ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಕಾರ್ಯಾಲಯದಲ್ಲಿ ರಾಷ್ಟ್ರೀಯ ಕಲಾ ಶಿಬಿರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ 'Artists with Modi Ji' ರಾಷ್ಟ್ರೀಯ ಕಲಾ ಶಿಬಿರ ಹಾಗೂ ವರ್ಣಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಿ, ಕಾರ್ಯಕ್ರಮದ ಕುರಿತು ಹಂಚಿಕೊಂಡ ಪ್ರಮುಖ ವಿವರಗಳು.
ಅದ್ಭುತ ಕಲಾಕೃತಿಗಳ ಅನಾವರಣ: ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಹಿರಿಯ ಹಾಗೂ ಕಿರಿಯ ಕಲಾವಿದರು ತಮ್ಮ ವರ್ಣಚಿತ್ರಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆ, 'ವಿಕಸಿತ ಭಾರತ'ದ ಪರಿಕಲ್ಪನೆ ಮತ್ತು ದೇಶದ ಅಭಿವೃದ್ಧಿಯ ಯಶೋಗಾಥೆಯನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.
ಕಲಾವಿದರಿಗೆ ಅಭಿನಂದನೆ: ಕಲೆಯ ಮೂಲಕ ದೇಶಪ್ರೇಮ ಹಾಗೂ ಸೇವಾ ಭಾವನೆಗೆ ವರ್ಣ ತುಂಬಿ ಮೋದಿ ಅವರ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದ ಎಲ್ಲಾ ಕಲಾವಿದರಿಗೂ ವಿಜಯೇಂದ್ರ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ದೇಶದ ನವನಿರ್ಮಾಣದ ಕಲ್ಪನೆಯನ್ನು ರೇಖಿಸಿ, ಬಣ್ಣಗಳ ಮೂಲಕ ಜಾಗೃತಿ ಮೂಡಿಸಿದ ಈ ಕಲಾ ಶಿಬಿರವು ಸಾರ್ವಜನಿಕರ ಗಮನ ಸೆಳೆಯಿತು.




