂಬಗಳಿಗೆ 'ಭದ್ರೆ' ಬೆಳಕಾಗುತ್ತಿದ್ದಾಳೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿ ಕುಮಾರ್ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಭೋವಿ ಗುರುಪೀಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಭದ್ರೆ ಸಿಹಿ ಸಂಭ್ರಮ' ಕಾರ್ಯಕ್ರಮದಲ್ಲಿ ಸಿಬ್ಬಂದಿಗೆ ಸಿಹಿ ಹಂಚಿ ಅವರು ಮಾತನಾಡಿದರು.

Advertisement

ರೈತರ ಆರ್ಥಿಕ ಸ್ಥಿತಿ ಸುಧಾರಣೆ-
ಕೃಷಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯುವುದರಿಂದ ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಲಿದೆ. ಇದು ಗ್ರಾಮೀಣ ಭಾಗದ ರೈತರು ಹಾಗೂ ಕೃಷಿ ಕೂಲಿಕಾರರ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಲಿದೆ. ವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯದ ಖಾತ್ರಿ ಮಿಷನ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ನೀರು ಸಂಗ್ರಹಣಾ ಮೂಲಗಳ ಅಭಿವೃದ್ಧಿ
, ಕಾಲುವೆ ನಿರ್ಮಾಣ ಹಾಗೂ ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಂಡು, ಯೋಜನೆಯ ಸಂಪೂರ್ಣ ಪ್ರಯೋಜನ ಪ್ರತಿ ಹಳ್ಳಿಗೂ ತಲುಪುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕರೆ ನೀಡಿದರು.

ಮೂರು ದಶಕಗಳ ಐತಿಹಾಸಿಕ ಹೋರಾಟದ ಫಲ
ಮೂರುವರೆ ದಶಕಗಳಿಗೂ ಅಧಿಕ ಕಾಲ ಜಿಲ್ಲೆಯ ರೈತರು
, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ನಡೆಸಿದ ನಿರಂತರ ಹೋರಾಟದ ಫಲವೇ ಇಂದು ಭದ್ರಾ ಯೋಜನೆ ಸಾಕಾರಗೊಳ್ಳಲು ಕಾರಣವಾಗಿದೆ. ಗೋನೂರು ಸೇರಿದಂತೆ ವಿವಿಧೆಡೆ ಭದ್ರೆ ನೀರು ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಈ ಸೌಂದರ್ಯ ಮತ್ತು ಸೌಭಾಗ್ಯದ ಹಿಂದೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸದಸ್ಯರು, ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಜನರ ಪರಿಶ್ರಮವಿದೆ ಎಂದು ಸ್ಮರಿಸಿದರು.

ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳು ಹಾಗೂ ಹಳ್ಳಿಗಳ ಕೆರೆಗಳಿಗೂ ನೀರು ಹರಿಯಬೇಕೆಂಬ ಸಾರ್ವಜನಿಕರ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಹೋರಾಟಗಾರರ ಹಾಗೂ ಜನಪ್ರತಿನಿಧಿಗಳ ಸಂಯುಕ್ತ ಶ್ರಮ
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಮುಖಂಡ ಚಿಕ್ಕಪ್ಪನಹಳ್ಳಿ ಮಾರುತಿ
, ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು ಯೋಜನೆಯ ಪರವಾಗಿ ಧ್ವನಿಯೆತ್ತಿದರೆ, ಮತ್ತೊಂದೆಡೆ ಹೋರಾಟಗಾರರು ದಶಕಗಳ ಕಾಲ ತಳಮಟ್ಟದಿಂದ ಚಳವಳಿ ನಡೆಸಿದ್ದಾರೆ. ಈ ಎರಡೂ ವರ್ಗಗಳ ಸಮಷ್ಟಿ ಶ್ರಮದಿಂದಲೇ ಇಂದು ಜಿಲ್ಲೆಗೆ ಭದ್ರೆ ನೀರು ಹರಿಯಲು ಸಾಧ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಮನೆಮಾಡಿರುವ ಈ ಸಂಭ್ರಮವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ಅವರು ಲಕ್ಷಾಂತರ ಜನರಿಗೆ ಸಿಹಿ ಹಂಚುವ ಮೂಲಕ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಈ ಸಿಹಿ ಸಂಭ್ರಮದ ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಮುಖಂಡ ಎನ್.ಪಿ. ಭರತ್, ವಕೀಲ ಎ.ಎಚ್. ಸುರೇಶ್ ಕಲ್ಲಹಳ್ಳಿ, ಪಿಡಿಒ ಕೆ.ಸಿ. ಸುನೀತಾ, ಗೀತಾ ಪರಶುರಾಮ್ ಸೇರಿದಂತೆ ನೂರಾರು ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಚಾರಿಕತೆಯ ದಾರಿದೀಪ: ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ: ಕೆಯುಡಬ್ಲ್ಯೂಜೆ ಖಂಡನೆಲವರ್‌ಬಾಯ್‌ಅವತಾರದಲ್ಲಿ ಬರುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ:  ಹೊಸ ಸಿನಿಮಾ 'ಕೆಮಿಸ್ಟ್ರಿ'!ಗಾಜಾ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಸಹ-ಪೈಲಟ್ ಒಮಾನ್ ಒಪ್ಪಿಗೆ!ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಸಂವಿಧಾನ ಪ್ರಸ್ತಾವನೆ ಪಠಣ ಕಡ್ಡಾಯ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ!ಇಂಡಿಯಾ ಬಣದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಬೃಹತ್ ಪಾದಯಾತ್ರೆಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ 1 ಕೋಟಿ ನಗದು ಪುರಸ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ: ಸರ್ಕಾರ!ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆ ಮಾಡದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ!'ಇಂಡಿಯಾ' ಒಕ್ಕೂಟ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಪ್ರಮುಖ ನಾಯಕರು ವಶಕ್ಕೆ!ಪಂಚಮಸಾಲಿ ಮಠದಲ್ಲಿ ಅಕ್ಟೋಬರ್‌31ರವರೆಗೆ ನಿಷೇಧಾಜ್ಞೆ; ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ