Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ವಸಂತಕುಮಾರ್, ಕಾರ್ಯದರ್ಶಿಯಾಗಿ ಚಂದ್ರಹಾಸ್ ಅಧಿಕಾರ ಸ್ವೀಕಾರ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ಥಳೀಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ನಗರದ ರೋಟರಿ ಕ್ಲಬ್‌ನ ಕೃಷ್ಣಪ್ಪ ಸಭಾಂಗಣದಲ್ಲಿ ಅತ್ಯಂತ ಸಡಗರದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಚಿನ್ನಪ್ಪ ರೆಡ್ಡಿ ಹಾಗೂ ಸಹಾಯಕ ಗವರ್ನರ್ ಸವಿತಾ ಶಿವಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. 

ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ:
ರೋಟರಿ ಕ್ಲಬ್‌ನೂತನ ಅಧ್ಯಕ್ಷರಾಗಿ ಎಚ್.ಡಿ ವಸಂತಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಟಿ. ಚಂದ್ರಹಾಸ್ ಅವರು ಅಧಿಕಾರ ಸೂತ್ರವನ್ನು ಕೈಗೆತ್ತಿಕೊಂಡರು.

ಉಪಾಧ್ಯಕ್ಷರಾಗಿ ಸಣ್ಣ ಭೀಮಣ್ಣ, ಐಪಿಪಿ ಆಗಿ ಕೆ.ಎ. ವರುಣ್, ಸಹ ಕಾರ್ಯದರ್ಶಿಗಳಾಗಿ ಎಸ್. ಜೋಗಪ್ಪ ಮತ್ತು ಬಿ.ಕೆ. ನಾಗಣ್ಣ, ಖಜಾಂಚಿಗಳಾಗಿ ದೇವರಾಜ್ ಮೂರ್ತಿ ಮತ್ತು ಜಗದೀಶ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ನೂತನ ಸದಸ್ಯರು ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಮಹತ್ವದ ಪದಗ್ರಹಣ ಸಮಾರಂಭದಲ್ಲಿ ಹಿರಿಯ ರೋಟೆರಿಯನ್ ಪ್ರಮುಖರಾದ ಎಲ್. ಆನಂದ ಶೆಟ್ಟಿ, ಎಚ್.ಎಸ್. ಸುಂದರ ರಾಜ್, ಟಿ. ಮಲ್ಲೇಶಪ್ಪ, ನಾಗರಾಜ ಗುಪ್ತ, ಕಿರಣ್ ಕುಮಾರ್, ವಿಕಾಸ್ ಜೈನ್ ಸೇರಿದಂತೆ ರೋಟರಿ ಸಂಸ್ಥೆಯ ನೂರಾರು ಸದಸ್ಯರು, ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.