ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು
ಕಸ್ತೂರಿರಂಗನ್ ವರದಿ ವಿರುದ್ಧ ಬಾಳೆಹೊನ್ನೂರಿನಲ್ಲಿ ಬೃಹತ್ ಸಮಾವೇಶಕ್ಕೆ ಭಾಗವಹಿಸಿದ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ ರಾಜೇಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿ, "ಮಲೆನಾಡಿನ ರೈತರ ಬದುಕು, ಜಮೀನು ಮತ್ತು ಭವಿಷ್ಯವನ್ನು ಪ್ರಶ್ನಾರ್ಥಕವಾಗಿಸುವ ಕಸ್ತೂರಿರಂಗನ್ ವರದಿ ವಿರುದ್ಧ ಬಾಳೆಹೊನ್ನೂರು ಬಂದ್ ಮೂಲಕ ಜನರು ತಮ್ಮ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
ಆದರೆ, ರೈತರ ಬದುಕು ಮತ್ತು ಮಲೆನಾಡಿನ ಅಸ್ತಿತ್ವಕ್ಕೆ ಸಂಬಂಧಿಸಿದ ಇಂತಹ ಮಹತ್ವದ ಹೋರಾಟದ ಸಂದರ್ಭದಲ್ಲಿ ಮಾಜಿ ಶಾಸಕರ ಗೈರುಹಾಜರಿ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದು ರಾಜಕೀಯ ಲಾಭಕ್ಕಾಗಿ ನಡೆಯುವ ಹೋರಾಟವಲ್ಲ—ಮಲೆನಾಡಿನ ಅಸ್ತಿತ್ವ ಮತ್ತು ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ.
ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕಿಂತ, ರೈತರ ಸಂಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ನಿಂತು ಧ್ವನಿ ಎತ್ತುವುದು ಮುಖ್ಯ. ಯಾರು ನಿಜವಾಗಿ ರೈತರ ಪರ? ಯಾರು ಕೇವಲ ಮಾತಿನ ನಾಯಕರು? ಎಂಬುದನ್ನು ಜನರೇ ತೀರ್ಮಾನಿಸಲಿ.ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರಕ್ಕೂ ಮೊದಲು ರೈತರ ಧ್ವನಿ ಕೇಳಲೇಬೇಕು. “ರೈತರ ಜಮೀನು, ಮಲೆನಾಡಿನ ಹಕ್ಕು, ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ!” ಎಂದು ಶಾಸಕ ಟಿ. ಡಿ ರಾಜೇಗೌಡ ತಿಳಿಸಿದರು.




