ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ದಂಧೆಯು ಸರ್ಕಾರದ ಅನುಮತಿಯಿಲ್ಲದೆ, ಲಾಭದ ಉದ್ದೇಶದಿಂದ ಕೆರೆಯಲ್ಲಿ ಮಣ್ಣನ್ನು ಅಗೆದು ಕಳ್ಳ ಸಾಗಾಣಿಕೆ ಮಾಡುವ ಕಾನೂನುಬಾಹಿರ ಚಟುವಟಿಕೆಯಾಗಿದೆ. ಇದು ರಾಜ್ಯದ ನಾನಾ ಭಾಗಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಇಂತಹ ಮಣ್ಣು ಸಾಗಾಟ ದೊಡ್ಡಬಳ್ಳಾಪುರ ನಗರದ ಹೊರವಲಯದ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ ಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ಬೆಳಕಿಗೆ ಬಂದಿದ್ದು, ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಾಲಕ, ಮಣ್ಣು ಸಮೇತ ಸುಮಾರು 7 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ನಡೆಸಲಾಗುತ್ತಿರುವ ಗ್ರಾಮಾಂತರ ಠಾಣೆಯ .ಸಾಲು ಸಾಲು ಗ್ರಾಮ ಸಭೆಗಳ ಪರಿಣಾಮ ಅಕ್ರಮ ಮಣ್ಣು ದಂಧೆ ಬೆಳಕಿಗೆ ಬಂದಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರವಾನಗಿ ಇಲ್ಲದೇ ಕೆರೆ ಮಣ್ಣು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೆರೆ ಮಣ್ಣು ರೈತರಿಗೆ ಉಪಯೋಗವಾಗಿದ್ದು ಜಮೀನಿನ ಫಲವತ್ತತೆ ಹೆಚ್ಚಿಸಲು ಕೆರೆ ಮಣ್ಣು ಅತ್ಯಂತ ಪರಿಣಾಮಕಾರಿ ಮತ್ತು ನೈಸರ್ಗಿಕ ವಿಧಾನವಾಗಿದೆ. ಕೆರೆ ಮಣ್ಣು ಪೋಷಕಾಂಶಗಳಿಂದ ಕೂಡಿರುತ್ತದೆ. ಮತ್ತು ಮಣ್ಣಿನ ರಚನೆಯನ್ನು ಸುಧಾರಿಸಿ, ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕೆರೆ ಮಣ್ಣಿನ ಪ್ರಯೋಜನಗಳು ಪೋಷಕಾಂಶಗಳ ಆಗರ: ಕೆರೆ ಮಣ್ಣಿನಲ್ಲಿ ಸಸ್ಯಗಳಿಗೆ ಅಗತ್ಯವಿರುವ ನೈಟ್ರೋಜನ್, ರಂಜಕ, ಪೊಟ್ಯಾಸಿಯಮ್ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ.ನೀರು ಹಿಡಿದಿಡುವ ಸಾಮರ್ಥ್ಯ: ಇದು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ.ಮಣ್ಣಿನ ಮೃದುತ್ವ: ಜಮೀನಿನ ಜಿಗುಟು ಮಣ್ಣಿಗೆ ಕೆರೆ ಮಣ್ಣು ಸೇರಿಸುವುದರಿಂದ ಮಣ್ಣು ಗುಳ್ಳೆಯಾಗುತ್ತದೆ ಮತ್ತು ಬೇರುಗಳು ಚೆನ್ನಾಗಿ ಬೆಳೆಯಲು ಅನುಕೂಲವಾಗುತ್ತದೆ.
ಕೃಷಿ ಚಟುವಟಿಕೆಗೆ ಬಳೆಸಬೇಕಾಗಿರುವ ಮಣ್ಣು ವಾಣಿಜ್ಯ ಚಟುವಟಿಗೆ ಬಳಿಸುತ್ತಿರುವುದು ಸಾರ್ವಜನಿಕರ ಮಾಹಿತಿಯ ಮೇರೆಗೆ ಕೆರೆ ಮಣ್ಣು ತುಂಬಿದ್ದ ಲಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.



