ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ಕರೆ ನೀಡಿರುವ ದೇಶವ್ಯಾಪಿ ಮುಷ್ಕರದ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಪ್ರಮುಖ ಸೂಚನೆಯನ್ನು ನೀಡಿದೆ.
ಮುಷ್ಕರದ ದಿನಗಳು: ಸೆಪ್ಟೆಂಬರ್ 28, 2026 ರಿಂದ ಸೆಪ್ಟೆಂಬರ್ 30, 2026ರವರೆಗೆ ಒಟ್ಟು ಮೂರು ದಿನಗಳ ಕಾಲ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಇದರಿಂದ ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆಯಾಗುವ ಸಾಧ್ಯತೆಯಿದೆ.
ವಿಶೇಷ ರವಿವಾರದ ಸೇವೆ: ಗ್ರಾಹಕರ ಅನುಕೂಲಕ್ಕಾಗಿ, ಮುಷ್ಕರ ಆರಂಭವಾಗುವ ಮುನ್ನವೇ ಸೆಪ್ಟೆಂಬರ್ 27, 2026 (ರವಿವಾರ) ರಂದು ಎಸ್‌ಬಿಐ ಎಲ್ಲಾ ಶಾಖೆಗಳು ಎಂದಿನಂತೆ ತೆರೆದಿರುತ್ತವೆ. ಗ್ರಾಹಕರು ಈ ದಿನದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಎಸ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರಿಗೆ ಪ್ರಮುಖ ಸಲಹೆಗಳು:
ನಿಮ್ಮ ಪ್ರಮುಖ ಮತ್ತು ತುರ್ತು ಬ್ಯಾಂಕಿಂಗ್ ವಹಿವಾಟುಗಳನ್ನು ಮುಷ್ಕರದ ದಿನಗಳ ಮುಂಚಿತವಾಗಿ ಮುಗಿಸಿಕೊಳ್ಳಿ.
ಹಣದ ಅಗತ್ಯತೆಗಾಗಿ ಎಟಿಎಂ (ATMs) ಅಥವಾ ADWM ಯಂತ್ರಗಳನ್ನು ಬಳಸಿ. ಸ್ಥಳೀಯ ಗ್ರಾಹಕ ಸೇವಾ ಕೇಂದ್ರಗಳನ್ನು (CSPs) ಸಂಪರ್ಕಿಸಿ.
ಶಾಖೆಗಳಿಗೆ ಭೇಟಿ ನೀಡುವ ಬದಲು ಇಂಟರ್ನೆಟ್ ಬ್ಯಾಂಕಿಂಗ್, ಯೋನೋ (YONO), ಮೊಬೈಲ್ ಬ್ಯಾಂಕಿಂಗ್ ಮತ್ತು ಯುಪಿಐ (UPI) ಮುಂತಾದ ಡಿಜಿಟಲ್ ಸೇವೆಗಳನ್ನು ಆದ್ಯತೆಯ ಮೇರೆಗೆ ಬಳಸಲು ಬ್ಯಾಂಕ್ ಕೋರಿದೆ. ಅಲ್ಲದೆ ಗ್ರಾಹಕರಿಗೆ ಉಂಟಾಗಬಹುದಾದ ಅನಾನುಕೂಲತೆಗೆ ಬ್ಯಾಂಕ್ ವಿಷಾದ ವ್ಯಕ್ತಪಡಿಸಿದೆ.




