ಚಂದ್ರವಳ್ಳಿ ನ್ಯೂಸ್, ದಾವಣಗೆರೆ/ಚಳ್ಳಕೆರೆ:
ದಾವಣಗೆರೆಯ ಎ.ವಿ.ಕೆ. ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜೀವಿತ ಎಂ.ಪಿ. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್.ಡಿ. (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ರಾಣಿಕೆರೆ ಮತ್ತು ದೊಡ್ಡೇರಿ ಕೆರೆಗಳ ಶೈವಲಗಳ ಕುರಿತು ಅವರು ನಡೆಸಿದ "ಡೈವರ್ಸಿಟಿ ಅಂಡ್ ಬಯೋಕೆಮಿಕಲ್ ಪ್ರಾಪರ್ಟೀಸ್ ಆಫ್ ಆಲ್ಗೆ ಇನ್ ರಾಣಿಕೆರೆ ಅಂಡ್ ದೊಡ್ಡೇರಿ ಕೆರೆ ಆಫ್ ಚಳ್ಳಕೆರೆ" (Diversity and Biochemical Properties of Algae in Ranikere and Dodderekere of Challakere) ಎಂಬ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ. ಅವರಿಗೆ ಡಾ. ಸೋಮಶೇಖರ್ ಜಿ. ಮಾಳಮ್ಮನವರ ಮಾರ್ಗದರ್ಶನ ನೀಡಿದ್ದರು.
ಪೂರ್ಣಚಂದ್ರ ಎಂ.ಕೆ. ಮತ್ತು ರೇಖಾ ಕೆ.ಜೆ. ದಂಪತಿಗಳ ಪುತ್ರಿಯಾದ ಜೀವಿತ ಅವರು, ಸಂತೋಷ್ ಬಿ.ಎಲ್. ಅವರ ಧರ್ಮಪತ್ನಿಯಾಗಿದ್ದಾರೆ. ಸತತ ಪರಿಶ್ರಮ ಹಾಗೂ ಶೈಕ್ಷಣಿಕ ಬದ್ಧತೆಯಿಂದ ಈ ಸಾಧನೆ ಮಾಡಿರುವ ಡಾ. ಜೀವಿತ ಎಂ.ಪಿ. ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ ವೃಂದ ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.




