E-PAPER
18 Nov 2026, 11:20:23 PM|
Gold₹13444/gGold24K ₹13,444/g - 22K ₹12,313/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅನಾಮಧೇಯ ಶವದ ಕೊಲೆ ರಹಸ್ಯ ಭೇದಿಸಿದ ಗ್ರಾಮಾಂತರ ಪೊಲೀಸರು; ನಾಲ್ವರ ಬಂಧನ

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ:
ಜಿಲ್ಲೆಯ ಇಂಗಳದಾಳು ಲಂಬಾಣಿಹಟ್ಟಿ ಗ್ರಾಮದ ಬಳಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ಶವದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

​ಪ್ರಕರಣದ ಹಿನ್ನೆಲೆ:
​ದಿನಾಂಕ 01.07.2026 ರಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ, ಇಂಗಳದಾಳು ಲಂಬಾಣಿಹಟ್ಟಿ ಗ್ರಾಮದ ಗುಡ್ಡದ ಬಳಿ ಅನಾಮಧೇಯ ಗಂಡಸಿನ ಶವವೊಂದು ಪತ್ತೆಯಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ (ಸಿಪಿಸಿ-2520 ವೀರಭದ್ರಪ್ಪ) ತಮ್ಮ ಊರಿನಲ್ಲಿ ಮೃತನ ಹೋಲಿಕೆಯುಳ್ಳ ವ್ಯಕ್ತಿ ಕಾಣೆಯಾಗಿರುವ ಮಾಹಿತಿ ಆಧರಿಸಿ ತನಿಖೆ ಕೈಗೊಂಡರು.

​ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದ ನಿವಾಸಿ ರೂಪಾ ಹೆಚ್.ಜೆ. (ಕೋಂ ಶಿವಮೂರ್ತಿ) ಎಂಬುವವರನ್ನು ಸ್ಥಳಕ್ಕೆ ಕರೆಸಿ ಶವವನ್ನು ತೋರಿಸಿದಾಗ, ಅದು ತಮ್ಮ ಪತಿ ಶಿವಮೂರ್ತಿ (38 ವರ್ಷ) ಅವರದ್ದೇ ಎಂದು ಗುರುತಿಸಿದ್ದಾರೆ. ಮೃತ ಶಿವಮೂರ್ತಿ ಅವರು ಪರಶುರಾಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

​ನಾಪತ್ತೆಯಾಗಿದ್ದ ಪತಿ ಶವವಾಗಿ ಪತ್ತೆ:
​ದಿನಾಂಕ
26.06.2026 ರಂದು ಶಿವಮೂರ್ತಿ ಅವರು ಚೌಳೂರು ಗ್ರಾಮದಿಂದ ಶಿವಮೊಗ್ಗಕ್ಕೆ ಆಸ್ಪತ್ರೆಗೆ ಬಾಡಿಗೆ ಇದೆ ಎಂದು ಹೇಳಿ ತಮ್ಮ ಕಾರಿನಲ್ಲಿ (KA16-AA-4285) ಹೋದವರು ವಾಪಸ್ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಕಾರು ಚನ್ನಗಿರಿ ಸಮೀಪದ ಶ್ರೀನಿವಾಸಪುರ ಗೇಟ್ ಬಳಿ ಪತ್ತೆಯಾಗಿತ್ತು, ಆದರೆ ಶಿವಮೂರ್ತಿ ಇರಲಿಲ್ಲ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು (ಮೊ.ನಂ: 396/2026) ದೂರು ದಾಖಲಾಗಿತ್ತು. ಆದರೆ, ಜುಲೈ 1 ರಂದು ಪತಿಯ ಶವ ಸಿಕ್ಕ ಹಿನ್ನೆಲೆಯಲ್ಲಿ, ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿ, ಶವವನ್ನು ಇಲ್ಲಿ ತಂದು ಸುಟ್ಟು ಹಾಕಿದ್ದಾರೆ ಎಂದು ರೂಪಾ ಅವರು ನೀಡಿದ ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

news_1783641638_1_453.jpg

 

news_1783641638_2_169.jpg

 

news_1783641638_3_657.jpg

 

news_1783641638_4_532.jpg

 

​ನಾಲ್ಕು ಆರೋಪಿಗಳ ಬಂಧನ:
​ಪ್ರಕರಣದ ಗಾಂಭೀರ್ಯ ಪರಿಗಣಿಸಿ
, ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

​ಡಿವೈಎಸ್‌ಪಿ ಅರುಣ್ ನಾಗೇಗೌಡ ಅವರ ನೇತೃತ್ವದಲ್ಲಿ, ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಚಂದ್ರ ನಾಯಕ್, ಪಿ.ಎಸ್.ಐ ಸುರೇಶ್, ರುಕ್ಮಿಣಿ ಹಾಗೂ ಸಿಬ್ಬಂದಿಗಳಾದ ಜಯರಾಂ, ವೀರಭದ್ರಪ್ಪ, ನಾಗರಾಜನಾಯ್ಕ್, ತಿಮ್ಮಣ್ಣ, ಪ್ರಸನ್ನ ಮತ್ತು ಮಪಿಸಿ-ನಾಗರತ್ನಮ್ಮ ಒಳಗೊಂಡ ತಂಡವು ತನಿಖೆ ನಡೆಸಿ ಕೆಳಗಿನ ಆರೋಪಿಗಳನ್ನು ಬಂಧಿಸಿದೆ.

​ಎ-1 ನೂರ್ ಅಹಮದ್ @ ರಿಯಾಜ್
​ಎ-
2 ಸುಮತಿ (ಗಂಡ ತಿಪ್ಪೇಸ್ವಾಮಿ, ಚೌಳೂರು ಗ್ರಾಮ)
​ಎ-
4 ಅಕ್ಷಯ್ @ ಅಜ್ಜು
​ಎ-
5 ಝಂಕಾರ್

​ಯಶಸ್ವಿಯಾಗಿ ಪ್ರಕರಣವನ್ನು ಭೇದಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಡಿಗೇಹಳ್ಳಿ ಗ್ರಾಮದ ಜಮೀನುಗಳನ್ನು ಭೂ ಸ್ವಾದಿನ ಪ್ರಕ್ರಿಯೆ ಯಿಂದ ಕೈ ಬಿಡಲು ರೈತರ ಆಗ್ರಹಗ್ರಾಮೀಣ ಜನರ ಆಡು ಭಾಷೆಯೇ ಜಾನಪದ ಸಾಹಿತ್ಯಗಳು:ಜಿ. ಸುರೇಶ್ ಎಐ, ಸೆಮಿಕಂಡಕ್ಟರ್ ಮತ್ತು ಬಯೋಟೆಕ್ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿ: ಸಿಎಂನೀರಾವರಿ ತಾರತಮ್ಯ ಆರೋಪ: ರಾಜೀನಾಮೆ ಎಚ್ಚರಿಕೆ ನೀಡಿದ ಹೊನ್ನಾಳಿ ಶಾಸಕ ಶಾಂತನಗೌಡಡಿ.03 ಮತ್ತು 04ರಂದು ಮಾರಮ್ಮ ದೇವಿಯ ದೇವಸ್ಥಾನ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆಯಡಿಯೂರಪ್ಪ ಜೈಲಿಗೆ ಹೋಗಿದ್ದೇಕೆ?; ರಾಘವೇಂದ್ರ, ವಿಜಯೇಂದ್ರ ಜನರಿಗೆ ಹೇಳಲಿ: ಮಧು ಬಂಗಾರಪ್ಪಗ್ರಾಮ ಪಂಚಾಯಿತಿ ಅನುದಾನ ಬಾಕಿ: ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ನಿರ್ಧಾರಗುಂಡೇಟಿನಿಂದ ವ್ಯಕ್ತಿಯ ನಿಗೂಢ ಸಾವು: ಕೊಲೆಯೋ, ಆತ್ಮಹತ್ಯೆಯೋ? ತನಿಖೆ ಚುರುಕುಚಾಲಕನಿಗೆ ತಲೆಸುತ್ತು: ನಿಯಂತ್ರಣ ತಪ್ಪಿ ಕಾಂಪ್ಲೆಕ್ಸ್‌ನತ್ತ ನುಗ್ಗಿದ ಬಸ್!ಚಿನ್ನದ ರಥ ನಿರ್ಮಾಣ, ಸ್ಥಳೀಯ ಅಭಿವೃದ್ಧಿ ಹಾಗೂ ಮೈತ್ರಿ ಚುನಾವಣೆ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ