Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈ ಮಗುವಿನ ತಂದೆ ಯಾರು?, ನಿಮ್ಮ ಮನೆಯ ಪಂಚೆ ನಮ್ಮ ಮನೆಯಲ್ಲಿ ಇದೆ ಕೊಡುತ್ತೇನೆ ನಿಲ್ಲಿ!?

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗ್ನ ಸತ್ಯದ ನಗೆ: ಮುಖವಾಡಗಳ ಹಿಂದೆ ಮರೆಯಾದ ಸಮಾಜ ಒಮ್ಮೆ ಒಂದು ವಿಚಿತ್ರ ದೃಶ್ಯ.

ಒಬ್ಬ ವೇಶ್ಯೆ ತನ್ನ ಮಗುವಿಗೆ ಮಮತೆಯಿಂದ ಹಾಲುಣಿಸುತ್ತಿದ್ದಳು. ಆ ದೃಶ್ಯದಲ್ಲಿ ಮಮತೆ ಇತ್ತು, ನಿಜವಾಗಿಯೂ ತಾಯಿತನದ ತಾಪ ಇತ್ತು. ಅದನ್ನು ನೋಡಿದ ಒಬ್ಬ ಪತಿವ್ರತೆ, ತನ್ನ ನೈತಿಕತೆಯ ಗರ್ವದಿಂದ, ಸ್ವಲ್ಪ ತಿರಸ್ಕಾರ ಮಿಶ್ರಿತ ಧ್ವನಿಯಲ್ಲಿ ಕೇಳಿದಳು.

ಈ ಮಗುವಿನ ತಂದೆ ಯಾರು?”
ಪ್ರಶ್ನೆಯಲ್ಲೇ ಒಂದು ತೂಕ ಇತ್ತು. ಅದು ಕೇವಲ ಕುತೂಹಲದ ಪ್ರಶ್ನೆಯಲ್ಲ
ಅದು ತೀರ್ಪು, ಅದು ಸಮಾಜದ ದ್ವಂದ್ವ ಮಾನದಂಡದ ಪ್ರತಿಬಿಂಬ.

ಅದಕ್ಕೆ ವೇಶ್ಯೆ ನಕ್ಕಳು. ಆ ನಗುವಿನಲ್ಲಿ ನೋವೂ ಇತ್ತು, ವ್ಯಂಗ್ಯವೂ ಇತ್ತು, ಮತ್ತು ಮುಖ್ಯವಾಗಿ ಒಂದು ನಗ್ನ ಸತ್ಯವೂ ಇತ್ತು.

ಅವಳು ಶಾಂತವಾಗಿ ಉತ್ತರಿಸಿದಳು. ನಿಮ್ಮ ಮನೆಯ ಪಂಚೆ ನಮ್ಮ ಮನೆಯಲ್ಲಿ ಇದೆಕೊಡುತ್ತೇನೆ, ನಿಲ್ಲಿ. ಆ ಕ್ಷಣದಲ್ಲಿ ಮಾತು ನಿಂತಿತು. ಪ್ರಶ್ನೆ ಕೇಳಿದವಳಿಗಿಂತ ಉತ್ತರ ಕೊಟ್ಟವಳೇ ಹೆಚ್ಚು ಸತ್ಯವನ್ನು ಬಿಚ್ಚಿಟ್ಟಳು.



ಈ ಚಿಕ್ಕ ಘಟನೆಯೊಳಗೆ ದೊಡ್ಡ ಅರ್ಥ ಅಡಗಿದೆ. ಸಮಾಜದಲ್ಲಿ ನಾವು ಯಾರು ಶುದ್ಧ, ಯಾರು ಅಶುದ್ಧಎಂದು ತೀರ್ಮಾನಿಸುವುದು ಎಷ್ಟು ಸುಲಭ. ಆದರೆ ಆ ತೀರ್ಮಾನಗಳ ಹಿಂದೆ ಇರುವ ವಾಸ್ತವತೆಗಳನ್ನು ನೋಡಲು ನಾವು ಸಿದ್ಧರಾಗಿರುವುದಿಲ್ಲ.

ಒಬ್ಬಳನ್ನು ವೇಶ್ಯೆ ಎಂದು ಕರೆಯುವ ಸಮಾಜವೇ, ಅವಳ ಬಳಿಗೆ ಹೋಗುವವರನ್ನು ಪ್ರಶ್ನಿಸುವುದಿಲ್ಲ. ಅವಳ ಬದುಕನ್ನು ಹೀನವಾಗಿ ನೋಡುತ್ತೇವೆ, ಆದರೆ ಆ ಬದುಕನ್ನು ನಿರ್ಮಿಸುವ ಕಾರಣಗಳನ್ನು ಪ್ರಶ್ನಿಸುವ ಧೈರ್ಯ ತೋರಿಸುವುದಿಲ್ಲ.

ಪತಿವ್ರತೆ ತನ್ನ ಧರ್ಮದ ಹೆಮ್ಮೆಯಲ್ಲಿ ಪ್ರಶ್ನೆ ಕೇಳಿದಳು, ಆದರೆ ಆ ಪ್ರಶ್ನೆಗೆ ಬಂದ ಉತ್ತರವು ಅವಳದೇ ಮನೆಯ ಬಾಗಿಲಿಗೆ ಬಂದು ತಟ್ಟಿತು.

ಅವಳಿಗೆ ತಿಳಿಯದ ಒಂದು ಸತ್ಯ-
ನಾವು ತೀರ್ಪು ನೀಡುವಾಗ
, ನಮ್ಮ ಮನೆಯ ನೆರಳುಗಳನ್ನೂ ಮರೆಯಬಾರದು. ಈ ಕಥೆ ನಮಗೆ ಹೇಳುವುದೇನು ಅಂದ್ರೆ: ಸಮಾಜದಲ್ಲಿ ಪವಿತ್ರತೆಮತ್ತು ಅಪವಿತ್ರತೆ ಎಂಬ ಪದಗಳು ಕೆಲವೊಮ್ಮೆ ಕೇವಲ ಮುಖವಾಡಗಳು.
ನಿಜವಾದ ಸತ್ಯವನ್ನು ನೋಡಲು ಧೈರ್ಯ ಬೇಕು
, ಮತ್ತು ಅದನ್ನು ಒಪ್ಪಿಕೊಳ್ಳಲು ಇನ್ನಷ್ಟು ಧೈರ್ಯ ಬೇಕು. ಒಬ್ಬ ವೇಶ್ಯೆಯ ನಗುವಿನಲ್ಲಿ ಮೂಡಿದ ಆ ಸತ್ಯ ನಮ್ಮ ಸಮಾಜದ ದ್ವಂದ್ವ ನೈತಿಕತೆಯನ್ನು ಬಿಚ್ಚಿಡುತ್ತದೆ.

ನಾವು ಯಾರನ್ನಾದರೂ ತೀರ್ಪು ಮಾಡುವ ಮೊದಲು, ಒಮ್ಮೆ ನಮ್ಮದೇ ನೆರಳನ್ನು ನೋಡಿ, ಅಲ್ಲಿಯೇ ಬಹಳ ಪ್ರಶ್ನೆಗಳ ಉತ್ತರ ಸಿಗುತ್ತದೆ ಅಲ್ವಾ.....???
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲಾ ಗೊಲ್ಲರ ಸಂಘದ ಚುನಾವಣೆ: ಮೀಸೆ ಮಹಲಿಂಗಪ್ಪ ಗುಂಪಿಗೆ ಭರ್ಜರಿ ಜಯ; ಎದುರಾಳಿ ತಂಡದ ಹಿಂದಿದ್ದ ‘ಕೈ’ ನಾಯಕರಿಗೆ ಮುಖಭಂಗ!ಕರುಳ ಬಳ್ಳಿಯ ತಡವುತ್ತಾ-ಎಚ್.ಕೆ ವಿವೇಕಾನಂದಹಳ್ಳಿ ಧ್ವನಿಗಳು ಭಾಗ-3: ಕುಮಾರ್ ಬಡಪ್ಪಹಳ್ಳಿ ಧ್ವನಿಗಳು ಭಾಗ-2: ಕುಮಾರ್ ಬಡಪ್ಪಹಳ್ಳಿ ಧ್ವನಿಗಳು ಭಾಗ-1: ಕುಮಾರ್ ಬಡಪ್ಪಅಂತರ್ ಜಿಲ್ಲಾ ಮನೆಗಳ್ಳರ ಬಂಧನ: 12.62 ಲಕ್ಷ ಮೌಲ್ಯದ ಚಿನ್ನಾಭರಣ ವಶ​ ರೈತರೊಂದಿಗೆ ಡಿಸಿಎಂ ಶಿವಕುಮಾರ್ ಸಮಾಲೋಚನೆ: ಕಾನೂನು ಚೌಕಟ್ಟಿನಲ್ಲಿ ಸೂಕ್ತ ನಿರ್ದೇಶನದ ಭರವಸೆKEA ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ಆರೋಪ: ಮರುಪರೀಕ್ಷೆಗೆ ಆರ್. ಅಶೋಕ್ ಆಗ್ರಹಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನತೆಗೆ ದ್ರೋಹಬೆಂಗಳೂರು - ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್‌ರೈಲು ಸಂಚಾರ ಆರಂಭ: ಸಚಿವ ವಿ. ಸೋಮಣ್ಣ ಭಾಗಿ