ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧರ್ಮಪುರ ಕೆರೆ ಸೇರಿದಂತೆ ಧರ್ಮಪುರ ಹೋಬಳಿಯ ಸಮಸ್ತ ಕೆರೆಗಳಿಗೆ ಹೊಸಳ್ಳಿ ಬ್ಯಾರೇಜ್ನಿಂದ ಹೆಚ್ಚುವರಿ ದೊಡ್ಡ ಗಾತ್ರದ ಪೈಪ್ಗಳನ್ನು ಅಳವಡಿಸುವ ಮೂಲಕ ನೀರು ಹರಿಸಬೇಕೆಂದು ಒತ್ತಾಯಿಸಿ ಧರ್ಮಪುರ ಹೋಬಳಿಯ ರೈತರು ಹಾಗೂ ಹೋರಾಟಗಾರರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹೋಬಳಿಯ ವ್ಯಾಪ್ತಿಯಲ್ಲಿ ತೀವ್ರವಾಗಿರುವ ನೀರಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ರೈತರು, ಈ ಭಾಗದ ಕೃಷಿ ಮತ್ತು ಅಂತರ್ಜಲ ವೃದ್ಧಿಗೆ ಹೊಸಳ್ಳಿ ಬ್ಯಾರೇಜ್ ಯೋಜನೆಯನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು, ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.




