ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕು ಭೋವಿ ಸಮಾಜದ ನೂತನ ಅಧ್ಯಕ್ಷರಾಗಿ ಹುಲಗಲಕುಂಟೆಯ ಕೆ. ತಿಮ್ಮರಾಜು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಮಾಜದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಆಲೂರು ನಾಗೇಶ್ ಹಾಗೂ ಕಾರ್ಯದರ್ಶಿಯಾಗಿ ಸೂರಗೊಂಡನಹಳ್ಳಿಯ ಟಿ. ಭೂತಾ ಭೋವಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಆಯ್ಕೆ:
ಸಂಘಟನೆಯ ನೂತನ ನಿರ್ದೇಶಕರಾಗಿ ಬಾಲರಾಜು, ಮಹೇಶ್, ಪಲ್ಲವ ಗುರುಪ್ರಸಾತ್, ಮೂರ್ತಿ, ಬಳಗಟ್ಟ ಗೋವಿಂದರಾಜು ಹಾಗೂ ಬಬ್ಬೂರು ತಿಮ್ಮರಾಜು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಆಯ್ಕೆಯ ಸಂದರ್ಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಕೃಷ್ಣಮೂರ್ತಿ ಟಿ., ಸಮಾಜದ ಮಾಜಿ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಹನುಮಂತಣ್ಣ ಹುಲಗಲಕುಂಟೆ, ರಂಗಸ್ವಾಮಿ, ಯಶೋದರ್, ಹನುಮಂತ, ಎಳನೀರು ವೆಂಕಟೇಶ್, ಪಾಳ್ಯ ವೆಂಕಟೇಶ್, ವಿಜಯ್ ಕುಮಾರ್, ಮಂಜು ಮಾಸ್ಟರ್, ಬಳಗಟ್ಟೆ ಹನುಮಂತಣ್ಣ, ಸಂತೋಷ್, ಮಹಾಂತೇಶ್, ಪರಮೇಶ್ ಯಳನಾಡು ಹಾಗೂ ವೆಂಕಟೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.




