Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎರಡು ಬಾರಿ ಸಿಎಂ ಆಗಿದ್ದಾಗ ನೈಸ್ ರದ್ದು ಮಾಡಲು ಏನು ತೊಂದರೆ ಇತ್ತು? - ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ನೇರ ಪ್ರಶ್ನೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಯೋಜನೆ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ಪ್ರಧಾನಮಂತ್ರಿಗಳ ಬಳಿ ಹೋಗಿ ನೈಸ್ ಯೋಜನೆ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಆದರೆ ಅವರು ಕೇಂದ್ರ ಸಚಿವರಾಗುವ ಮುನ್ನ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆಗಲೇ ನೈಸ್ ಯೋಜನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಅನಿಸಿದ್ದರೆ, ತಮ್ಮ ಅಧಿಕಾರಾವಧಿಯಲ್ಲೇ ಅದನ್ನು ಸರ್ಕಾರದ ವಶಕ್ಕೆ ಪಡೆಯಲು ಏಕೆ ಕ್ರಮ ಕೈಗೊಳ್ಳಲಿಲ್ಲ?" ಎಂದು ಪ್ರಶ್ನಿಸಿದರು.

Advertisement

 

"ನೈಸ್ ಯೋಜನೆಯ ಮೂಲವೇ ದೇವೇಗೌಡರ ಕಾಲದ್ದು":
ನೈಸ್ ಯೋಜನೆಯ ಇತಿಹಾಸವನ್ನು ಮರೆತು ಇಂದು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ ಸಚಿವರು, "ನೈಸ್ ಯೋಜನೆಗೆ ಸಂಬಂಧಿಸಿದ ಮೂಲ ಒಪ್ಪಂದ ಮತ್ತು ಯೋಜನಾ ಪ್ರಕ್ರಿಯೆ 1995ರ ಅವಧಿಯಲ್ಲಿ ಆರಂಭವಾಯಿತು. ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ನೇತೃತ್ವದ ಸರ್ಕಾರದ ಅವಧಿಯಲ್ಲೇ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಚಾಲನೆ ದೊರೆತಿತ್ತು. ಇಂದು ಇದೇ ಯೋಜನೆ ಬಗ್ಗೆ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡುತ್ತಿರುವುದು ಸಾರ್ವಜನಿಕರ ಮುಂದೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ಇಂದು ಹುಟ್ಟಿಕೊಂಡಿರುವ ಯೋಜನೆಯಲ್ಲ, ಮೂರು ದಶಕಗಳ ಇತಿಹಾಸ ಹೊಂದಿರುವ ಯೋಜನೆ" ಎಂದರು.

*"ಶಿಶು ದಾರಿ ತಪ್ಪಿದರೆ ತಂದೆ-ತಾಯಿಯ ಹೊಣೆಗಾರಿಕೆ ಅಲ್ಲವೇ?":
"ಒಂದು ಮಗು ಹುಟ್ಟಿದಾಗ ಅದು ಒಳ್ಳೆಯ ದಾರಿಯಲ್ಲಿ ಬೆಳೆಯಬೇಕು ಎನ್ನುವುದು ತಂದೆ-ತಾಯಿಯ ಆಶಯ. ಆದರೆ ಆ ಮಗು ದಾರಿ ತಪ್ಪುತ್ತಿದೆ ಎಂದು ಗೊತ್ತಾದಾಗ, ಅದನ್ನು ಸರಿದಾರಿಗೆ ತರುವ ಜವಾಬ್ದಾರಿ ತಂದೆ-ತಾಯಿಯದ್ದಲ್ಲವೇ? ನೈಸ್ ಎಂಬ 'ಶಿಶು' ದಾರಿ ತಪ್ಪುತ್ತಿದೆ ಎಂದು ಅನಿಸಿದ್ದರೆ, ಅದು ನಿಮ್ಮ ಅಧಿಕಾರಾವಧಿಯಲ್ಲೇ ಸರಿಪಡಿಸಬೇಕಿತ್ತು. ಆಗಲೇ ಕ್ರಮ ಕೈಗೊಂಡಿದ್ದರೆ ಇಂದು ಮತ್ತೊಬ್ಬರ ಮೇಲೆ ಆರೋಪ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಕುಟುಕಿದರು.

"ಎರಡು ಬಾರಿ ಸಿಎಂ ಆಗಿದ್ದಾಗ ಏಕೆ ರದ್ದುಪಡಿಸಲಿಲ್ಲ?":
"ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ, ಆಡಳಿತ ಯಂತ್ರ, ಸಂಪುಟ ಮತ್ತು ಕಾನೂನುಬದ್ಧ ಅಧಿಕಾರ ಎಲ್ಲವೂ ಕೈಯಲ್ಲಿತ್ತು. ಆಗ ನೈಸ್ ಯೋಜನೆಯಲ್ಲಿ ಅಕ್ರಮ ಅಥವಾ ಅವ್ಯವಸ್ಥೆ ಇದೆ ಎಂದು ಅನಿಸಿದ್ದರೆ, ಯೋಜನೆಯನ್ನು ರದ್ದುಪಡಿಸಲು ಅಥವಾ ಸರ್ಕಾರದ ವಶಕ್ಕೆ ಪಡೆಯಲು ಕಾನೂನುಬದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಆಗ ಏಕೆ ಮಾಡಲಿಲ್ಲ? ಇಂದು ಅಧಿಕಾರದಲ್ಲಿರುವ ಸರ್ಕಾರದ ಮೇಲೆ ಆರೋಪ ಮಾಡುವುದು ಸುಲಭ. ಆದರೆ ಹಿಂದೆ ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳಿಗೂ ಸಾರ್ವಜನಿಕರ ಮುಂದೆ ಉತ್ತರ ನೀಡಬೇಕು" ಎಂದು ಹೇಳಿದರು.

*"ನಿಮ್ಮನ್ನು ಮಾತು ಕೇಳಿ ಕೇಳಿ ನಮಗೂ ಸಾಕಾಗಿದೆ":
"ಕುಮಾರಸ್ವಾಮಿ ಅವರು ಪ್ರತಿಯೊಂದು ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಆರೋಪ ಮಾಡುವುದಕ್ಕಿಂತ ಮೊದಲು, ತಮ್ಮ ಆಡಳಿತಾವಧಿಯಲ್ಲಿ ಏನು ಮಾಡಿದ್ದರು ಎಂಬುದನ್ನು ಜನರಿಗೆ ವಿವರಿಸಬೇಕು. ನಿಮ್ಮ ಮಾತುಗಳನ್ನು ಕೇಳಿ ಕೇಳಿ ನಮಗೂ ಸಾಕಾಗಿದೆ" ಎಂದು ವ್ಯಂಗ್ಯವಾಡಿದರು.

ಆರ್.ಅಶೋಕ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, "ಆರ್.ಅಶೋಕ್ ಅವರು ಮಾತನಾಡುವಾಗ ಬಳಸುವ ಭಾಷೆ ಮತ್ತು ಪದಪ್ರಯೋಗದ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಕೀಯ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿರುವವರು ಸಂಸ್ಕಾರ, ಸಂಯಮ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು" ಎಂದರು.

ಡಿಕೆಶಿ ಬೆಳವಣಿಗೆ ಕುಮಾರಸ್ವಾಮಿಗೆ ಆತಂಕ:
"ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿರುವುದು ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ದೊಡ್ಡ ಪ್ರಶ್ನೆಯಾಗಿ ಕಾಣಿಸುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ತಮ್ಮ ರಾಜಕೀಯ ಬಲವನ್ನು ಒಂದು ನಿರ್ದಿಷ್ಟ ಸಮುದಾಯದ ಗುರುತಿನ ಮೇಲೆ ಕಟ್ಟಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಪರ್ಯಾಯ ನಾಯಕತ್ವದ ಬೆಳವಣಿಗೆ ಆತಂಕ ಮೂಡಿಸುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ" ಎಂದು ಹೇಳಿದರು.

"ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನೈಸ್ ಯೋಜನೆಯ ಇತಿಹಾಸ, ಅದಕ್ಕೆ ಸಂಬಂಧಿಸಿದ ಸರ್ಕಾರಗಳ ನಿರ್ಧಾರಗಳು, ನ್ಯಾಯಾಲಯಗಳ ಬೆಳವಣಿಗೆಗಳು ಮತ್ತು ಇಂದಿನ ರಾಜಕೀಯ ಆರೋಪಗಳು ಇವೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ನೈಸ್ ವಿಚಾರದಲ್ಲಿ ಈಗ ಆರೋಪ-ಪ್ರತ್ಯಾರೋಪ ಮಾಡುವುದಕ್ಕಿಂತ, ಕಾನೂನುಬದ್ಧವಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ನ್ಯಾಯಾಲಯಗಳ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು ಮುಖ್ಯ. ಸರ್ಕಾರ ಅದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ" ಎಂದು ಸ್ಪಷ್ಟಪಡಿಸಿದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ:ಕೃಷ್ಣಪ್ಪ ಖ್ಯಾತ ನಟ ರಂಗಾಯಣ ರಘು ಭೇಟಿ: 'ಪ್ರೇಮದ ಊರಲ್ಲಿ' ಸಿನಿಮಾ ವೀಕ್ಷಿಸುವಂತೆ ಆತ್ಮೀಯ ಮನವಿಸೊಂಡೆಕೆರೆ ಗ್ರಾಮದ ಬಸಣ್ಣ ನಿಧನಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ದಸರಾ ವೈಭವ:…ಮಳೆಯಿಲ್ಲದೆ ಒಣಗಿದ ಜೋಳದ ಹೊಲ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ; ​HMT ಕಾರ್ಖಾನೆಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾಲೋಚನಾ ಸಭೆ