ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಹಕಾರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಪ್ರತಿಷ್ಠಿತ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿ ಚಂದನ ಕೆ.ಎಲ್. ಪ್ರಥಮ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ ಡಾ.ಎಂ.ಚಂದ್ರಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್, ಡೀನ್ ಅನಂತರಾಮು, ಶೈಕ್ಷಣಿಕ ನಿರ್ದೇಶಕ
ಸಂಪತ್ಕುಮಾರ್ ಸಿ.ಡಿ, ಪ್ರಾಚಾರ್ಯರಾದ ಪಿ.ಬಸವರಾಜಯ್ಯ, ಮುಖ್ಯ ಶಿಕ್ಷಕಿ ಜರೀನಾ, ಪಿಆರ್ಓ. ರವಿಕುಮಾರ್, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ವಿದ್ಯಾರ್ಥಿನಿ ಚಂದನ ಕೆ.ಎಲ್.ಗೆ ಅಭಿನಂದಿಸಿದ್ದಾರೆ.




