ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಶ್ಚಿಮ ನೌಕಾಪಡೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಉಪ ಅಡ್ಮಿರಲ್ (ವೈಸ್ ಅಡ್ಮಿರಲ್) ಸಂಜಯ್ ವತ್ಸಾಯನ್ (PVSM, AVSM, NM) ಅವರು ತಮ್ಮ ತಂಡದೊಂದಿಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ನೌಕಾಪಡೆಯ ಹಿರಿಯ ಅಧಿಕಾರಿಗಳ ಬಳಗ ಉಪಸ್ಥಿತರಿದ್ದು, ಮುಖ್ಯಮಂತ್ರಿಗಳಿಗೆ ಶುಭ ಕೋರಿದರು. ಭೇಟಿಯ ವೇಳೆ ರಾಜ್ಯ ಮತ್ತು ಸೇನೆಯ ನಡುವಿನ ಪರಸ್ಪರ ಸಹಕಾರ ಹಾಗೂ ವಿವಿಧ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಾಯಿತು.




